2ನೇ ಹಂತದ ಮತಯಂತ್ರಗಳ ರ್ಯಾಂಡಮೈಜೇಶನ್


ಬಾಗಲಕೋಟೆ,ಏ.28: ಬಾಗಲಕೋಟೆ ಲೋಕಸಭಾ ಮತಕ್ಷೇತ್ರಕ್ಕೆ ಸಂಬಂಧಿಸಿದಂತೆ ಮತಕ್ಷೇತ್ರವಾರು ಮತಗಟ್ಟೆಗಳಿಗೆ ಹೋಗುವ ಮತಯಂತ್ರಗಳ ಎರಡನೇ ರ್ಯಾಂಡಮೈಜೇಶನ್ ಪ್ರಕ್ರಿಯೆ ಜಿಲ್ಲಾ ಚುನಾವಣಾಧಿಕಾರಿ ಜಾನಕಿ ಕೆ.ಎಂ ಅದ್ಯಕ್ಷತೆಯಲ್ಲಿ ಹಾಗೂ ಸಾಮಾನ್ಯ ವೀಕ್ಷಕ ಸರವಣವೆಲ್ರಾಜ್ ಸಮ್ಮುಖದಲ್ಲಿ ನಡೆಸಲಾಯಿತು.
ಜಿಲ್ಲಾ ಚುನಾವಣಾಧಿಕಾರಿ ಜಾನಕಿ ಕೆ.ಎಂ ಮಾತನಾಡಿ ಮತಗಟ್ಟೆಗೆ ಹೋಗುವ ಮತಯಂತ್ರಗಳ ಕ್ಯಾಂಡಿಡೇಟ್ ಸೆಟ್ಟಿಂಗ್ ಪ್ರಕ್ರಿಯೆ ಆಯಾ ಮತಕ್ಷೇತ್ರಗಳಲ್ಲಿ ಎಪ್ರೀಲ್ 28 ರಂದು ಬೆಳಿಗ್ಗೆ 7 ಗಂಟೆಗೆ ಪ್ರಾರಂಭಿಸಲಾಗುತ್ತಿದೆ. ಸದರಿ ಮತಕ್ಷೇತ್ರಗಳ ಕ್ಯಾಂಡಿಡೇಟ ಸೆಟ್ಟಿಂಗ ಪ್ರಕ್ರಿಯೆ ವೀಕ್ಷಣೆ ಮಾಡಬಹುದಾಗಿದೆ ಎಂದು ವಿವಿಧ ರಾಜಕೀಯ ಪಕ್ಷಗಳ ಪ್ರತಿನಿಧಿಗಳಿಗೆ ತಿಳಿಸಿದರು.
ಕ್ಯಾಂಡಿಡೇಟ್ ಸೆಟ್ಟಿಂಗ್ ಪ್ರಕ್ರಿಯೆ ಮುಧೋಳ ಮತಕ್ಷೇತ್ರದ ಮುಧೋಳ ತಹಶೀಲ್ದಾರ ಕಾರ್ಯಾಲಯ, ತೇರದಾಳ ಮತಕ್ಷೇತ್ರದ ಬನಹಟ್ಟಿ ತಮ್ಮಣ್ಣಪ್ಪ ಚಿಕ್ಕೋಡಿ ಕಲಾ ಮತ್ತು ವಾಣಿಜ್ಯ ಕಾಲೇಜ, ಜಮಖಂಡಿ ಮತಕ್ಷೇತ್ರದ ಜಮಖಂಡಿ ತಹಶೀಲ್ದಾರ ಕಾರ್ಯಾಲಯ, ಬೀಳಗಿ ಮತಕ್ಷೇತ್ರದ ಬೀಳಗಿ ಸಿದ್ದೇಶ್ವರ ಸಂಯುಕ್ತ ಪಿ.ಯು ಕಾಲೇಜ, ಬಾದಾಮಿ ಮತಕ್ಷೇತ್ರದ ಬಾದಾಮಿ ವೀರಪುಲಕೇಶಿ ವಿದ್ಯಾವರ್ಧಕ ಸಂಸ್ಥೆ, ಬಾಗಲಕೋಟೆ ಮತಕ್ಷೇತ್ರದ ನವನಗರದ ಸೆಕ್ಟರ ನಂ.43ರಲ್ಲಿರುವ ಸರಕಾರಿ ಪ್ರಥಮ ದರ್ಜೆ ಕಾಲೇಜ, ಹುನಗುಂದ ಮತಕ್ಷೇತ್ರದ ಹುನಗುಂದ ವಿಜಯ ಮಹಾಂತೇಶ ವಿದ್ಯಾವರ್ಧಕ ಸಂಘ ಹಾಗೂ ನರಗುಂದ ಕ್ಷೇತ್ರದ ನಗರದುಂದ ಸರಕಾರಿ ಇಂಜಿನೀಯರಿಂಗ್ ಕಾಲೇಜನಲ್ಲಿ ನಡೆಯಲಿದೆ ಎಂದರು.
ಸದರಿ ಪ್ರಕ್ರಿಯೆಯಲ್ಲಿ ಯುಕೆಪಿ ಮಹಾವ್ಯವಸ್ಥಾಪಕ ರಮೇಶ ಕಳಸದ, ಅಪರ ಜಿಲ್ಲಾಧಿಕಾರಿ ಪರಶುರಾಮ ಶಿನ್ನಾಳಕರ, ಎನ್.ಐಸಿಯ ಗಿರಿಯಾಚಾರ, ಚುನಾವಣಾ ತಹಶೀಲ್ದಾರ ಪಂಪಯ್ಯ ಸೇರಿದಂತೆ ವಿವಿಧ ರಾಜಕೀಯ ಪಕ್ಷಗಳ ಮುಖಂಡರು ಉಪಸ್ಥಿತರಿದ್ದರು.