2ನೇ ಬಾರಿ ಮುಖ್ಯಮಂತ್ರಿಯಾಗಿ ಸಿದ್ಧರಾಮಯ್ಯ ಪ್ರಮಾಣ ವಚನ ವಿಜಯಪುರ ಕುರುಬರ ಸಂಘದಿಂದ ವಿಜಯೋತ್ಸವ

ವಿಜಯಪುರ :ಮೇ.22: ರಾಜ್ಯದಲ್ಲಿ ಕಾಂಗ್ರೆಸ್ ಸರಕಾರವು 135 ಶಾಸಕರ ಬಹುಮತದೊಂದಿಗೆ ಅಧಿಕಾರಕ್ಕೆ ಬಂದಿದ್ದು, ಈ ನಿಟ್ಟಿನಲ್ಲಿ ರಾಜ್ಯದ 2ನೇ ಬಾರಿ ಮುಖ್ಯಮಂತ್ರಿಗಳಾಗಿ ಸಿದ್ದರಾಮಯ್ಯನವರು ಇಂದು ಬೆಂಗಳೂರು ಕ್ರೀಡಾಂಗಣದಲ್ಲಿ ಪದಗ್ರಹಣ ಕಾರ್ಯಕ್ರಮ ಜರುಗಿತು. ಇದೇ ವೇಳೆಯಲ್ಲಿ ರಾಜ್ಯದ ಉಪ ಮುಖ್ಯಮಂತ್ರಿಯಾಗಿ ಇದೇ ಮೊದಲ ಬಾರಿಗೆ ಡಿ.ಕೆ. ಶಿವಕುಮಾರ ರವರು ಸಹ ಪ್ರಮಾಣ ಸ್ವೀಕರಿಸಿದರು.
ಸಿದ್ಧರಾಮಯ್ಯನವರ ಪದಗ್ರಹಣ ಕಾರ್ಯಕ್ರಮದ ವಿಜಯೋತ್ಸವ ಕಾರ್ಯಕ್ರಮವನ್ನು ಕುರುಬರ ಸಂಘ ವಿಜಯಪುರ ನಗರ ಘಟಕದ ವತಿಯಿಂದ ನಗರದ ಶಿವಾಜಿ ಸರ್ಕಲ್, ರಾಮ ಮಂಧಿರ, ಶ್ರೀ ಸಿದ್ದೇಶ್ವರ ದೇವಸ್ಥಾನದ ಮುಂದುಗಡೆ ಪಟಾಕ್ಷಿ ಹಾರಿಸಿ, ಸಿಹಿ ಹಂಚುವುದರ ಮೂಲಕ ಗಾಂಧಿಚೌಕ್ ಮಾರ್ಗವಾಗಿ ಕನಕದಾಸ ವೃತ್ತದವರೆಗೆ ಬೃಹತ್ ಬೈಕ್ ರ್ಯಾಲಿ ಹಮ್ಮಿಕೊಳ್ಳಲಾಗಿತ್ತು.
ಇದೇ ವೇಳೆಯಲ್ಲಿ ನಗರ ಘಟಕದ ಅದ್ಯಕ್ಷರಾದ ರಾಜು ಕಗ್ಗೋಡ ಮಾತನಾಡಿ, ರಾಜ್ಯದ ಅಹಿಂದ ಮುಖಂಡರು, ಹಿರಿಯ ರಾಜಕಾರಣಿ, ಸೋಲಿಲ್ಲದ ಸರ್ಧಾರ, 5 ವರ್ಷಗಳ ಕಾಲ ಈ ಹಿಂದೆ ಸುದೀರ್ಘ ಒಳ್ಳೆಯ ಆಡಳಿತ ನೀಡಿದ ಸಿದ್ಧರಾಮಯ್ಯನವರು ಈ ಬಾರಿಯೂ ಸಹ ನುಡಿದಂತೆ ಎಲ್ಲ ಭರವಸೆಗಳನ್ನು ಈಡೇರಿಸುವ ಶಕ್ತಿ ಅವರಿಗೆ ನೀಡಲಿ, ಹಾಗೂ ರಾಜ್ಯದ ಅಭಿವೃದ್ದಿ ಹೊಂದಲಿ ಎಂದು ಹಾರೈಸಿದರು. ಹಾಗೂ ಸಿದ್ಧರಾಮಯ್ಯನವರಿಗೆ ಸರಕಾರವನ್ನು ಒಳ್ಳೆಯ ರೀತಿಯಿಂದ ನಡೆಸಿಕೊಂಡಿ ಹೋಗಲು ಅವರಿಗೆ ಉತ್ತಮ ಆರೋಗ್ಯವನ್ನು ನೀಡಲಿ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಶ್ರೀಕಾಂತ ಸಂಗೋಗಿ, ರಮೇಶ ಕಾಲೇಬಾಗ, ಮಹಾಂತೇಶ ಬೇವೂರ, ಸುರೇಶ ಡೊಂಬಳೆ, ನರೇಶ ಮಾಶ್ಯಾಳ, ಲಕ್ಷ್ಮಣ ಇಂಡಿ, ದೇವಕಾಂತ ಬಿಜ್ಜರಗಿ, ಪರಶುರಾಮ ತರಲಘಟ್ಟಿ, ರಾಜು ಭಿಸೆ ಸುಮಾರು 150ಕ್ಕೂ ಹೆಚ್ಚು ಕುರುಬ ಸಮಾಜದ ಕಾರ್ಯಕರ್ತರು ಅಭಿಮಾನಿಗಳು ಉಪಸ್ಥಿತರಿದ್ದರು.