2 ಮಕ್ಕಳ ಕಣ್ಣು ಕಪ್ಪು ಶಿಲೀಂಧ್ರಕ್ಕೆ ಆಹುತಿ

ಬೆಂಗಳೂರು, ಜೂ.೩- ರಾಜ್ಯದಲ್ಲಿ ದಿನೇ ದಿನೇ ಕಪ್ಪು ಶಿಲೀಂಧ್ರ ರೋಗ ಹೆಚ್ಚಾಗುತ್ತಿದ್ದು ರಾಜ್ಯದಲ್ಲಿ ಇದುವರೆಗೆ ೧೩೭೦ ಜನರಲ್ಲಿ ಕಾಣಿಸಿಕೊಂಡಿದೆ.
ಅದರಲ್ಲೂ ಬೆಂಗಳೂರಿನಲ್ಲಿ ಕಪ್ಪು ಶಿಲೀಂಧ್ರ ಸಮಸ್ಯೆ ಇಬ್ಬರು ಮಕ್ಕಳ ಕಣ್ಣನ್ನು ತೆಗೆದುಕೊಂಡಿರುವ ಆಘಾತ ಕಾರಿ ಘಟನೆ ನಡೆದಿದೆ.
ಬೆಂಗಳೂರಿನ ಲೇಡಿ ಕರ್ಜನ್ ಆಸ್ಪತ್ರೆಯಲ್ಲಿ ಬಳ್ಳಾರಿ ಮೂಲದ ೧೪ ವರ್ಷದ ಬಾಲಕಿ, ಚಿತ್ರದುರ್ಗದಲ್ಲಿ ೧೧ ವರ್ಷದ ಬಾಲಕ ಕಪ್ಪು ಶಿಲಿಂದ್ರ ಸಮಸ್ಯೆ ಕಣ್ಣು ಮತ್ತು ಮೆದುಳಿಗೆ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಅವರ ಒಂದು ಕಣ್ಣನ್ನು ತೆಗೆಯಲಾಗಿದೆ
ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಈ ಕುರಿತು ಮಾಹಿತಿ ನೀಡಿದ್ದು ಸದ್ಯ ಬೆಂಗಳೂರಿನಲ್ಲಿ ನಾಲ್ಕು ಮಕ್ಕಳು ಬ್ಲಾಕ್ ಪಂಗಸ್ ರೋಗದಿಂದ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ತಿಳಿಸಿದೆ.
೧, ೨, ೪ ವರ್ಷದ ಗಂಡು ಮಗು ಮತ್ತು ೧೪ ವರ್ಷದ ಬಾಲಕಿ ರೋಗದಿಂದ ವಿವಿಧ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಉಲಯುತ್ತಿದ್ದಾರೆ.೫ ವರ್ಷದ ಒಳಗಿರುವ ಮದುಮೇಹಿ ಮಕ್ಕಳಲ್ಲಿ ರೋಗ ಕಂಡು ಬಂದಿದೆ ಎಂದು ವೈದ್ಯರು ತಿಳಿಸಿದ್ದಾರೆ.
ಮಣಿಪಾಲ್, ವಿಕ್ರಂ ಆಸ್ಪತ್ರೆಯಲ್ಲಿ ಮಕ್ಕಳು ಚಿಕಿತ್ಸೆ ಪಡೆಯುತ್ತಿದ್ದಾರೆ ಹಳೆ ವಿಮಾನ ನಿಲ್ದಾಣ ರಸ್ತೆಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಬಗ್ಗೆ ಯಾವುದೇ ಮಾಹಿತಿ ಲಭ್ಯವಾಗಿಲ್ಲ ಎಂದು ಇಲಾಖೆಯ ಅಧಿಕಾರಿಗಳು ತಿಳಿಸಿದ್ದಾರೆ.
ಬೆಂಗಳೂರಿನ ಮಣಿಪಾಲ್ ಆಸ್ಪತ್ರೆಯ ವೈದ್ಯ ಡಾ. ಸುನಿಲ್ ಕಾರಂತ್ ಪ್ರತಿಕ್ರಿಯಿಸಿ ಖುಷಿಯಿಂದ ಸಮಸ್ಯೆ ಇತ್ತೀಚಿಗೆ ಮಕ್ಕಳಲ್ಲಿ ಹೆಚ್ಚಾಗಿ ಕಂಡು ಬರುತ್ತಿದೆ ಇದು ಆತಂಕಕಾರಿ ಬೆಳವಣಿಗೆ ಎಂದು ಕಳವಳ ವ್ಯಕ್ತಪಡಿಸಿದ್ದಾರೆ.
ಜೊತೆಗೆ ದೊಡ್ಡವರಲ್ಲಿ ಕೂಡ ಸೋಂಕು ಹೆಚ್ಚು ಕಾಣಿಸಿಕೊಳ್ಳುತ್ತಿರುವುದು ರಾಜ್ಯ ಸರ್ಕಾರವನ್ನು ಆತಂಕಕ್ಕೆ ಸಿಲುಕಿಸುವಂತೆ ಮಾಡಿದೆ.