2 ದಿನ ಪ್ರಶಿಕ್ಷಣ ವರ್ಗ ಕಾರ್ಯಾಗಾರ ಯಶಸ್ವಿ

ಮಾನ್ವಿ.ನ-13 ಬಿಜೆಪಿಯಿಂದ 2ದಿನಗಳ ಪ್ರಶಿಕ್ಷಣ ವರ್ಗ ಕಾರ್ಯಾಗಾರ ಯಶಸ್ವಿಗೊಂಡಿತು ಎಂದು ಬಿಜೆಪಿ ಮಂಡಲದ ಅಧ್ಯಕ್ಷರಾದ ಮಲ್ಲಿಕಾರ್ಜುನ ಜಕ್ಕಲದಿನ್ನಿ ಹೇಳಿದರು.
ಮಾನ್ವಿ ಬಿಜೆಪಿ ಮಂಡಲ ವತಿಯಿಂದ ಪಟ್ಟಣದ ಸಂಜೀವರಾಯ ದೇವಸ್ಥಾನದ ಕಲ್ಯಾಣ ಮಂಟಪದಲ್ಲಿ ಪಂಡಿತ್ ದೀನ್ ದಯಾಳ್ ಉಪಾಧ್ಯಾಯ ಎರಡು ದಿನದ ಪ್ರಶಿಕ್ಷಣ ವರ್ಗ ಕಾರ್ಯಾಗಾರ ನಡೆಯಿತು.
ಮೊದಲನೆ ದಿನದ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಮಂಡಲ ಅಧ್ಯಕ್ಷರಾದ ಮಲ್ಲಿಕಾರ್ಜುನ ಜಕ್ಕಲದಿನ್ನಿ ವಹಿಸಿ ಮಾತನಾಡಿದ ಅವರು ಪಕ್ಷದ ಸ್ಥಾಪನೆ ಮತ್ತು ಇತಿಹಾಸ, ಇಂದಿನ ಭಾರತದ ಮುಖ್ಯ ವಿಚಾರ, ಭಾರತದ ರಾಜಕಾರಣ ಎಂದರು. ಮಾಜಿ ಎಂಎಲ್‌ಸಿ ಎನ್. ಶಂಕ್ರಪ್ಪ ಉದ್ಘಾಟನೆ ಮಾಡಿ ಚಾಲನೆ ನೀಡಿದರು. ಅತಿಥಿಗಳಾಗಿ ಮಾಜಿ ಶಾಸಕರಾದ ಬಸನಗೌಡ ಬ್ಯಾಗವಾಟ, ಗಂಗಾಧರ ನಾಯಕ, ಶಂಕರಗೌಡ ಹರವಿ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಶರಣಪ್ಪಗೌಡ ನಕ್ಕುಂದಿ, ಸಂಚಾಲಕರಾದ ಮಲ್ಲನಗೌಡ ನಕ್ಕುಂದಿ, ಗುರುಗೌಡ ಕಣ್ಣೂರು, ಭೀಮಣ್ಣ ಹರವಿ ಹಾಗೂ ಮಂಡಲ ಪದಾಧಿಕಾರಿಗಳು ಭಾಗವಹಿಸಿದ್ದರು.
ಪಕ್ಷದ ಪದಾಧಿಕಾರಿಗಳು, ಮುಖಂಡರು ವಿವಿಧ ಗೋಷ್ಠಿಗಳ ಕುರಿತು ಮಾತನಾಡಿದರು. ಪಕ್ಷದ ಸ್ಥಾಪನೆ ಮತ್ತು ಇತಿಹಾಸ, ಇಂದಿನ ಭಾರತದ ಮುಖ್ಯ ವಿಚಾರ, ಭಾರತದ ರಾಜಕಾರಣ, ಬಿಜೆಪಿಯ ಜವಾಬ್ದಾರಿಗಳು, ಭಾರತದ ರಕ್ಷಣಾ ಸಾಮರ್ಥ್ಯದ ಗೋಷ್ಠಿ ಕುರಿತು ಮುಖಂಡರಾದ ಹರವಿ ನಾಗನಗೌಡ, ತ್ರಿವಿಕ್ರಮ ಜೋಶಿ, ಮಧ್ವಾಚಾರ್ಯ, ಜಿಲ್ಲಾ ಕಾರ್ಯದರ್ಶಿ ಕೆ.ಎಸ್. ಕುಮಾರಸ್ವಾಮಿ ಮಾತನಾಡಿದರು.
ಎರಡನೇ ದಿನದಲ್ಲಿ ಶ್ಯಾಮ್ ಪ್ರಕಾಶ್ ಮುಖರ್ಜಿ ,ಶಿವಬಸಪ್ಪ ಮಾಲಿ ಪಾಟೀಲ್, ಜಗದೀಶ್ ವಕೀಲರು, ಶ್ರೀನಿವಾಸ ರೆಡ್ಡಿ, ಎನ್ .ಶಿವನಗೌಡ ಗೋರೆಬಾಳ ಉಪನ್ಯಾಸ ನೀಡಿ, ರಾಜ್ಯ ಸರ್ಕಾರ ಮತ್ತು ಕೇಂದ್ರ ಸರ್ಕಾರದ ವಿವಿಧ ಯೋಜನೆಗಳ ಹಾಗೂ ಸಾಧನೆ ಬಗ್ಗೆ ಮಾತನಾಡಿದರು. ಪಕ್ಷದ ಅನೇಕ ಮುಖಂಡರು, ಪದಾಧಿಕಾರಿಗಳು, ಕಾರ್ಯಕರ್ತರು ಭಾಗವಹಿಸಿದ್ದರು.