2ನೇ ಬಾರಿಗೆ ಸಚಿವರಾಗಿ ಡಾ.ಶರಣಪ್ರಕಾಶ್ ಪಾಟೀಲ್ :ಕುಂಟಿತ್ತಗೊಂಡಿದ್ದ ಅಭಿವೃದ್ಧಿಗೆ ವೇಗ; ಸೇಡಂನಲ್ಲಿ ನಿರೀಕ್ಷೆಗಳು ಹೆಚ್ಚು!

(ವಿಶೇಷ ಲೇಖನ:ಬಿಜನಳ್ಳಿ ಸುರೇಶ್)
ಸೇಡಂ,ಮೇ,28: ಸೇಡಂ ಮತಕ್ಷೇತ್ರದಿಂದ ಈ ಬಾರಿ 40, ಸಾವಿರಕ್ಕೂ ಹೆಚ್ಚು ಮತಗಳಿಂದ ಜಯಗಳಿಸಿದ ಅವರು ನಾಲ್ಕು ಬಾರಿ ಶಾಸಕರಾಗಿ ಎರಡನೇ ಬಾರಿ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದ ಸಚಿವ ಡಾ. ಶರಣಪ್ರಕಾಶ್ ಪಾಟೀಲ್ ಅವರಿಗೆ ಸೇಡಂ ಕಾಂಗ್ರೆಸ್ ಪಕ್ಷದ ಹಿರಿಯ ಮುಖಂಡರು ಯುವಕರು ಮಹಿಳೆಯರು ಹೆಚ್ಚಿನ ಕಾರ್ಯಕರ್ತರು ಅಭಿನಂದನೆಗಳು ಸಲ್ಲಿಸಿದ್ದಾರೆ. ಅದರ ಜೊತೆಗೆ ಸೇಡಂ ಜನರಿಂದ ನಿರೀಕ್ಷೆಗಳು ಹೆಚ್ಚಳವಾಗಿವೆ. ಕಳೆದ ಐದು ವರ್ಷಗಳ ಹಿಂದೆ ಅಭಿವೃದ್ಧಿಗೆ ಕುಂಠಿತಗೊಂಡಿದ್ದ ಮಳಖೇಡ ಕಾಗಿಣಾ ನದಿ ಬ್ರಿಜ್, ಸಿಮೆಂಟ್ ನಗದು ಎಂದು ಖ್ಯಾತಿ ಪಡೆದಿರುವ ಈ ಪಟ್ಟಣಕ್ಕೆ ಕಾರ್ಮಿಕರಿಗಾಗಿ ಇಂದಿರಾ ಕ್ಯಾಂಟೀನ್ ನನಗೆ ಬಿದ್ದಿದ್ದು ಹಸಿವು ನೀಗಿಸಲು ಪುನರಾರಂಭಿಸಿ ಆಟೋ ಡ್ರೈವರ್ ಲಾರಿ ಡ್ರೈವರ್ ಕಡೂ ಬಡವರಿಗೆ ಹಸಿವು ನೀಗಿಸಬೇಕಿದೆ, ಅದರ ಜೊತೆಗೆ ಇನ್ನು ಸುಮಾರು ಅಭಿವೃದ್ಧಿ ಕಾಮಗಾರಿಗಳಿಗೆ ವೇಗ ನೀಡಬೇಕಾಗಿದೆ.
ಜನರಲ್ಲಿ ನಿರೀಕ್ಷೆಗಳು ಹೆಚ್ಚಳ: ಸೇಡಂ ತಾಲೂಕಾ ಜಿಲ್ಲಾ ಕೇಂದ್ರವಾಗಬೇಕು, ಕಾಗಿಣಾ, ಕಮಲಾವತಿ ನದಿಗಳಲ್ಲಿ ಮಲಿನವಾದ ನೀರು ಗಿಡಗಂಟೆಗಳಿಂದ ಸೌಂದರ್ಯಕ್ಕೆ ಕುಂಠಿತ ಇದರ ಅಭಿವೃದ್ಧಿಗಾಗಿ ನಿರೀಕ್ಷೆಯಲ್ಲಿರುವ ಜನರು ಮತ್ತು ಮಳಖೇಡ ಗ್ರಾಪಂ ಪಟ್ಟಣ ಪಂಚಾಯಿತಿಯಾಗಿ ಮೇಲ್ದರ್ಜೆಗೇರಿಸಬೇಕಾಗಿದೆ, ಪಟ್ಟಣದ ಚಿಂಚೋಳಿ ರಸ್ತೆಯಲ್ಲಿ ಸರ್ಕಲ್ ಜೊತೆಗೆ ಪುಣ್ಯ ಪುರುಷರ ಪುತ್ತಳಿ ನಿರ್ಮಾಣದ ನಿರೀಕ್ಷೆ ಇದೆ, ಹಾಗೂ ಮುಖ್ಯವಾಗಿ ಪಟ್ಟಣದ ಒಳಗಡೆ ಆಸ್ಪತ್ರೆ ಸರ್ಕಾರಿ ವಿವಿಧ ಇಲಾಖೆಗಳಿಗೆ, ಶಾಲಾ ಕಾಲೇಜಿಗೆ ತೊಂದರೆ ನೀಡುತ್ತಿರುವಂತಹ ಖಾಸಗಿ ಕಂಪನಿಯ ರೈಲ್ವೆ ಟ್ರ್ಯಾಕ್ ನಿಂದಾ ಜನಸಾಮಾನ್ಯರಿಗೆ ದಿನನಿತ್ಯ ತೊಂದರೆ ಅನುಭವಿಸುತ್ತಿದ್ದಾರೆ ಇದಕ್ಕೆ ಸಂಬಂಧಿಸಿದಂತೆ ಸಚಿವ ಶರಣಪ್ರಕಾಶ್ ಪಾಟೀಲ್ ಅವರು ಯಾವ ನಿರ್ಧಾರ ಕೈಗೊಳ್ಳಲಿದ್ದಾರೆ ಎಂಬುದು ಕಾದುನೋಡಬೇಕಿದೆ.ಸೇಡಂನಲ್ಲಿ ಮುಖ್ಯವಾಗಿ ರಿಂಗ್ ರೋಡ್, ಅಭಿವೃದ್ಧಿ ರಾಜ್ಯ ಹೆದ್ದಾರಿ ಅಗಲೀಕರಣ, ದ್ವಿಚಕ್ರ ತ್ರಿಚಕ್ರ ಇನ್ನಿತರ ವಾಹನ ಪಾಕಿರ್ಂಗ್ ವ್ಯವಸ್ಥೆ, ಇಲ್ಲದಿರುವುದು, ಸಾರ್ವಜನಿಕ ಶೌಚಾಲಯ, ಶುದ್ಧ ನೀರಿನ ಘಟಕ ಇದ್ದರೂ ಉಪಯೋಗಕ್ಕೆ ಬಾರದ ಸ್ಥಿತಿಯಲ್ಲಿ ಪಟ್ಟಣದಲ್ಲಿ ಇವೆ, ಇವುಗಳತ್ತ ಗಮನಹರಿಸಿ ಶೈಕ್ಷಣಿಕವಾಗಿ ಹೆಚ್ಚಿನ ಮಟ್ಟದಲ್ಲಿ ಪ್ರಗತಿ ಕಾಣಬೇಕಾಗಿದೆ. ಮುಂಬರುವ ದಿನಗಳಲ್ಲಿ ಯಾವ ರೀತಿ ಇವುಗಳನ್ನು ಜನರಂತೆ ಈಡೇರಿಸುವವರೇ ಎಂಬುದು ಕಾದುನೋಡಬೇಕಿದೆ ಅಷ್ಟೇ.