2ನೇ ಡೋಸ್ ಲಸಿಕೆ ಪಡೆದ ಪ್ರಧಾನಿ ಮೋದಿ

ನವದೆಹಲಿ, ಏ. ೮- ಪ್ರಧಾನಿ ನರೇಂದ್ರ ಮೋದಿ ಅವರು, ಮೊದಲ ಡೋಸ್ ಪಡೆದ ೩೭ ದಿನಗಳ ಬಳಿಕ ೨ನೇ ಡೋಸ್ ಲಸಿಕೆಯನ್ನು ಇಂದು ಪಡೆದರು.
ದೆಹಲಿಯ ಅಖಿಲ ಭಾರತೀಯ ವೈದ್ಯಕೀಯ ವಿಜ್ಞಾನ ಸಂಸ್ಥೆಗಳ ಆಸ್ಪತ್ರೆಯಲ್ಲಿ ಲಸಿಕೆ ಪಡೆದ ಅವರು, ಅರ್ಹ ಎಲ್ಲರೂ ಲಸಿಕೆ ಪಡೆಯುವಂತೆ ಅವರು ಮನವಿ ಮಾಡಿದ್ದಾರೆ.
ಮಾರ್ಚ್ ೧ ರಂದು ಮೊದಲ ಡೋಸ್ ಲಸಿಕೆ ಪಡೆಯುವ ಮೂಲಕ ದೇಶಾದ್ಯಂತ ೬೦ ವರ್ಷ ದಾಟಿದ ಮತ್ತು ೪೫ ವರ್ಷ ವಯೋಮಾನದ ಮತ್ತು ವಿವಿಧ ರೋಗಗಳಿಂದ ಬಳಲುತ್ತಿರುವ ಮಂದಿಗೆ ಲಸಿಕೆ ಹಾಕುವ ಮೂಲಕ ಅಭಿಯಾನಕ್ಕೆ ಚಾಲನೆ ನೀಡಿದರು.
ಈ ಕುರಿತು ಟ್ವೀಟ್ ಮಾಡಿರುವ ಪ್ರಧಾನಿ ನರೇಂದ್ರ ಮೋದಿ ಅವರು, ಲಸಿಕೆ ಪಡೆದು ಕೋವಿಡ್ ವಿರುದ್ಧದ ಹೋರಾಟದಲ್ಲಿ ಭಾಗಿಯಾಗಿ ಎಂದು ಅವರು ಮನವಿ ಮಾಡಿದ್ದಾರೆ.
ಏಮ್ಸ್ ನಲ್ಲಿ ತಾವು ೨ನೇ ಡೋಸ್ ಲಸಿಕೆ ಪಡೆದಿದ್ದು, ಅರ್ಹ ಎಲ್ಲರೂ ಲಸಿಕೆ ಪಡೆಯಿರಿ ಎಂದು ಮನವಿ ಮಾಡಿದ್ದಾರೆ.
ಭಾರತ್ ಬಯೋಟೆಕ್ ಮತ್ತು ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ, ದೇಶೀಯವಾಗಿ ಅಭಿವೃದ್ಧಿ ಪಡಿಸಿರುವ ಕೋವ್ಯಾಕ್ಸಿನ್ ಲಸಿಕೆಯನ್ನು ಅವರು ಪಡೆದಿದ್ದಾರೆ.
ಕಳೆದ ಬಾರಿ ಮೊದಲ ಬಾರಿ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಲಸಿಕೆ ನೀಡಿದ್ದ ಪುದುಚೆರಿ ಮೂಲಕ ನರ್ಸ್ ನಿವೇದಿತಾ ಇಂದೂ ಕೂಡ ಪ್ರಧಾನಿಗೆ ಲಸಿಕೆ ಹಾಕಿದ್ದಾರೆ. ಈ ಬಾರಿ ನಿಷಾ ಶರ್ಮಾ, ಪ್ರಧಾನಿ ಅವರಿಗೆ ಲಸಿಕೆ ಹಾಕುವ ಹೊಸತಂಡದಲ್ಲಿದ್ದಾರೆ.