2 ಕೆಜಿ, 170 ಗ್ರಾಂ.ಗಾಂಜಾ ಜಪ್ತಿ

ಕಲಬುರಗಿ,ಜು.14-ನಗರದ ಟೆಕ್ ಬುರಾನ್ ದರ್ಗಾ ಹತ್ತಿರದ ಸಾರ್ವಜನಿಕ ಸ್ಥಳದಲ್ಲಿ ಅಕ್ರಮವಾಗಿ ಗಾಂಜಾ ಮಾರಾಟ ಮಾಡುತ್ತಿದ್ದ ಬಾಪು ನಗರದ ಪವನ್ ಬಾಬುರಾವ ಉಪಾಧ್ಯ (20) ಮತ್ತು ಒಬ್ಬ ಕಾನೂನು ಸಂಘರ್ಷಕ್ಕೆ ಒಳಪಟ್ಟ ಬಾಲಕ ಸೇರಿ ಇಬ್ಬರನ್ನು ಬಂಧಿಸಿರುವ ಬ್ರಹ್ಮಪುರ ಪೊಲೀಸರು, 16 ಸಾವಿರ ರೂ.ಮೌಲ್ಯದ 2 ಕೆಜಿ, 170 ಗ್ರಾಂ.ಗಾಂಜಾ ಮತ್ತು 800 ರೂ.ನಗದು ಜಪ್ತಿ ಮಾಡಿದ್ದಾರೆ.
ಉಪ ಪೊಲೀಸ್ ಆಯುಕ್ತರಾದ ಅಡ್ಡೂರು ಶ್ರೀನಿವಾಸಲು, ಐ.ಎ.ಚಂದ್ರಪ್ಪ, ದಕ್ಷಿಣ ಉಪ ವಿಭಾಗದ ಎಸಿಪಿ ಭೂತೇಗೌಡ ಅವರ ಮಾರ್ಗದರ್ಶನದಲ್ಲಿ ಬ್ರಹ್ಮಪುರ ಪಿಐ ಸಚಿನ್ ಚಲವಾದಿ ಅವರ ನೇತೃತ್ವದಲ್ಲಿ ಪಿಎಸ್‍ಐ ಶಿವಶರಣಪ್ಪ, ಸಿಬ್ಬಂದಿಗಳಾದ ಅಶೋಕ, ಕೇಶುರಾಯ, ಶಿವಶರಣಪ್ಪ ಅವರು ಪಂಚರೊಂದಿಗೆ ದಾಳಿ ನಡೆಸಿ ಅಕ್ರಮವಾಗಿ ಗಾಂಜಾ ಮಾರಾಟ ಮಾಡುತ್ತಿದ್ದ ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಬ್ರಹ್ಮಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.