2ನೇ ರಾಜ್ಯ ಮಟ್ಟದ ಮಾಸ್ಟರ್ ಗೇಮ್ಸ್ನಲ್ಲಿ ಪದಕ-ಅಭಿನಂದನೆ

ದಾವಣಗೆರೆ ಮಾ.26;  ಬೆಂಗಳೂರಿನಲ್ಲಿ ನಡೆದ 2ನೇ ಕರ್ನಾಟಕ ರಾಜ್ಯ ಮಟ್ಟದ ಮಾಸ್ಟರ್ ಗೇಮ್ಸ್ನಲ್ಲಿ ದಾವಣಗೆರೆ ಜಿಲ್ಲೆಯಿಂದ ಭಾಗವಹಿಸಿದ ಕ್ರೀಡಾಪಟುಗಳಾದ ವಿಶಾಲಾಕ್ಷಿ, ನೀಲಮ್ಮ, ಪುಷ್ಪ, ಲಕ್ಷ್ಮಣ ರಾವ್, ನಾಗರಾಜಪ್ಪ, ಲಕ್ಷ್ಮಣ ಕೆ.ಎಂ. ಅಣ್ಣಪ್ಪ, ವೆಂಕಟೇಶ್, ಗುರುಶಾಂತಪ್ಪ, ಫಕ್ಕೀರೇಶ್ ಮತ್ತು ಅಂತರರಾಷ್ಟ್ರೀಯ ತರಬೇತಿದಾರ ಸಂತೋಷ್. ಡಿ ಇವರುಗಳು ಚಿನ್ನ, ಬೆಳ್ಳಿ ಮತ್ತು ಕಂಚಿನ ಪದಕಗಳನ್ನು ಪಡೆದು, ಜಿಲ್ಲೆಗೆ ಕೀರ್ತಿ ತಂದಿರುತ್ತಾರೆ. ಈ ಕ್ರೀಡಾಪಟುಗಳಿಗೆ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕ ಬಿ. ಶ್ರೀನಿವಾಸ್ ಹಾಗೂ ಇಲಾಖೆಯ ಎಲ್ಲಾ ತರಬೇತುದಾರರು ಹಾಗೂ ಜಿಲ್ಲೆಯ ಕ್ರೀಡಾಪಟುಗಳು ಅಭಿನಂದಿಸಿದ್ದಾರೆಂದು ಪ್ರಕಟಣೆ ತಿಳಿಸಿದೆ.