2 ಸಾವಿರ ಮುಖಬೆಲೆಯಕಂತೆ-ಕಂತೆ ನಕಲಿ ನೋಟುಗಳು ಪತ್ತೆ

ಬೆಂಗಳೂರು,ಜು.25-ಕನಕಪುರ ರಸ್ತೆಯೊಂದರ ಪಕ್ಕದಲ್ಲಿ ಖಾಲಿ ಜಾಗದಲ್ಲಿ ಲಕ್ಷಾಂತರ ರೂ ಮೌಲ್ಯದ 2 ಸಾವಿರ ಮುಖಬೆಲೆಯ ನಕಲಿ ನೋಟುಗಳು ಪತ್ತೆಯಾಗಿದ್ದು ಕುತೂಹಲಕ್ಕೆ ಕಾರಣವಾಗಿದೆ.
ತಲಘಟ್ಟಪುರ ಪೊಲೀಸ್ ಠಾಣಾ ವ್ಯಾಪ್ತಿಯ
ಕನಕಪುರ ರಸ್ತೆಯ ಪಕ್ಕದಲ್ಲಿ ಖಾಲಿ ಜಾಗದಲ್ಲಿ ಪ್ಯಾಕಿಂಗ್ ಮಾಡಿದ ಸ್ಥಿತಿಯಲ್ಲಿ ಎರಡು ಬಾಕ್ಸ್ ಗಳನ್ನ ಕಂಡ ಸ್ಥಳೀಯರು ಅನುಮಾನಗೊಂಡ ಸಮೀಪದಲ್ಲೇ ಕರ್ತವ್ಯದಲ್ಲಿದ್ದ ಸಂಚಾರ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.
ಬಳಿಕ ಕೂಡಲೇ ತಲಘಟ್ಟಪುರ ಕಾನೂನು ಸುವ್ಯವಸ್ಥೆ ವಿಭಾಗದ ಪೊಲೀಸರನ್ನು ಕರೆಯಿಸಿ ಬಾಕ್ಸ್ ಬಿಚ್ಚಿ ಪರಿಶೀಲಿಸಿದಾಗ ಕಂತೆ-ಕಂತೆ ನೋಟುಗಳು ದೊರಕಿದ್ದು, ಒಂದು ಕ್ಷಣ ದಂಗಾಗಿದ್ದಾರೆ.
ಸಂಪೂರ್ಣವಾಗಿ ಪರಿಶೀಲಿಸಿದಾಗ ಅವು ನಕಲಿ ನೋಟುಗಳು ಎನ್ನುವುದು ಗೊತ್ತಾಗಿದೆ. ಯಾರೋ ಅಪರಿಚಿತರು ಈ ನೋಟುಗಳನ್ನು ಎಸೆದಿರಬಹುದು. ಸದ್ಯ ಈ ನಕಲಿ ನೋಟುಗಳನ್ನು ವಶಕ್ಕೆ ಪಡೆದುಕೊಂಡು ತನಿಖೆಯನ್ನು ತೀವ್ರಗೊಳಿಸಲಾಗಿದೆ.