2ಬಿ ರದ್ದು ಮಾಡಿ ಸರ್ಕಾರ ಮುಸ್ಲಿಮರಿಗೆ ಅನ್ಯಾಯ : ಇಸ್ರತ್ ಗದ್ಯಾಳ

ಅಥಣಿ : ಮಾ.30:ಮುಸ್ಲಿಮ ಸಮುದಾಯವು ಶೈಕ್ಷಣಿಕವಾಗಿ, ಸಾಮಾಜಿಕವಾಗಿ ಮತ್ತು ಆರ್ಥಿಕವಾಗಿ ಹಿಂದುಳಿದ ಸಮುದಾಯವಾಗಿದ್ದು ಯಾವುದೇ ತಜ್ಞರ ವರದಿ ಇಲ್ಲದೇ ಏಕಾಏಕಿ ಮೀಸಲಾತಿ ಯನ್ನು ರದ್ದುಗೊಳಿಸಿರುವ ಸರ್ಕಾರದ ನಿರ್ಧಾರ ತೀರಾ ಅವೈಜ್ಞಾನಿಕ. ಇದೊಂದು ವಿವೇಚನೆ ಇಲ್ಲದ ಕ್ರಮ ಎಂದು ಮುಸ್ಲಿಂ ಯುವ ಮುಖಂಡ ಇಸ್ರತ್ ಗದ್ಯಾಳ ಹೇಳಿದರು,
ಮುಸ್ಲಿಮರಿಗೆ ಪ್ರವರ್ಗ 2ಬಿ ಅಡಿಯಲ್ಲಿದ್ದ ಶೇ 4ರಷ್ಟು ಮೀಸಲಾತಿಯನ್ನು ರದ್ದು ಮಾಡಿರುವುದು ಖಂಡನೀಯ ಇದು ಸರ್ಕಾರದ ಅಸಂವಿಧಾನಿಕ ತೀರ್ಮಾನವಾಗಿದೆ. ಮುಸ್ಲಿಮರ ವಿರುದ್ಧ ಸರ್ಕಾರ ನಡೆಸುವ ಷಡ್ಯಂತ್ರ ಇದಾಗಿದ್ದು, ಸರ್ಕಾರವು ಸಂವಿಧಾನ ವಿರೋಧಿಯಾಗಿ ನಡೆದುಕೊಂಡಿದೆ. ಈ ಹಿಂದಿನ ಸರ್ಕಾರಗಳು ಹಲವು ಕ್ಷೇತ್ರಗಳಲ್ಲಿ ಹಿಂದುಳಿದಿರುವ ಮುಸ್ಲಿಂ ಸಮುದಾಯಕ್ಕೆ ಮೀಸಲಾತಿ ಕಲ್ಪಿಸಲಾಗಿತ್ತು. ಮೀಸಲಾತಿ ರದ್ದುಗೊಳಿಸಿರುವುದನ್ನು ವಾಪಸ್ ಪಡೆದು, ಈ ಹಿಂದಿನಂತೆ ಮೀಸಲಾತಿ ಮುಂದುವರಿಸುವಂತೆ ಆಗ್ರಹಿಸಿದರು,