2 ವರ್ಷಗಳಲ್ಲಿ ಅಭಿವೃದ್ದಿಯ ಪರ್ವ : ಡಾ. ಅಜಯಸಿಂಗ್

ಜೇವರ್ಗಿ :ಜ.27: ಜೇವರ್ಗಿ ಕ್ಷೇತ್ರದಲ್ಲಿ ಇನ್ನು ಎರಡು ವರ್ಷಗಳ ಕಾಲ ಅಭಿವೃದ್ದಿಯ ಕಾರ್ಯಗಳು ನಡೆಯಲಿವೆ. ಶೈಕ್ಷಣಿಕವಾಗಿ ಮತ್ತು ಅಭೀವೃದ್ದಿ ಕಾರ್ಯಗಳನ್ನ ಮಾಡುವುದರ ಮುಖಾಂತರ ಜೇವರ್ಗಿ ಅಭಿವೃದ್ದಿಯ ಪರ್ವ ಆಗಲಿದೆ ಎಂದು ಕೆ ಕೆ ಆರ್ ಡಿ ಬಿ ಅಧ್ಯಕ್ಷ ಹಾಗೂ ಶಾಸಕ ಡಾ. ಅಜಯಸಿಂಗ್ ತಿಳಿಸಿದರು.

ಪಟ್ಟಣದ ತಾಲೂಕ ಕ್ರೀಡಾಂಗಣದಲ್ಲಿ ತಾಲೂಕ ಆಡಳಿತದ ವತಿಯಿಂದ 75 ನೇ ಗಣರಾಜ್ಯೋತ್ಸವ ದಿನಾಚರಣೆಯನ್ನ ಸಂಭ್ರಮದಿಂದ ವಿವಿದ ಸಾಂಸ್ಕøತಿಕ ಹಾಗೂ ಕ್ರೀಡೆಗಳನ್ನ ನಡೆಸುವುದರ ಮುಲಕ ವಿಶೇಷವಾಗಿ ಆಚರಿಸಲಾಯಿತು.

ದ್ವಾಜಾರೋಹಣವನ್ನು ನೇರವೇರಿಸಿ ಮಾತನಾಡಿದ ಶಾಸಕ ಡಾ. ಅಜಯಸಿಂಗ್ ತಾಲೂಕಿನಲ್ಲಿ ಸುಮಾರು 10 ರಿಂದ 15 ಕೋಟಿ ವೆಚ್ಚದಲ್ಲಿ ಕೆ ಕೆ ಆರ್ ಡಿ ಬಿ ಅನುದಾನದಲ್ಲಿ ಕರ್ನಾಟಕ ಪಬ್ಲಿಕ್ ಸ್ಕೂಲ್ ಕಾಮಗಾರಿಯನ್ನ ಪ್ರಾರಂಭಿಸಲಾಗುವುದು. 26 ಕೋಟಿ ರೂ ವೆಚ್ಚದಲ್ಲಿ ತಾಯಿ ಮತ್ತು ಮಕ್ಕಳ ಆಸ್ಪತ್ರೆಯ ಕಟ್ಟಡವನ್ನ ಯಡ್ರಾಮಿಯಲ್ಲಿ ಪ್ರಾರಂಬಿಸಲಾಗುವುದು. ಮೊದಲ ಹಂತದಲ್ಲಿ 10 ಕೋಟಿ ರೂ ಬಿಡುಗಡೆ ಮಾಡಲಾಗುವುದು. 15 ಕೋಟಿ ರೂ ವೆಚ್ಚದಲ್ಲಿ ಯಡ್ರಾಮಿಯ ಮಿನಿ ವಿಧಾನಸೌಧದ ಕಟ್ಟಡ ಪ್ರಾರಂಭಿಸಲಾಗುವುದು. ಹರವಾಳದಲ್ಲಿ ಬ್ರಿಡ್ಜ್ ಕಂ. ಬ್ಯಾರೆಜ್ 40 ಕೋಟಿ ವೆಚ್ಚದಲ್ಲಿ ಕಾಮಗಾರಿ ನಡೆಯಲಿದೆ. ಮಲ್ಲಾಬಾದ ಏತ ನೀರಾವರಿಗೆ 330 ಕೋಟಿ ವೆಚ್ಚ ಬಿಡುಗಡೆಯಾಗಲಿದೆ.

ತಾಲೂಕಿನ 156 ಹಳ್ಳಿಗಳಲ್ಲಿನ ನೀರಿನ ಸಮಸ್ಯೆಯನ್ನ ಬಗೆಹರಿಸಲು ಯಾಳವಾರ ಸೇರಿದಂತೆ 21 ಹಳ್ಳಿಗಳಿಗೆ 79 ಕೋಟಿ, ಕೂಡಿ ಸೇರಿದಂತೆ 24 ಹಳ್ಳಿಗಳಿಗೆ ಅಂದಾಜು 70 ಕೋಟಿ, ಆಲೂರ ಸೇರಿದಂತೆ 100 ಹಳ್ಳಿಗಳಿಗೆ 380 ಕೋಟಿ ರೂ ವೆಚ್ಚದಲ್ಲಿ ಮಲ್ಟಿ ವಿಲೇಜ್ ವಾಟರ್ ಸ್ಕೀಮ್ ಕಾಮಗಾರಿ ಪ್ರಾರಂಭಿಸಲಾಗುವುದು. ಬಿಳವಾರ ಗ್ರಾಮದಲ್ಲಿ 20 ಕೋಟಿಯ ಮೂರಾರ್ಜಿ ಶಾಲೆ. 103 ಕೋಟಿ ವೆಚ್ಚದಲ್ಲಿ ಒಳ ಚರಂಡಿ ಕಾಮಗಾರಿ ಪ್ರಾರಂಬಿಸಲಾಗುವುದ. 50 ಶಾಲೆಗಳನ್ನ ಮಾದರಿ ಶಾಲೆಯನ್ನಾಗಿ ಪರಿವರ್ತನೆ ಮಾಡಲಾಗುವುದು ಎಂದರು.

ನಂತರ ತಾಲೂಕ ದಂಡಾಧೀಕಾರಿ ಮಲ್ಲಣ್ಣ ಯಲಗೊಡ ಮಾತನಾಡಿ ಬಾಬಾ ಸಾಹೇಬ್ ಅಂಬೆಡ್ಕರ್ ರವರು ಸಂವಿಧಾನವನ್ನು ರಚಿಸಿದ್ದಾರೆ. ಸಂವಿಧಾನದಿಂದ ದೇಶದಲ್ಲಿ ಶಾಂತಿ ಸುಭದ್ರತೆಯಿಂದ ಜನರು ಬದುಕುತ್ತಿದ್ದಾರೆ. ಈ ದೇಶದ ಪ್ರತಿಯೋಬ್ಬರು ಕೂಡ ಸಂವಿಧಾನವನ್ನು ರಕ್ಷಿಸಬೇಕು. ಸಂವಿಧಾನದ ಅಡಿಯಲ್ಲಿ ಬದುಕಬೇಕು. ಶಿಕ್ಷಣಕ್ಕೆ ಹೆಚ್ಚಿನ ಮಹತ್ವವನ್ನು ನೀಡಬೇಕು ಎಂದರು.

ಪಟ್ಟಣದಲ್ಲಿ 20 ಅಡಿ ಎತ್ತರದ ಡಾ. ಬಾಬಾ ಸಾಹೇಬ್ ಅಂಬೇಡ್ಕರ್ ರವರ ಪ್ರತಿಮೆಯನ್ನ ಸ್ಥಾಪಿಸಲಾಗುತ್ತದೆ. ಡಾ. ಅಜಯಸಿಂಗ್

ಈ ಸಂದರ್ಭದಲ್ಲಿ ತಾಲೂಕ ಅಧೀಕಾರಿಗಳಾದ ಪ್ರಸನಕುಮಾರ ಮೋಘೆಕರ್, ಅಬ್ದುಲ್ ನಬಿ, ಶಂಭುಲಿಂಗ ದೇಸಾಯಿ, ನಾಗಮುರ್ತಿ ಶಿಲವಂತ, ಗುಡುಲಾಲ ಶೇಕ್, ಉಪನ್ಯಾಸಕ ಡಾ. ಗಿರೀಶ ಕೆ ರಾಠೋಡ, ಅಧೀಕಾರಿಗಳಾದ ಅಂಬವ್ವ ಪೂಜಾರಿ, ಸುಮಂಗಲಾ ಹೂಗಾರ, ಶೋಭಾ ಸಜ್ಜನ್, ತಜಮುಲ್ ಹುಸೇನ್, ಶಿವಾನಂದ ಸಾಹೂ, ಸಿದ್ದಣ್ಣ ರಾಜಾಪೂರ, ರೇವಣಸಿದ್ದಪ್ಪ, ಸುರೇಶ ಚೌವ್ಹಾಣ, ಡಾ. ಸಿದ್ದು ಪಾಟೀಲ್, ರಾಜೇಶಕರ ಪಾಟೀಲ್, ಸಂಗುಮೇಸ ಕೊಂಬಿನ್, ಸಾಯಬಣ್ಣ ಕಲ್ಯಾಣಕರ್, ಹುಲಕಂಠರಾಯ ಪೂಜಾರಿ ಸೇರಿದಂತೆ ರಾಜಕೀಯ ಮುಖಂಡರು ಹಾಗೂ ಶಿಕ್ಷಕರು, ಮುದ್ದು ಮಕ್ಕಳು ಉಪಸ್ಥೀತರಿದ್ದರು. ಗುರುಶಾಂತಪ್ಪ ಚಿಂಚೋಳ್ಳಿ ನೀರುಪಿಸಿದರು.