2ನೇ ಹಂತದ ಗ್ರಾ.ಪಂ.ಚುನಾವಣೆ ಶಾಂತಿಯುತ ಮತದಾನ

ಸಿಂದಗಿ:ಡಿ.27: ಆಲಮೇಲ ತಾಲ್ಲೂಕಿನ ಒಟ್ಟು 29 ಗ್ರಾಮ ಪಂಚಾಯ್ತಿಗಳ ಪೈಕಿ 23 ಗ್ರಾಮ ಪಂಚಾಯ್ತಿಗಳಿಗೆ 51 ಸ್ಥಾನಗಳಿಗೆ ಅವಿರೋಧ ಆಯ್ಕೆ ನಡೆದಿದ್ದು, 380 ಸ್ಥಾನಗಳಿಗೆ ಇಡೀ ತಾಲೂಕಿನಲ್ಲಿ 191 ಜನ ಮತಗಟ್ಟೆ ಅಧಿಕಾರಿಗಳು ಒಟ್ಟು 880 ಸಿಬ್ಬಂದಿಯೊಂದಿಗೆ ಮತದಾನ ಚುನಾವಣೆ ನಡೆಯುತ್ತಿದ್ದು 191 ಮತಗಟ್ಟೆಗಳಲ್ಲಿ 27 ಸೂಕ್ಷ್ಮ, 14 ಅತಿ ಸೂಕ್ಷ್ಮ ಮತಗಟ್ಟೆಗಳಿವೆ. ಒಟ್ಟು 1,29,638 ಮತದಾರರಲ್ಲಿ 67,316 ಪುರುಷರು, 62,304 ಮಹಿಳೆಯರು, 18 ಇತರೆ ಮತದಾರರು ಮತ ಚಲಾಯಿಸಿ ಅಭ್ಯರ್ಥಿಗಳ ಭವಿಷ್ಯ ನಿರ್ಧರಿಸಲಿದ್ದಾರೆ.
ಇಂದು ಬೆಳಿಗ್ಗೆ 7ರಿಂದ ಪ್ರಾರಂಭಗೊಂಡ ಮತದಾನವು ಅತೀ ಚಾಕುಚೆಕ್ಕೆತೆಯಲ್ಲಿ ಚುರುಕಿನಿಂದ ನಡೆದಿದ್ದು ಮತದಾರರನ್ನು ಸೆಳೆಯಲು ಅನೇಕ ಕಸರತ್ತುಗಳನ್ನು ನಡೆಸಿದ ಅಭ್ಯರ್ಥಿಗಳಲ್ಲಿ ಢವಡವಿಕೆ ಸುರುವಾಗಿದೆ. ಕರ್ನಾಟಕ ಮಹಾರಾಷ್ಟ್ರ, ಆಂದ್ರಪ್ರದೇಶ, ಗೋವಾ ಸೇರಿದಂತೆ ಹೊರರಾಜ್ಯಗಳಿಂದ ಮತದಾರರು ಆಯಾ ಗ್ರಾಮ ಪಂಚಾಯತಿಗಳಿಗೆ ತೆರಳಿ ಮತದಾನ ನಡೆಸಿದ್ದಾರೆ.
ಕೋವಿಡ್ ಮತದಾರರು: ನಾಗಾಂವಿ 02, ಮೋರಟಗಿ 01, ಕರವಿನಾಳ 01 ಒಟ್ಟು ನಾಲ್ಕು ಕೊರೊನಾ ಸೋಂಕಿತ ಮತದಾರರು ಇದ್ದಾರೆ. ಇವರಿಗೆ ಮತದಾನದ ಕೊನೆಯ ಅರ್ಧ ಗಂಟೆ ಇದ್ದಾಗ ಮತ ಚಲಾಯಿಸಲು ಅವಕಾಶ ನೀಡಲಾಗುತ್ತಿದೆ ಎಂದು ಆರೋಗ್ಯ ಇಲಾಖೆ ತಿಳಿಸಿದೆ.
ಸೂಕ್ತ ಬಂದೋ ಬಸ್ತಿನಲ್ಲಿ ಚುನಾವಣೆ; ಸಿಂದಗಿ- ಆಲಮೇಲ ಒಳಗೊಂಡು 10 ಪೆÇಲೀಸ್ ಸೆಕ್ಟರ್‍ಗಳನ್ನಾಗಿ ವಿಂಗಡಣೆ ಮಾಡಲಾಗಿದೆ. ಒಬ್ಬರು ಡಿವೈಎಸ್ಪಿ, ಇಬ್ಬರು ಸಿಪಿಐ, 10 ಪಿಎಸ್‍ಐ ಇಬ್ಬರು ಎಎಸ್‍ಐ 232 ಕಾನ್‍ಸ್ಟೆಬಲ್‍ಗಳು, 10 ಜನ ಹೋಮ್‍ಗಾರ್ಡ್‍ಗಳನ್ನು ಬಂದೋ ಬಸ್ತ್‍ಗಾಗಿ ನೇಮಕ ಮಾಡಲಾಗಿದೆ ಎಂದು ಪೆÇಲೀಸ್ ಇಲಾಖೆ ತಿಳಿಸಿದೆ.