2 ವರ್ಷದಿಂದ ನೂತನ ಶೌಚಾಲಯಕ್ಕೆ ಬೀಗ

ನಂಜನಗೂಡು: ಜ.03:- ಶ್ರೀ ಶ್ರೀಕಂಠೇಶ್ವರ ದೇವಾಲಯಕ್ಕೆ ನಾನಾ ಜಿಲ್ಲೆಗಳಿಂದ ಹೆಚ್ಚು ಭಕ್ತಾದಿಗಳು ಆಗಮಿಸುತ್ತಾರೆ ಮತ್ತು ಹುಣ್ಣಿಮೆ ಭಾನುವಾರ ಸೋಮವಾರ ರಜಾ ದಿನಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತಾದಿಗಳು ಬರುತ್ತಾರೆ ಹಾಗೂ ಡಿಸೆಂಬರ್ ಜನವರಿ ಫೆಬ್ರವರಿ ಟೈಮಿನಲ್ಲಿ ನಾನಾ ಜಿಲ್ಲೆಗಳಿಂದ ಶಾಲೆಗಳಿಂದ ವಿದ್ಯಾರ್ಥಿಗಳು ಬರುತ್ತಾರೆ ಇದನ್ನೆಲ್ಲಾ ಅರಿತು ಇದ್ದ ಒಂದೇ ಒಂದು ಶೌಚಾಲಯ ಉಪಯೋಗಿಸುತ್ತಿದ್ದರು ಬಹಳ ತೊಂದರೆಯಾಗುತ್ತಿತ್ತು ಇದನ್ನೇ ಬಳಸಿಕೊಂಡು ಇಂತಹ ಸಮಯದಲ್ಲಿ ಹೆಚ್ಚು ಹಣ ಪಡೆಯುತ್ತಿದ್ದರು ಇದನ್ನು ಕೂಡ ಕೇಳುವರು ಇಲ್ಲ ಹೇಳುವವರು ಇಲ್ಲ ಆದರೂ ಕೂಡ ಸ್ಥಳೀಯ ಶಾಸಕ ಹರ್ಷವರ್ಧನ್ ನೂತನ ಶೌಚಾಲಯವನ್ನು ನಿರ್ಮಿಸಿದ್ದಾರೆ.
ಆದರೆ ಇದು ನಿರ್ಮಾಣವಾಗಿ ಎರಡು ವರ್ಷ ಕಳೆದಿದೆ ಆದರೂ ಉಪಯೋಗಕ್ಕೆ ಭಕ್ತಾದಿಗಳಿಗೆ ನೀಡುತ್ತಿಲ್ಲ ಸಂಬಂಧಪಟ್ಟ ಅಧಿಕಾರಿಗಳು ಭಕ್ತಾದಿಗಳ ಉಪಯೋಗಕ್ಕೆ ನೀಡದೆ ಬೀಗ ಜಡಿದು ಗಬ್ಬು ನಾರುತ್ತಿರುವ ಶೌಚಾಲಯದ ಟೆಂಡರ್ ದಾರ ನಿಗೆ ಅನುಕೂಲ ಮಾಡಿಕೊಡುತ್ತಿದ್ದಾರೆ ಎಂದು ಭಕ್ತಾದಿಗಳು ದೊರಿದ್ದಾರೆ.
ಹೆಚ್ಚಿನ ಸಂಖ್ಯೆಯಲ್ಲಿ ಭಕ್ತಾದಿಗಳು ದೇವಸ್ಥಾನಕ್ಕೆ ಬರುವುದರಿಂದ ಶೌಚಾಲಯದ ಕೊರತೆ ಯಿಂದ ಭಕ್ತಾದಿಗಳು ಮತ್ತು ಪ್ರವಾಸಕ್ಕೆ ಬಂದಿರುವ ವಿದ್ಯಾರ್ಥಿನಿಯರು ವಿದ್ಯಾರ್ಥಿಗಳು ವಿಧಿ ಇಲ್ಲದೆ ಅಕ್ಕಪಕ್ಕ ಸ್ಥಳಗಳಲ್ಲೇ ಮೂತ್ರ ವಿಸರ್ಜನೆ ಮಾಡುವ ಪರಿಸ್ಥಿತಿ ಉಂಟು ಮಾಡಿದ್ದಾರೆ.
ಸ್ಥಳೀಯ ಶಾಸಕರು ದೇವಸ್ಥಾನದ ಅಭಿವೃದ್ಧಿಗಾಗಿ ಪಣತೊಟ್ಟು ಹೆಚ್ಚಿನ ಅನುದಾನ ತಂದು ಅಭಿವೃದ್ಧಿಪಡಿಸುತ್ತಿದ್ದಾರೆ ಅಧಿಕಾರಿಗಳು ಮಾತ್ರ ನಿರ್ಮಿಸಿರುವ ನೂತನ ಶೌಚಾಲಯವನ್ನು ಬೀಗ ತೆರೆಯದೆ ಕಂಡು ಕಾಣದೆ ಇರುವುದನ್ನು ಕಂಡು ಭಕ್ತಾದಿಗಳು ಅಧಿಕಾರಿಗಳು ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ ತಕ್ಷಣ ನೂತನ ಶೌಚಾಲಯ ತೆರೆದು ಭಕ್ತಾದಿಗಳ ಉಪಯೋಗಕ್ಕೆ ನೀಡಬೇಕೆಂದು ಭಕ್ತಾದಿಗಳು ಆಗ್ರಹಿಸಿದ್ದಾರೆ.