2ನೇ ಹಂತದ ಲಸಿಕೆ ಡ್ರೈರನ್ ಡಿಸಿ ಚಾಲನೆ

ಮೈಸೂರು:ಜ:08: ಕೊರೋನಾ ವೈರಸ್‍ಗೆ ಲಸಿಕೆ ನೀಡುವ ದಿನಗಳು ಯಾವುದೇ ಸಂದರ್ಭದಲ್ಲಿ ಬರಬಹುದಾಗಿದೆ. ಈ ಹಿನ್ನೆಲೆಯಲ್ಲಿ ಜಿಲ್ಲೆಯಲ್ಲಿ ಇಂದು ಎರಡನೇ ಹಂತದ ಕೋವಿಡ್ ಲಸಿಕೆ ನೀಡುವ ಡ್ರೈ ರನ್ ನಡೆಯಿತು.
ನಗರದ ಅಪೆÇೀಲೊ ಆಸ್ಪತ್ರೆಯ 25 ಸಿಬ್ಬಂದಿಗಳಿಗೆ ಲಸಿಕೆ ನೀಡಲಾಯಿತು. ನೋಡಲು ತಾಲೀಮಿನಂತೆ ಕಂಡರೂ, ಕೋವಿಡ್ ಲಸಿಕೆ ನೀಡುವ ನೈಜ ವಾತಾವರಣ ಸೃಷ್ಟಿಯಾಗಿತ್ತು. ತಮ್ಮ ಗುರುತಿನ ಚೀಟಿಯನ್ನು ತರುತ್ತಿದ್ದ ಸಿಬ್ಬಂದಿ ನೋಂದಣಿ ಮಾಡಿಸಿದ ನಂತರ, ಚಿಕಿತ್ಸೆ ಪಡೆದು ವ್ಯಾಕ್ಸಿನೇಟರ್ನಿಂದ ಸಲಹೆಗಳನ್ನು ಪಡೆಯುತ್ತಿದ್ದ ದೃಶ್ಯ ಕಂಡುಬಂದಿತು.
ಕೌನ್ಸಿಲಿಂಗ್, ವ್ಯಾಕ್ಸಿನೇಷನ್, ವೀಕ್ಷಣಾ ಹಾಗೂ ನಿಗಾ ಘಟಕ ಸೇರಿದಂತೆ ನಾಲ್ಕು ಕೊಠಡಿಗಳಲ್ಲಿ ಸಿದ್ಧತೆ ಮಾಡಿಕೊಳ್ಳಲಾಗಿತ್ತು. ವ್ಯಾಕ್ಸಿನೇಷನ್ ರೂಂ ನಲ್ಲಿ ಕೋಲ್ಡ್ ಸ್ಟೋರೇಜ್ನ ವ್ಯವಸ್ಥೆ ಮಾಡಲಾಗಿತ್ತು.
ಜಿಲ್ಲೆಯ ಎಂಟು ಆರೋಗ್ಯ ಕೇಂದ್ರಗಳಲ್ಲಿ ತಾಲೀಮು ನಡೆದಿದೆ. ಅಪೆÇೀಲೋ ಆಸ್ಪತ್ರೆಯಲ್ಲಿ ನಡೆದ ತಾಲೀಮನ್ನು ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ಉದ್ಘಾಟಿಸಿ, ಅಲ್ಲಿನ ಸಿದ್ಧತೆಗಳನ್ನು ಪರಿಶೀಲಿಸಿದರು. ಬಳಿಕ ಮಾತನಾಡಿ ಅವರು ಮೈಸೂರು ಜಿಲ್ಲೆಯ ಪ್ರಾಥಮಿಕ ಆರೋಗ್ಯ ಕೇಂದ್ರ ಕುಂಬಾರಕೊಪ್ಪಲು, ಮೈಸೂರು ನಗರ, ಪ್ರಾಥಮಿಕ ಆರೋಗ್ಯ ಕೇಂದ್ರ ಕಡಕೊಳ ಮೈಸೂರು ತಾಲೂಕು, ಸಮುದಾಯ ಆರೋಗ್ಯ ಕೇಂದ್ರ ಮೂಗೂರು, ಟೀ ನರಸೀಪುರ ತಾಲೂಕು, ತಾಯಿ ಮತ್ತು ಮಕ್ಕಳ ಆಸ್ಪತ್ರೆ ನಂಜನಗೂಡು, ಜಿಲ್ಲಾ ಆಸ್ಪತ್ರೆ ಮೇಟಗಳ್ಳಿ, ಕೆ.ಆರ್.ಆಸ್ಪತ್ರೆ ಮೈಸೂರು, ಖಾಸಗಿ ಆಸ್ಪತ್ರೆಗಳಾದ ಜೆಎಸ್ ಎಸ್, ಬಿಜಿಎಸ್ ಅಪೆÇೀಲೋ, ಆಸ್ಪತ್ರೆಗಳಲ್ಲಿ ಕೋವಿಡ್ ಅಣುಕು ಕಾರ್ಯಾಚರಣೆ ನಡೆಸಲಾಗುತ್ತಿದೆ. ಈ ಕೇಂದ್ರಗಳಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಆರೋಗ್ಯ ಕಾರ್ಯಕರ್ತರು, ಅಂಗನವಾಡಿ ಕಾರ್ಯಕರ್ತೆಯರು, ಆಶಾ ಕಾರ್ಯಕರ್ತೆಯರನ್ನು ಒಳಗೊಂಡಂತೆ 25ಜನರು ಲಸಿಕೆ ಪಡೆಯಲಿದ್ದಾರೆ ಎಂದರು.
ಪ್ರತಿ ಲಸಿಕಾ ಕೇಂದ್ರದಲ್ಲೂ 3ಕೊಠಡಿ ಯನ್ನೊಳಗೊಂಡ ಐದು ಮಂದಿ ಲಸಿಕಾ ಅಧಿಕಾರಿಗಳನ್ನು ನೇಮಿಸಲಾಗಿದ್ದು ಪ್ರತಿಯೊಬ್ಬರ ಕರ್ತವ್ಯವನ್ನು ನಿಗದಿಪಡಿಸಲಾಗಿದೆ.
ಲಸಿಕೆ ಪಡೆದ ಫಲಾನುಭವಿಗಳು 30ನಿಮಿಷ ನಿಗಾ ಕೊಠಡಿಯಲ್ಲಿರಲಿದ್ದಾರೆ. ಈ ಸಂದರ್ಭ ಈ ಕಾರ್ಯಾಚರಣೆಯ ಸಂಪೂರ್ಣ ನಿರ್ವಹಣೆಯನ್ನು ಕೋವಿಡ್ ಹೊಸ ತಂತ್ರಾಂಶದ ಮೂಲಕ ಗಣಕೀಕರಣದ ಮೂಲಕ ಮಾಡಲಾಗುವುದು ಎಂದರು. ಬೆಳಿಗ್ಗೆ 11 ರಿಂದ ಆರಂಭವಾಗಿ ಮಧ್ಯಾಹ್ನ 1ಗಂಟೆಯವರೆಗೆ ನಡೆಯಲಿದೆ.
ರಾಜ್ಯದಲ್ಲಿ ಲಸಿಕೆ ವಿತರಣೆಗೆ ಸಂಬಂಧಿಸಿದ ಬಹುತೇಕ ಸಿದ್ದತೆ ಪೂರ್ಭಗೊಂಡಿದ್ದು, ಮೊದಲ ಆಧ್ಯತೆಯಾಗಿ ಕೊರೊನಾ ಲಸಿಕೆ ಹಾಕಿಸಿಕೊಳ್ಳಲು ರಾಜ್ಯದಲ್ಲಿ 6.63 ಲಕ್ಷ ಮಂದಿ ಹೆಸರು ನೊಂದಣಿ ಮಾಡಿಕೊಂಡಿದ್ದಾರೆ, ಆರೋಗ್ಯ ಸಿಬ್ಬಂದಿಯಾಗಿರುವವರು ಇನ್ನೂ ನೋಂದಣಿ ಮಾಡಿಕೊಳ್ಳಬಹುದು. ಇನ್ನು ದೇಶಾದ್ಯಂತ ಮೊದಲ ಹಂತದಲ್ಲಿ ಒಟ್ಟು 1 ಕೋಟಿ ಲಸಿಕೆ ನೀಡಲಾಗುತ್ತಿದೆ.
ಲಸಿಕೆ ವಿತರಣೆಗೆ ಕೋಲ್ಡ್ ಚೇನ್ ಸಾಮಾಗ್ರಿಗಳು, ದೊಡ್ಡ ಕೊಠಡಿ, ಗಾತ್ರದ 10 ವಾಕ್‍ಇನ್‍ಕೂಲರ್ಸ್, 4 ವ್ಯಾಕ್ಯೂಮ್ ಫ್ರೀಜರ್, 3201 ಐಎಲ್‍ಆರ್ ರೆಫ್ರಿಜರೇಟರ್, 3039 ಡೀಪ್ ರೆಫ್ರಿಜರೇಟರ್, 3312 ಕೋಲ್ಡ್‍ಬಾಕ್ಸ್‍ಗಳು, 46,591 ವ್ಯಾಕ್ಸಿನ್ ಕ್ಯಾರಿಯರ್, 2,25,749 ಐಸ್ ಪ್ಯಾಕ್‍ಗಳನ್ನು ಸರ್ಕಾರ ಸಿದ್ದ ಮಾಡಿಕೊಂಡಿದ್ದು, ಬರಬರಾಜಿಗೆ ಯಾವುದೇ ಅಡಚಣೆಯಿಲ್ಲ.
ಮೊದಲ ಹಂತದಲ್ಲಿ ಮೂರು ಕಡೆ ಡ್ರೈ ರನ್ ನಡೆಸಿದ್ದರೆ, ಎರಡನೇ ಹಂತದಲ್ಲಿ ಮೈಸೂರು ನಗರ ಸೇರಿದಂತೆ ಒಟ್ಟು ಎಂಟು ಕಡೆಗಳಲ್ಲಿ ತಾಲೀಮು ನಡೆಯಲಿದೆ. ಮೈಸೂರು ನಗರದ ಕೆ.ಆರ್.ಆಸ್ಪತ್ರೆ, ಮೇಟಗಳ್ಳಿಯಲ್ಲಿರುವ ಜಿಲ್ಲಾ ಆಸ್ಪತ್ರೆ, ಜೆಎಸ್‍ಎಸ್ ಆಸ್ಪತ್ರೆ, ಬಿಜಿಎಸ್ ಅಪೆÇೀಲೋ ಆಸ್ಪತ್ರೆ, ಕುಂಬಾರಕೊಪ್ಪಲು ಸರ್ಕಾರಿ ಆಸ್ಪತ್ರೆ, ನಂಜನಗೂಡು ತಾಲ್ಲೂಕಿನ ಎಂಸಿಎಚ್ ಆಸ್ಪತ್ರೆ, ತಿ.ನರಸೀಪುರ ತಾಲೂಕಿನ ಮೂಗೂರು ಗ್ರಾಮದ ಸಿಎಚ್ಸಿ ಆಸ್ಪತ್ರೆ, ಮೈಸೂರು ತಾಲೂಕಿನ ಕಡಕೊಳ ಗ್ರಾಮದ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ತಾಲೀಮು ನಡೆಯಲಿವೆ.
ಕೇಂದ್ರ ಸರ್ಕಾರದ ಸೂಚನೆಯಂತೆ ಆರೋಗ್ಯ ಕಾರ್ಯಕರ್ತರಿಗೆ ಲಸಿಕೆ ನೀಡಲು ಸಕಲ ಸಿದ್ದತೆಗಳನ್ನು ಮಾಡಿಕೊಳ್ಳಲಾಗಿದ್ದು, 2ನೇ ಹಂತದಲ್ಲಿ 50 ವರ್ಷ ಮೇಲ್ಪಟ್ಟ ನಾಗರೀಕರಿಗೂ ಸಹ ಲಸಿಕೆ ನೀಡಲಾಗುವುದು. ಆ:17ರಂದು ನಡೆಯಲಿರುವ ಪಲ್ಸ್ ಪೋಲಿಯೋ ಲಸಿಕೆ ಸಂದರ್ಭ ಮಾಸ್ಕ್ ದಾರಣೆ, ಸಾಮಾಜಿಕ ಅಂತರದ ಬಗ್ಗೆ ಎಚ್ಚರ ವಹಿಸಬೇಕು.
ಲಸಿಕೆಯನ್ನು ಯಾವ ಫಾರ್ಮ್‍ನಲ್ಲಿ ತೆಗೆದುಕೊಳ್ಳಬೇಕು ಎನ್ನುವ ಬಗ್ಗೆ ನಿಖರ ಮಾಹಿತಿ ಇಲ್ಲ. ಆದರೆ, ವ್ಯಾಕ್ಸಿನ್ ಲಭ್ಯತೆ ಬಗ್ಗೆ ಸ್ಪಷ್ಟತೆ ಇದೆ. ಹಾಗಾಗಿ, ವ್ಯಾಕ್ಸಿನ್ ಬಂದರೆ, ಎಲ್ಲಿ ಶೇಖರಣೆ ಮಾಡಬೇಕು. ಎಲ್ಲೆಲ್ಲಿ ಕೋಲ್ಡ್ ಸ್ಟೋರೇಜ್ ಅಗತ್ಯ ಹಾಗೂ ಎಲ್ಲಿಗೆ ಸೌಲಭ್ಯ ತಲುಪಿಸಬೇಕು ಎನ್ನುವ ಬಗ್ಗೆ ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಅಮರನಾಥ್ ತಿಳಿಸಿದರು.