2ವರ್ಷ ಪೂರೈಸಿದ ಕೇಂದ್ರ ಸರ್ಕಾರ: ಬಿಜೆಪಿ ವತಿಯಿಂದ ಪೌರಕಾರ್ಮಿಕರಿಗೆ ಆಹಾರ ವಿತರಣೆ

ಮೈಸೂರು: ಮೇ.30: ಬಿಜೆಪಿ ವ್ಯಾಪಾರಿ ಪ್ರಕೋಷ್ಠ ಹಾಗೂ ವಾಣಿಜ್ಯ ಪ್ರಕೋಷ್ಠ ವತಿಯಿಂದ ಚಾಮುಂಡಿಪುರಂ ವೃತ್ತದಲ್ಲಿ ಪೌರಕಾರ್ಮಿಕರಿಗೆ ಪೌಷ್ಠಿಕ ಆಹಾರ ವಿತರಿಸುವ ಮೂಲಕ ಎರಡನೇ ಅವಧಿಯ 2ವರ್ಷ ಪೂರೈಸಿದ ಕೇಂದ್ರ ಸರ್ಕಾರ ಸ್ವಾಗತಿಸಿ ಜತೆಗೆ ಬಿಜೆಪಿ ರಾಜ್ಯದ ಆದೇಶದ ಮೇರೆಗೆ ಸೇವೆಯೇ ಸಂಘಟನೆ ಎಂಬ ಕಾರ್ಯಕ್ರಮವನ್ನು ಪೌರಕಾರ್ಮಿಕರಿಗೆ ಪೌಷ್ಟಿಕ ಆಹಾರ ನೀಡುವ ಮೂಲಕ ಅರ್ಥಪೂರ್ಣವಾಗಿ ಆಚರಿಸಲಾಯಿತು.
ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ಬಿಜೆಪಿ ನಗರ ಅಧ್ಯಕ್ಷರಾದ ಟಿ ಎಸ್ ಶ್ರೀವತ್ಸ ಇದೇ ಸಂದರ್ಭದಲ್ಲಿ ಬಿಜೆಪಿ ನಗರಾಧ್ಯಕ್ಷರಾದ ಟಿಎಸ್ ಶ್ರೀವತ್ಸ ,ನಗರಪಾಲಿಕೆ ಸದಸ್ಯ ಮಾ ವಿ ರಾಮಪ್ರಸಾದ್, ಬಿಜೆಪಿ ವ್ಯಾಪಾರಿ ಪ್ರಕೋಷ್ಠ ಸಂಚಲಕರಾದ ಅಪೂರ್ವ ಸುರೇಶ್, ಸಹ ಸಂಚಾಲಕರಾದ ಪರಮೇಶ್ ಗೌಡ ,ಮಾಜಿ ನಗರ ಪಾಲಿಕಾ ಸದಸ್ಯರಾದ ಜಯರಾಂ ,ಕಾರ್ಯಾಲಯ ಕಾರ್ಯದರ್ಶಿ ಚೇತನ್, ಸಂದೀಪ್ ,ಹಾಗೂ ಇನ್ನಿತರರು ಹಾಜರಿದ್ದರು.