2 ಎ ಮೀಸಲಾತಿ ಕಲ್ಪಿಸಲು ರಾಜ್ಯ ಸರಕಾರಕ್ಕೆ ಆಗ್ರಹ

ಬಾಗಲಕೋಟೆ,ಅ.29 ಃ ವೀರಶೈವ ಲಿಂಗಾಯತ ಪಂಚಮಸಾಲಿ ಸಮಾಜಕ್ಕೆ 2 ಎ ಮೀಸಲಾತಿ ಕಲ್ಪಿಸಬೇಕು, ಕೇಂದ್ರ ಸರಕಾರದ ಓಬಿಸಿ ಪಟ್ಟಿಯಲ್ಲಿ ಸಮಾಜವನ್ನು ಸೇರ್ಪಡೆಗೊಳಿಸಲು ರಾಜ್ಯ ಸರಕಾರ ಶಿಫಾರಸ್ಸು ಮಾಡಬೇಕೆಂದು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರನ್ನು ಸಮಾಜ ಆಗ್ರಹಿಸಿದೆ.
ಹರ ಹರ ಮಹಾದೇವ, ವೀರಮಾತೆ ಕಿತ್ತೂರು ಚೆನ್ನಮ್ಮಾಜಿ ಕಿ ಜೈ ಎಂಬ ಘೋಷಣೆಗಳೊಂದಿಗೆ ವೀರಶೈವ ಲಿಂಗಾಯತ ಪಂಚಮಸಾಲಿ ಕ್ಷೇಮಾಭಿವೃದ್ಧಿ ಸಂಘದ ನೇತೃತ್ವದಲ್ಲಿ ಪ್ರತಿಭಟನಾ ಮೆರವಣಿಗೆಯ ಮೂಲಕ ಜಿಲ್ಲಾಡಳಿತ ಭವನಕ್ಕೆ ಆಗಮಿಸಿದ ಸಮಾಜದ ಬಾಂಧವರು ಈ ಕುರಿತು ಮುಖ್ಯಮಂತ್ರಿಗಳನ್ನು ಆಗ್ರಹಿಸುವ ಮನವಿಯನ್ನು ಅಪರ ಜಿಲ್ಲಾಧಿಕಾರಿ ಮಹಾದೇವ ಮುರಗಿ ಅವರಿಗೆ ಸಲ್ಲಿಸಿ ಒತ್ತಾಯಿಸಿದರು.
ರಾಜ್ಯದಲ್ಲಿ 86 ಲP್ಷÀ ಜನಸಂಖ್ಯೆ ಇರುವ ಬೃಹತ್ ವೀರಶೈವ ಲಿಂಗಾಯತ ಪಂಚಮಸಾಲಿ ಸಮುದಾಯ ಶೇ. 90 ರಷ್ಟು ಕೃಷಿ ಹಾಗೂ ಕಾರ್ಮಿಕ ಕೆಲಸ ಮಾಡುತ್ತಿದ್ದು ಸಮಾಜದ ವಿದ್ಯಾರ್ಥಿಗಳಿಗೆ ಶಿP್ಷÀಣ ಹಾಗೂ ಯುವಕರಿಗೆ ಉದೊÂ್ಯೀಗವಕಾಶ ಕಲ್ಪಿಸುವ ಸಲುವಾಗಿ ಪ್ರವರ್ಗ 2 ಎದಲ್ಲಿ ಸೇರಿಸಿ ಸಮಾಜಕ್ಕೆ ಆರ್ಥಿಕ ಸಮಾನತೆ ಮತ್ತು ಸಾಮಾಜಿಕ ನ್ಯಾಯ ನೀಡಬೇಕು, ಅಲ್ಲದೇ ಕೇಂದ್ರ ಸರಕಾರದ ಓಬಿಸಿ ಪಟ್ಟಿಯಲ್ಲಿ ಸೇರ್ಪಡೆಗೊಳಿಸಲು ಕೇಂದ್ರಕ್ಕೆ ರಾಜ್ಯ ಸರಕಾರ ಶಿಫಾರಸ್ಸು ಮಾಡಬೇಕೆಂದು ಜಿಲ್ಲಾಡಳಿತಕ್ಕೆ ಸಲ್ಲಿಸಿರುವ ಮನವಿಯಲ್ಲಿ ಸಮಾಜದ ಬಾಂಧವರು ಒತ್ತಾಯಿಸಿದ್ದಾರೆ.
ಈ ಸಂದರ್ಭದಲ್ಲಿ ವೀರಶೈವ ಲಿಂಗಾಯತ ಪಂಚಮಸಾಲಿ ಕ್ಷೇಮಾಭಿವೃದ್ಧಿ ಸಂಘದ ಅಧ್ಯP್ಷÀ ಸಿದ್ದಣ್ಣ ಹಂಪನಗೌಡರ ಅವರು ಮಾತನಾಡಿ ರಾಜ್ಯದಲ್ಲಿ 86 ಲP್ಷÀ ಜನಸಂಖ್ಯೆ ಹೊಂದಿರುವ ಸಮಾಜಕ್ಕೆ 2 ಎ ಮೀಸಲಾತಿ ಕಲ್ಪಿಸಿ ನ್ಯಾಯ ಒದಗಿಸಬೇಕೆಂದು ಆಗ್ರಹಿಸಿದರಲ್ಲದೇ 239 ಜನ ವೀರಶೈವ ಲಿಂಗಾಯತ ಪಂಚಮಸಾಲಿ ಸಮುದಾಯದ ರಾಜ್ಯ ನಿಯೋಗ ಅಂದಿನ ರಾಜ್ಯಾಧ್ಯP್ಷÀ ಭಾವಿ ಬೆಟ್ಟಪ್ಪನವರ ನೇತೃತ್ವದಲ್ಲಿ ಸಮಾಜವನ್ನು ಕೇಂದ್ರ ಸರಕಾರದ ಓಬಿಸಿ ಪಟ್ಟಿಯಲ್ಲಿ ಸೇರಿಸಲು ಅಂದಿನ ಪ್ರಧಾನಿ ಅಟಲï ಬಿಹಾರಿ ವಾಜಪೇಯಿ ಅವರಿಗೆ ಮನವಿ ಸಲ್ಲಿಸಿದಾಗ ರಾಜ್ಯ ಸರಕಾರದಿಂದ ಶಿಫಾರಸ್ಸು ಮಾಡಿ ಕಳಿಸಿದಲ್ಲಿ ಓಬಿಸಿ ಪಟ್ಟಿಗೆ ಸಮುದಾಯವನ್ನು ಸೇರಿಸಲಾಗುವದೆಂದು ಸ್ಪಷ್ಟ ಭರವಸೆ ನೀಡಿದ್ದರು, ಅದರಂತೆ ತP್ಷÀಣವೇ ಮುಖ್ಯಮಂತ್ರಿಗಳು ಸಮಾಜವನ್ನು ಕೇಂದ್ರ ಸರಕಾರದ ಓಬಿಸಿ ಪಟ್ಟಿಯಲ್ಲಿ ಸೇರಿಸಲು ಶಿಫಾರಸ್ಸು ಮಾಡಬೇಕೆಂದು ಒತ್ತಾಯಿಸಿದರು.
2008 ರ ಎಪ್ರಿಲï 14 ರಂದು ವೀರಶೈವ ಲಿಂಗಾಯತ ಪಂಚಮಸಾಲಿ ಸಮುದಾಯದ ಜಗದ್ಗುರುಗಳ ಸಮ್ಮುಖದಲ್ಲಿ ಮಾತು ನೀಡಿದಂತೆ ಪ್ರವರ್ಗ 2 ಎ ಮೀಸಲಾತಿಯ ಸೌಲಭ್ಯವನ್ನು ಸಮಾಜಕ್ಕೆ ಕಲ್ಪಿಸಿ ಕೇಂದ್ರದ ಓಬಿಸಿ ಪಟ್ಟಿಯಲ್ಲಿ ಸಮಾಜವನ್ನು ಸೇರಿದಂತೆ ಕೇಂದ್ರ ಸರಕಾರಕ್ಕೆ ಶಿಫಾರಸ್ಸು ಮಾಡಬೇಕೆಂದು ಒತ್ತಾಯಿಸಿದರು.
ಪ್ರತಿಭಟನೆಯಲ್ಲಿ ವೀರಶೈವ ಲಿಂಗಾಯತ ಪಂಚಮಸಾಲಿ ಕ್ಷೇಮಾಭಿವೃದ್ಧಿ ಸಂಘದ ಕಾರ್ಯದರ್ಶಿ ಬಸವರಾಜ ರಾಜೂರ, ಸಹ ಕಾರ್ಯದರ್ಶಿ ಪರಶುರಾಮ ಮುಳಗುಂದ, ಮುಖಂಡರಾದ ಸುರೇಶ ರೇವಡಿಗಾರ, ಸಂತೋಷ ಜಕಾತಿ, ನಾಗರಾಜ ಕೊಟಗಿ, ಶಂಕರ ಅರಶಿನಗೋಡಿ, ಮಲ್ಲಿಕಾರ್ಜುನ ಐಗಳಿ, ಪ್ರಶಾಂತ ಕಗ್ಗೋಡ, ರಾಮನಗೌಡ ಶೀಲವಂತರ, ನಿಂಗಣ್ಣ ಪಲೆÂ್ಲೀದ, ನೀಲಪ್ಪ ಬೇವೂರ, ಬಸವರಾಜ ಬಗಲಿ, ರಮೇಶ ಅಂಗಡಿ, ಬಸವರಾಜ ಹುನಗುಂದ, ವೀರಣ್ಣ ಕಲಬುರ್ಗಿ ಮತ್ತಿತರರು ಪಾಲ್ಗೊಂಡಿದ್ದರು.