2ನೇ ವಾರ್ಡಿನಲ್ಲಿ ಕಾಂಗ್ರೆಸ್ ಪಕ್ಷದಿಂದ ಬಿರುಸಿನ ಮತಯಾಚನೆ

ಹನೂರು:ಮಾ:27: ಪ.ಪಂ. 2ನೇ ವಾರ್ಡ್‍ನಲ್ಲಿ ಕಾಂಗ್ರೇಸ್ ಪಕ್ಷದ ವತಿಯಿಂದ ಸ್ಪರ್ಧಿಸುತ್ತಿರುವ ಸುದೇಶ್ ಪರವಾಗಿ ಸ್ಥಳಿಯ ಕಾಂಗ್ರೇಸ್ ಮುಖಂಡರುಗಳು ಮತಯಾಚನೆ ಮಾಡಿದರು.
2ನೇ ವಾರ್ಡ್ ವ್ಯಾಪ್ತಿಗೆ ಒಳಪಡುವ ಎ.ಜೆ.ಕಾಲೋನಿ, ಅಂಬೇಡ್ಕರ್ ಬೀದಿ, ಪೌರ ಕಾರ್ಮಿಕರ ಬೀದಿ, ಸೊಪ್ಪಿನ ಕೇರಿ ಬೀದಿಗಳಲ್ಲಿ ಸಂಚರಿಸಿ ಬಿರುಸಿನ ಮತಯಾಚನೆ ನಡೆಸಿದರು.
ಮುಖಂಡರಾದ ಜಯಪ್ರಕಾಶ ಗುಪ್ತ ಮಾತಯಾಚಿಸಿ ಜನಪರ ಕಾಳಜಿ ಇರುವ ಸುದೇಶ್ ಅವರಿಗೆ ತಮ್ಮ ಅಮೂಲ್ಯ ಮತಗಳನ್ನು ನೀಡುವ ಮೂಲಕ ಜಯಶೀಲರನ್ನಾಗಿ ಮಾಡಿ ವಾರ್ಡ್‍ನ ಮೂಲಭೂತ ಸೌಕರ್ಯಕ್ಕೆ ಒತ್ತನ್ನು ನೀಡಲಾಗುವುದು ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಪ.ಪಂ. ಸದಸ್ಯರುಗಳಾದ ಗೀರೀಶ್‍ಕುಮಾರ್, ಹರೀಶ್‍ಕುಮಾರ್, ಪ.ಪಂ.ಮಾಜಿ ಉಪಾಧ್ಯಕ್ಷ ಬಸವರಾಜು, ಮುಖಂಡರುಗಳಾದ ಸೊಪ್ಪಿನಕೇರಿ ಪ್ರಕಾಶ್, ಜಯರಾಮು, ಪ್ರಕಾಶ್ ಹಾಗೂ ಕಿಟ್ಟಪ್ಪ, ಚಿಕ್ಕತಮ್ಮಯ್ಯ, ಕಾರ್ಯಕರ್ತರು ಸೇರಿದಂತೆ ಇತರರು ಇದ್ದರು.