2ನೇ ದಿನಕ್ಕೆ ಕಾಲಿಟ್ಟ ನಿವೇಶನಕ್ಕಾಗಿ ಅನಿರ್ಧಿಷ್ಟಾವಧಿ ಧರಣಿ


ಸಂಜೆವಾಣಿ ವಾರ್ತೆ
ಕುರುಗೋಡು:ಮಾ.14: ಸಿಪಿಎಂ ಪಕ್ಷ ಸತತ ಹಲವಾರು ವರ್ಷಗಳ ಪ್ರಾಮಾಣಿಕವಾಗಿ ನಡೆಸಿದ ಹೋರಾಟದ ಫಲ ನಿವೇಶನಕ್ಕಾಗಿ ಸರ್ಕಾರ 16 ಎಕರೆ ಜಮೀನು ಖರೀದಿಸಿದೆ ಎಂದು ಸಿಪಿಎಂ ಜಿಲ್ಲಾ ಕಾರ್ಯದರ್ಶಿ ಮಂಡಳಿ ಸದಸ್ಯ ವಿ.ಎಸ್.ಶಿವಶಂಕರ್ ಹೇಳಿದರು.
ಪಟ್ಟಣದ ಪುರಸಭೆ ಮುಂಭಾಗದಲ್ಲಿ ತಾಲ್ಲೂಕು ಸಿಪಿಎಂ ಕಾರ್ಯಕರ್ತರು ನಿರ್ಗತಿಕ ಬಡ ಕುಟುಂಬಗಳಿಗೆ ನಿವೇಶನದ ಸೂರು ಒದಗಿಸುವಂತೆ ಒತ್ತಾಯಿಸಿ 2ನೇ ದಿನದ ಅನಿರ್ಧಿಷ್ಟಾವಧಿ ಧರಣಿಯಲ್ಲಿ ಅವರು ಮಾತನಾಡಿದರು.
ನಿವೇಶನ ಹಂಚಿಕೆ ಆಗೋವರೆಗೂ ಅನಿರ್ಧಿಷ್ಟಾವಧಿ ಧರಣಿ ಮುಂದುವರಿಸುತ್ತೇವೆ. ವಿಧಾನಸಭಾ ಚುನಾವಣೆ ಹತ್ತಿರವಾಗುತ್ತಿದ್ದಂತೆ ಜನರಿಗೆ ಅತ್ತಿರವಾಗಲು, ಮನ ಓಲೈಸಲು ಶಾಸಕರು ನಾನು ನಿಮಗೆ ನಿವೇಶ ಕೊಡಿಸುತ್ತೇನೆ ಎಂದು ಸುಳ್ಳು ಆಶ್ವಾಸನೆ ನೀಡುತ್ತಿದ್ದಾರೆ ಎಂದು ಆರೋಪಿಸಿದರು.
ನಿವೇಶನಕ್ಕಾಗಿ ಅರ್ಜಿಸಿಲ್ಲಿಸಿದವರ ಬಡ ನಿರ್ಗತಿಕರನ್ನು ಪರಿಗಣಿಸಿ ನಿವೇಶನ ಫಲಾನುಭವಿಗಳನ್ನಾಗಿ ಆಯ್ಕೆಮಾಡಬೇಕು. ಉಳ್ಳವರಿಗರೆ ಹಂಚಿಕೆ ಮಾಡಿದರೆ ಹೋರಾಟ ತೀವ್ರವಾಗಿತದ್ದೇ ಎಂದು ಎಚ್ಚರಿಸಿದರು.
ಈ ಸಂದರ್ಭದಲ್ಲಿ ಗಾಳಿ ಬಸವರಾಜ, ಎಸ್‍ಪಿ. ಮಹಮ್ಮದ್ ಖಾನ್, ಯಂಕಮ್ಮ, ಕೆಂಚಪ್ಪ, ಹುಲುಗಪ್ಪ, ಮಂಜುನಾಥ,ಸಿ.ರಾಮಣ್ಣ, ಜೈತುನ್ ಬಿ, ರಾಣೆಮ್ಮ, ಸುಜಾತಾ ಮತ್ತು ಹೊಳೆಮ್ಮ ಇದ್ದರು. One attachment • Scanned by GmailReplyForward