2 ದಿನ ಮುಂಗಾರು ವಿಳಂಬ‌ ಸಾದ್ಯತೆ..

ನವದೆಹಲಿ, ಮೇ 30- ಕೇರಳ ಕರಾವಳಿ ತೀರಕ್ಕೆ ಜೂನ್ 1 ಅಪ್ಪಳಿಸಬೇಕಾಗಿದ್ದ ಮುಂಗಾರು ಎರಡು ದಿನ ವಿಳಂಬವಾಗುವ ಸಾಧ್ಯತೆಗಳಿವೆ ಎಂದು ಭಾರತೀಯ ಹವಾಮಾನ ಇಲಾಖೆ ತಿಳಿಸಿದೆ.

ನಿಗದಿಗಿಂತ ಎರಡು ದಿನ ವಿಳಂಬವಾಗಿ ಜೂನ್3ರಂದು ಕರಾವಳಿಗೆ ಮುಂಗಾರು ಅಪ್ಪಳಿಸಲಿದೆ ಎಂದು ಅವಮಾನ ಇಲಾಖೆಯ ಹಿರಿಯ ಅಧಿಕಾರಿಗಳು ತಿಳಿಸಿದ್ದಾರೆ.

ಜೂನ್ ಒಂದರಂದು ಕೇರಳ ಕರಾವಳಿ ಭಾಗದಲ್ಲಿ ಮುಂಗಾರು ಅಪ್ಪಳಿಸಲಿದೆ ಎಂದು ಭಾರತೀಯ ಹವಮಾನ ಇಲಾಖೆ ಮುನ್ಸೂಚನೆ ನೀಡಿತ್ತು ಆದರೆ ಇದೀಗ ಮತ್ತೆ ಎರಡು ದಿನ ವಿಳಂಬವಾಗಿ ಮತ್ತೆ ಮೂರರಂದು ಮುಂಗಾರು ಅಪ್ಪಳಿಸುವ ಸಾಧ್ಯತೆ ಇದೆ.

5 ದಿನಗಳ ಕಾಲ ಬಾರಿ ಮಳೆ ಸಾದ್ಯತೆ:

ಮುಂದಿನ ಐದು ದಿನಗಳ ಕಾಲ ಕೇರಳ ಮತ್ತು ಮಾಹೆಯಲ್ಲಿ ಭಾರಿ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಅಂದಾಜು ಮಾಡಿದೆ.

ಜೂನ್ ಒಂದರಿಂದ ನೂರರ ಅವಧಿಯಲ್ಲಿ ಮುಂಗಾರು ಅಪ್ಪಳಿಸಿದ ನಂತರ ಐದು ದಿನಗಳ ಕಾಲ ಮಳೆ ಸುರಿಯುವ ಸಾಧ್ಯತೆಗಳಿವೆ.

ಕರಾವಳಿ ಕರ್ನಾಟಕದಲ್ಲಿ ಜೂನ್ ಒಂದರಿಂದ ಮೂರು ಹಾಗೂ ದಕ್ಷಿಣ ಕರ್ನಾಟಕದಲ್ಲಿ ಜೂನ್ ಎರಡರಿಂದ ಮೂರರ ಅವಧಿಯಲ್ಲಿ ಭಾರಿ ಮಳೆಯಾಗುವ ಸಾಧ್ಯತೆಗಳಿವೆ ಎಂದು ಕೂಡ ಅಂದಾಜು ಮಾಡಿದೆ.

ಕರ್ನಾಟಕದ ಕರಾವಳಿ ತೀರ ಪ್ರದೇಶ ಸೇರಿದಂತೆ ಪಂಜಾಬ್ ಹಾಗೂ ಹಲವು ರಾಜ್ಯಗಳಲ್ಲಿ ಕಟ್ಟೆಚ್ಚರ ಇರುವಂತೆ ಹವಮಾನ ಇಲಾಖೆ ರಾಜ್ಯ ಸರ್ಕಾರಗಳಿಗೆ ಸೂಚನೆ ನೀಡಿದೆ