2 ಐಷರಾಮಿ ಬಂಗಲೆ ಖರೀದಿಸಿದ ಆಲಿಯಾ

ಮುಂಬೈ,ಏ.೨೫-ಬಾಲಿವುಡ್ ನಟಿ ಆಲಿಯಾ ಭಟ್ ತಮ್ಮ ಅಕ್ಕನಿಗಾಗಿ ದುಬಾರಿ ಬೆಲೆಯ ಬಂಗಲೆ ಗಿಫ್ಟ್ ಮಾಡುವ ಮೂಲಕ ಸುದ್ದಿಯಲ್ಲಿದ್ದಾರೆ.
ಕಪೂರ್ ಕುಟುಂಬದ ಸೊಸೆಯಾಗಿ ಆಲಿಯಾ ಭಟ್ ವೈಯಕ್ತಿಕ ಜೀವನದಲ್ಲಿ ಬ್ಯುಸಿಯಾಗಿದ್ದಾರೆ. ನಟನೆಯಲ್ಲಿ ಗಳಿಸಿದ ತನ್ನ ಉಳಿತಾಯದಲ್ಲಿ ಆಲಿಯಾ ಭಟ್ ಅವರು ಮುಂಬೈನ ಬಾಂದ್ರದಲ್ಲಿ ದುಬಾರಿ ಮನೆ ಖರೀದಿ ಮಾಡಿದ್ದಾರೆ. ಇದರ ಬೆಲೆ ೩೭.೮೦ ಕೋಟಿ ರೂಪಾಯಿ. ಮನೆ ಖರೀದಿಸಿ ಸಹೋದರಿ ಶಹೀನ್ ಭಟ್‌ಗೆ ಅವರು ಉಡುಗೊರೆಯಾಗಿ ನೀಡಿದ್ದಾರೆ ಎಂದು ವರದಿ ಆಗಿದೆ.
ಆದರೆ ಈ ಬಗ್ಗೆ ನಟಿ ಆಲಿಯಾ ಭಟ್ ಅಧಿಕೃತವಾಗಿ ಮಾಹಿತಿ ನೀಡಿಲ್ಲ. ಆದರೆ ಆಲಿಯಾ ಖರೀದಿಸಿರುವ ಫ್ಲಾಟ್ ೨,೪೯೭ ಚದರ ಅಡಿ ಇದೆ. ಏಪ್ರಿಲ್ ೧೦ರಂದು ಈ ಡೀಲ್ ನಡೆದಿದೆ. ಆಲಿಯಾ ಭಟ್ ಅವರು ೨.೨೬ ಕೋಟಿ ರೂಪಾಯಿ ಸ್ಟಾಂಪ್ ಡ್ಯೂಟಿ ಪಾವತಿಸಿದ್ದಾರೆ. ಇನ್ನು ಆಲಿಯಾ ಭಟ್ ಅವರು ಎರಡು ಫ್ಲಾಟ್‌ಗಳನ್ನು ಶಹೀನ್ ಭಟ್‌ಗೆ ನೀಡಿದ್ದಾರೆ. ಇದರ ಬೆಲೆ ೭.೮೬ ಕೋಟಿ ರೂಪಾಯಿ ಎನ್ನಲಾಗಿದೆ. ಇದಕ್ಕೆ ೩೦ ಲಕ್ಷ ರೂಪಾಯಿ ಸ್ಟಾಂಪ್‌ಡ್ಯೂಟಿ ಪಾವತಿಸಲಾಗಿದೆ ಎಂದು ವರದಿ ಮಾಡಲಾಗಿದೆ.