2ಬಿ ಮೀಸಲಾತಿ ರದ್ದು, ಪ್ರಜಾಪ್ರಭುತ್ವ ವಿರೋಧಿ ಕ್ರಮ : ಸೈಯದಅಮೀನ್ ಗದ್ಯಾಳ

ಅಥಣಿ :ಎ.1: ಅಲ್ಪಸಂಖ್ಯಾತ ಮುಸ್ಲಿಂ ಸಮುದಾಯದ 2ಬಿ ಮೀಸಲಾತಿಯನ್ನು ರದ್ದುಗೊಳಿಸಿರುವುದು, ಸರಿಯಾದ ಕ್ರಮಯಲ್ಲ ಇದು ಪ್ರಜಾಪ್ರಭುತ್ವ ವಿರೋಧಿ ಹಾಗೂ ಸಂವಿಧಾನ ವಿರೋಧಿ ಕ್ರಮವಾಗಿದೆ ಘನ ರಾಜ್ಯಪಾಲರು ಕೂಡಲೇ ಮಧ್ಯಪ್ರವೇಶಿಸಿ ಸರ್ಕಾರದ ಈ ಆದೇಶಕ್ಕೆ ತಡೆ ನೀಡಿ ಅಲ್ಪಸಂಖ್ಯಾತ ಮುಸ್ಲಿಂ ಸಮುದಾಯಕ್ಕೆ ಇದ್ದ ಶೇ.4 ರಷ್ಟು ಮೀಸಲಾತಿ ಮುಂದುವರೆಸಬೇಕು, ಎಂದು ಅಥಣಿ ತಾಲೂಕಾ ಅಂಜುಮನ್ ಎ ಇಸ್ಲಾಂ ಕಮೀಟಿ ಅಧ್ಯಕ್ಷ ಸೈಯದಅಮೀನ್ ಗದ್ಯಾಳ ಮನವಿ ಮಾಡಿದರು.
ಅವರು ಪಟ್ಟಣದ ಮಿನಿ ವಿಧಾನಸೌಧದಲ್ಲಿರಾಜ್ಯ ಬಿಜೆಪಿ ಸರ್ಕಾರ ಪ್ರವರ್ಗ 2ಬಿ ಅಡಿ ಮುಸ್ಲಿಮರಿಗೆ ನೀಡಲಾಗುತ್ತಿದ್ದ ಮೀಸಲಾತಿಯನ್ನು ರದ್ದುಪಡಿಸಿರುವುದನ್ನು ವಿರೋಧಿಸಿ ಅಥಣಿ ತಹಸೀಲ್ದಾರ ಕಚೇರಿ ಆವರಣದಲ್ಲಿ ಇಂದು ಅಂಜುಮನ್ ಎ ಇಸ್ಲಾಂ ಕಮಿಟಿ ಸದಸ್ಯರು ಹಾಗೂ ನೂರಾರು ಸಂಖ್ಯೆಯಲ್ಲಿ ಮುಸ್ಲಿಂ ಸಮುದಾಯದವರು ಸೇರಿಕೊಂಡು ರಾಜ್ಯ ಸರ್ಕಾರ 2ಬಿ ಮೀಸಲಾತಿ ರದ್ದತಿ ಆದೇಶವನ್ನು ತಕ್ಷಣ ಹಿಂಪಡೆಯಬೇಕು ಎಂದು ಒತ್ತಾಯಿಸಿ ಅಂಜುಮನ ಎ ಇಸ್ಲಾಂ ಕಮಿಟಿ ವತಿಯಿಂದ ಅಥಣಿ ತಹಸೀಲ್ದಾರ ಬಿ ಎಸ್ ಕಟಕಭಾವಿ ಅವರ ಮುಖಾಂತರ ರಾಜ್ಯಪಾಲರಿಗೆ ಮನವಿ ಸಲ್ಲಿಸಿ ಮಾತನಾಡುತ್ತಿದ್ದರು,
ಮುಸ್ಲಿಂ ಸಮುದಾಯಕ್ಕೆ 2ಬಿ ಮೀಸಲಾತಿಯನ್ನು ರದ್ದುಪಡಿಸಿದನ್ನು ನಾವು ಖಂಡಿಸುತ್ತೇವೆ 2ಬಿ ಮೀಸಲಾತಿ ರದ್ದತಿಯು ಒಂದು ಸಮುದಾಯವನ್ನು ಗುರಿಯಾಗಿಸಿಕೊಂಡು ಮಾಡಿರುವ ಉದ್ದೇಶಿತ ದಾಳಿಯಾಗಿದೆ, ರಾಜ್ಯ ಸರ್ಕಾರ ಮೀಸಲಾತಿ ರದ್ದತಿಯನ್ನು ತಕ್ಷಣ ಹಿಂಪಡೆಯಬೇಕು ಇಲ್ಲವಾದರೆ ಕಾನೂನಾತ್ಮಕ ಹೋರಾಟ ಮಾಡಲಾಗುವುದು ಎಂದು ಎಚ್ಚರಿಕೆ ನೀಡಿದರು
ನಂತರ ಮಾಜಿ ಶಾಸಕ ಹಾಗೂ ಜೆಡಿಎಸ್ ಪಕ್ಷದ ರಾಜ್ಯ ಹಿರಿಯ ಉಪಾಧ್ಯಕ್ಷ ಶಹಾಜಹಾನ ಡೊಂಗರಗಾಂವ ಮಾತನಾಡಿ ಮುಸ್ಲಿಂ ಸಮುದಾಯಕ್ಕೆ ಪ್ರವರ್ಗ 2ಬಿ ಅಡಿಯಲ್ಲಿ ಶೇ 4 ಪ್ರತಿಶತ ಮೀಸಲಾತಿ ಇತ್ತು ಇದರಿಂದ ಮುಸ್ಲಿಮರ ಮಕ್ಕಳಿಗೆ ಶೈಕ್ಷಣಿಕ ಪ್ರವೇಶ ಪಡೆಯುವಲ್ಲಿ, ನೌಕರಿ ಪಡೆಯುವಲ್ಲಿ ಹಾಗೂ ಇತರೆ ಸರ್ಕಾರಿ ಸೌಲಭ್ಯ ಪಡೆಯಲು ಆಧಾರ್ ವಾಗಿತ್ತು ರಾಜ್ಯ ಸರ್ಕಾರ ಮೀಸಲಾತಿಯನ್ನು ರದ್ದುಗೊಳಿಸಿ ಇಡಬ್ಲುಎಸ್ ನಲ್ಲಿ ಸೇರಿಸಿ ಅನ್ಯಾಯ ಮಾಡಿದೆ ಸರ್ಕಾರದ ನೀತಿಯನ್ನು ಇಡೀ ಮುಸ್ಲಿಂ ಸಮುದಾಯ ವಿರೋಧಿಸುತ್ತದೆ.ಅದೇ ರೀತಿ ನಾವು ಅಂಜುಮನ್ ಏ ಇಸ್ಲಾಂ ಕಮಿಟಿ ವತಿಯಿಂದ ತಹಸೀಲ್ದಾರ ಮೂಲಕ ರಾಜ್ಯಪಾಲರಿಗೆ ಮನವಿ ನೀಡಲಾಗಿದೆ ಆದಷ್ಟು ಬೇಗ ರಾಜ್ಯ ಸರ್ಕಾರ ಮೀಸಲಾತಿ ರದ್ದು ಮಾಡಿ ತಕ್ಷಣ ಆದೇಶ ಹಿಂಪಡೆಯಬೇಕು ಎಂದು ಪ್ರತಿಭಟನೆ ಮೂಲಕ ಎಚ್ಚರಿಕೆ ನೀಡಿದರು.
ಆ ನಂತರ ಅಂಜುಮನ್ ಕಮೀಟಿ ಸದಸ್ಯ ಸೈಯದ ಗಡ್ಡೇಕರ ಮಾತನಾಡಿ ಅಲ್ಪಸಂಖ್ಯಾತ ಮುಸ್ಲಿಂ ಸಮುದಾಯಕ್ಕೆ ಸಂವಿಧಾನತ್ಮಕವಾಗಿ ಶೇ.4 ರಷ್ಟು ಮೀಸಲಾತಿ
ಅನುಕೂಲವಾಗಿತ್ತು. ಮುಸ್ಲಿಂರು ಶೈಕ್ಷಣಿಕವಾಗಿ,ರಾಜಕೀಯವಾಗಿ ಮತ್ತು ಆರ್ಥಿಕವಾಗಿ ತೀರಾ
ಹಿಂದುಳಿದಿದ್ದಾರೆ, ಮುಸ್ಲಿಂರಿಗೆಶಿಷ್ಯವೇತನ, ಉದ್ಯೋಗ, ವಸತಿ ನಿಲಯ
ಪ್ರವೇಶ ಸೇರಿದಂತೆ ವಿವಿಧ ಸೌಲಭ್ಯಪಡೆದುಕೊಳ್ಳಲು ಅನುಕೂಲವಾಗಿತ್ತು,
ಆದರೆ ಈಗ ಬಿಜೆಪಿ ಸರ್ಕಾರ ದೊರಕಿದ್ದ ಮೀಸಲಾತಿಯನ್ನು ರದ್ದುಪಡಿಸಿ ಘೋರ ಅನ್ಯಾಯ, ರದ್ದತಿ ಆದೇಶವನ್ನು ತಕ್ಷಣ ಹಿಂಪಡೆಯಬೇಕು ಇಲ್ಲವಾದರೆ ಮುಂದಿನ ದಿನಮಾನಗಳಲ್ಲಿ ಉಗ್ರ ಹೋರಾಟ ಕೈಗೊಳ್ಳಲಾಗುವುದು ಎಂದರು,
ಈ ವೇಳೆ ಜುಬೇರ ನಾಲಬಂದ, ಅಮಾನುಲ್ಲಾ ಮುಲ್ಲಾ,