2 ಕೊ. ವೆಚ್ಚದ ಕ್ರೀಡಾಂಗಣ ಕಾಮಗಾರಿ ಪರಿಶೀಲಿಸಿದ ದರ್ಶನಾಪುರ

ಶಹಾಪುರ:ಮೇ.28:ಕಳೆದ 2019-20ನೇ ಸಾಲಿನ ಕೆಕೆಆರ್‍ಡಿಬಿ ಅನುದಾನದಲ್ಲಿ ರೂ.2ಕೋಟಿ ವೆಚ್ಚದಲ್ಲಿ ನಿರ್ಮಿಸಲಾಗುತ್ತಿರುವ.ನಗರದ ಕಾಲೇಜು ಒಳಾಂಗಣ ಕ್ರೀಡಾಂಗಣ ಕಾಮಗಾರಿಯನ್ನು ಶಾಸಕ ಶರಣಬಸಪ್ಪಗೌಡ ದರ್ಶನಾಪುರ ಭೇಟಿ ನೀಡಿ ಪರಿಶೀಲಿಸಿದರು.
ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿ 2019-20ನೇ ಸಾಲಿನ ಕೆಕೆಆರ್‍ಡಿಬಿ ಅನುದಾನದಲ್ಲಿ ಮಂಜೂರಿಯಾದ ರೂ.2ಕೋಟಿ ವೆಚ್ಚದಲ್ಲಿ ಸಕಲ ಸುಸಜ್ಜಿತವಾಗಿರುವ ಒಳಾಂಗಣ ಕ್ರೀಡಾಂಗಣ ನಿರ್ಮಿಸಲಾಗುತ್ತಿದೆ. 110ಚದುರ ಅಡಿ ವಿಸ್ತೀರ್ಣ ಹೊಂದಿದ್ದು 13ಮೀಟರ್ ಎತ್ತರವಾಗಿದೆ. ಮಹಿಳಾ ಮತ್ತು ಪುರುಷ ಕ್ರೀಡಾಪಟುಗಳಿಗಾಗಿ ಪ್ರತ್ಯೇಕ ಶೌಚಾಲಯ, ಕುಡಿಯುವ ನೀರಿನ ವ್ಯವಸ್ಥೆ, ವಿಶ್ರಾಂತಿ ಗೃಹ ಸೌಲಭಗಳನ್ನು ಒದಗಿಸಲಾಗಿದೆ. ಜಿಲ್ಲಾಮಟ್ಟದಲ್ಲಿಯೇ ಸಕಲ ಸೌಲಭ್ಯವಿರುವ ಪ್ರಕೃತಿಯ ಮಡಿಲಲ್ಲಿಯ ಕ್ರೀಡಾಂಗಣ ಇದಾಗಲಿದೆ ಎಂದರು. ಮುಂದಿನ ದಿನಗಳಲ್ಲಿ ತಾಲೂಕಿನ ಕ್ರೀಡಾಪಟುಗಳಿಗೆ ಅವಶ್ಯಕ ಸಾಮಗ್ರಿಗಳನ್ನು ಪೂರೈಸುವುದು ಹಾಗೂ ಕ್ರೀಡಾಂಗಣಗಳ ನಿರ್ವಹಣೆಯನ್ನು ತಾಲೂಕು ಮಟ್ಟದ ಅಧಿಕಾರಿಗಳ ಸಮಿತಿಗೆ ವಹಿಸಿಕೊಡಲಾಗುವುದು ಎಂದು ತಿಳಿಸಿದರು. ಸರಕಾರಿ ಪದವಿ ಕಾಲೇಜು ಆವರಣದಲ್ಲಿ ಈಗಾಗಲೇ ರೂ.2ಕೋಟಿ ವೆಚ್ಚದ ಕಾಮಗಾರಿ ಮುಕ್ತಾಯದ ಹಂತದಲ್ಲಿದೆ. ಕ್ರೀಡಾಂಗಣದ ಸುತ್ತ ಜನತೆಯ ಬಹುದಿನದ ಬೇಡಿಕೆಯಂತೆ ವಾಯುವಿಹಾರಕ್ಕಾಗಿ 5ಮೀಟರ್ ಅಗಲದ ವಾಕಿಂಗ್ ಪಾತ್ ನಿರ್ಮಿಸಲು ರೂ.45ಲಕ್ಷ ಮಂಜೂರಿಯಾಗಿದೆ. ಶೀಘ್ರದಲ್ಲಿಯೇ ಕಾಮಗಾರಿ ಕೈಗೆತ್ತಿಕೊಳ್ಳಲಾಗುವುದು. ತಾಲೂಕಿನ ಕ್ರೀಡಾಪಟುಗಳು ಸಾರ್ವಜನಿಕರು ಕ್ರೀಡಾಂಗಣಗಳಲ್ಲಿ ಸ್ವಚ್ಛತೆ ಕಾಪಾಡಿಕೊಂಡು ಸದುಪಯೋಗಪಡಿಸಿಕೊಳ್ಳಬೇಕು. ಕಾಮಗಾರಿಯ ಗುಣಮಟ್ಟವನ್ನು ಕಾಪಾಡುವಂತೆ ಲೋಕೋಪಯೋಗಿ ಇಲಾಖೆ ಎಂಜಿನೀಯರ್ ಮೋದಿನಸಾಬ್ ಅವರಿಗೆ ಶಾಸಕ ದರ್ಶನಾಪುರ ಸೂಚಿಸಿದರು. ಮುಖಂಡ ಅಜೀಂ ಇದ್ದರು.


ಕೊವಿಡ್ ಅಲೆಯಿಂದ ಹಳ್ಳಿ ಜನರು ಜಾಗ್ರತಾರಬೇಕು.ಗ್ರಾಮದ ಸ್ವಚ್ಚತೆಯತ್ತ ಗಮನ ಹರಿಸಬೇಕು.ಪ್ರತಿ ವಾರಕ್ಕೊಮ್ಮೆಯಾದರೂ ಗ್ರಾ,ಪಂ, ಆಡಳಿತ ಆಯಾ ಗ್ರಾಮಗಳಲ್ಲಿ ಸ್ಯಾನಿಟೈಜರ್ ಸಿಂಪರಣೆ ಮಾಡಬೇಕು. ಹಬ್ಬ ದಿಬ್ಬಣಗಳಲ್ಲಿ ಹೆಚ್ಚು ಜನ ಭಾಗಿಯಾಗದೆ, ಸರ್ಕಾರದ ನೀಯಮಗಳ ಪಾಲನೆಯಲ್ಲಿ ತೊಡಗಬೇಕು, ಈಗಾಗಲೆ ಅನೇಕ ಮುಗ್ದಜನರು ಕೊರಾನ್ ಮಾಹಾಮಾರಿಗೆ ಬಲಿಯಾಗಿದ್ದಾರೆ. ನಿಮ್ಮ ರಕ್ಷಣೆ ನಿಮ್ಮ ಕೈಯಲ್ಲಿದೆ ಸದುಪಯೋಗಪಡಿಸಕೊಳ್ಳಬೇಕು.ಮಾಸ್ಕ, ಸಾಮಾಜಿಕ ಅಂತರಗಳು ಕಡ್ಡಾಯವಾಗಿ ಪಾಲನೆ ಮಾಡಿದಲ್ಲಿ ಹೆಮ್ಮಾರಿ ರೋಗ ಮುಕ್ತಿಯಾಗುತ್ತದೆ. ಆರೊಗ್ಯ ರಕ್ಷಣೆ ನಿಮ್ಮಗಳ ಗುರಿಯಾಗಲಿ.

             ಶರಣಬಸ್ಸಪ್ಪಗೌಡ ದರ್ಶನಾಪುರ
           ಮಾಜಿ ಮಂತ್ರಿಗಳು ಹಾಲಿ ಶಾಸಕರು ಶಹಾಪುರ