2ನೇ ಅವಧಿಯಲ್ಲಿ ಸಂಡೂರು ತಾ. ಪೂರ್ಣ ಅಭಿವೃದ್ದಿ- ಈ.ತುಕರಾಂ


ಸಂಡೂರು :ಅ:12:  ಕಾಂಗ್ರೇಸ್ ಸರ್ಕಾರ ಅಧಿಕಾರಕ್ಕೆ ಬಂದಿದ್ದು 2ನೇ ಅವಧಿಯಲ್ಲಿ ಪೂರ್ಣಪ್ರಮಾಣದ ಅಭಿವೃದ್ದಿಯನ್ನು ಮಾಡುವ ಮೂಲಕ ಸಾರ್ವಜನಿಕರಿಗೆ ಮೂಲಭೂತಸೌಲಭ್ಯಗಳನ್ನು ಒದಗಿಸೋಣ ಎಂದು ಶಾಸಕ ಈ.ತುಕರಾಂ ತಿಳಿಸಿದರು.
ಅವರು ಪಟ್ಟಣದ ಶಾಸಕರ ಕಛೇರಿಯಲ್ಲಿ ತಾಲ್ಲೂಕಿನ ನರಸಿಂಗಾಪುರ ಗ್ರಾಮ ಪಂಚಾಯ್ತಿಯ ನೂತನ ಅಧ್ಯಕ್ಷ,ಉಪಾಧ್ಯಕ್ಷರನ್ನು ಶಾಸಕ ಈ .ತುಕಾರಾಂಅಭಿನಂದಿಸಿ ಮಾತನಾಡಿ ಗ್ರಾಮದ ಪ್ರತಿ ಕಾಮಗಾರಿಗಳನ್ನು ನಿರ್ವಹಿಸಲಾಗುವುದು. ಸೆಪ್ಟಂಬರ್ ತಿಂಗಳಲ್ಲಿ ನರಸಿಂಗಾಪುರದ ಆರೋಗ್ಯ ಕೇಂದ್ರ, ಸಿಸಿ ರಸ್ತೆ,ಸಮುದಾಯ ಭವನ,ಆಕಾಶ್ ನಗರದ ಅಂಗನವಾಡಿ ಕೇಂದ್ರ,ಆರ್.ಒ ಪ್ಲಾಂಟ್ ಉದ್ಘಾಟನೆ ಮಾಡಲಾಗುವುದು ಎಂದುತಿಳಿಸಿದರು. ಅಲ್ಲದೆ ಶಿಕ್ಷಣ, ಆರೋಗ್ಯ, ಮೂಲಭೂತಸೌಲಭ್ಯಗಳನ್ನು ಒದಗಿಸುವ ನಿಟ್ಟಿನಲ್ಲಿ ನೂತನ ಅಧ್ಯಕ್ಷರು ಉಪಾಧ್ಯಕ್ಷರು ಶ್ರಮಿಸಬೇಕೆಂದು ಕಿವಿಮಾತು ಹೇಳಿದರು.
ನರಸಿಂಗಾಪುರ ಗ್ರಾಮ ಪಂಚಾಯಿತಿಯ 2ನೇ ಅವಧಿಯ ಅಧ್ಯಕ್ಷ ಸ್ಥಾನ ಸಾಮಾನ್ಯ ಮಹಿಳೆ ಮೀಸಲಾತಿಯಡಿ ಶಿಲ್ಪಾಶ್ರೀನಾಥ್, ಉಪಾಧ್ಯಕ್ಷ ಸ್ಥಾನಕ್ಕೆ ಎಸ್ಟಿ ಮೀಸಲಾತಿಯಲ್ಲಿ ಮುದ್ದೆ ಪರ್ವತ್ ಕುಮಾರ್ ಆಯ್ಕೆಯಾಗಿದ್ದಾರೆ. ಈ ಸಂದರ್ಭದಲ್ಲಿ ಎಲ್ಲಾ 20 ಕಾಂಗ್ರೆಸ್ ಬೆಂಬಲಿತ ಸದಸ್ಯರು ಹಾಗೂ ಊರಿನ ಮುಖಂಡರು ಶಾಸಕ ಈ .ತುಕಾರಾಂ ಅವರನ್ನು ಭೇಟಿಯಾಗಿ ಸನ್ಮಾನಿಸಿದರು. ಈ ವೇಳೆ ಶಾಸಕರು ಅಭಿನಂದನೆ ಸಲ್ಲಿಸಿದ್ದಾರೆ.
ಈ ಸಂದರ್ಭದಲ್ಲಿ ಮುಖಂಡರಾದ ಬಿ.ಜಯಣ್ಣ, ಮರಿಸ್ವಾಮಿ ಹೆಚ್. ಶ್ರೀಕಾಂತ್ ಆರ್,ಚೌಡಪ್ಪ, ಬಸವನಗೌಡ, ಎಂ.ಪಂಪಾಪತಿ, ಎನ್.ಹೆಚ್ ಭೀಮಪ್ಪ,ನಾಗಪ್ಪ ಉಬ್ಬಳಗಂಡಿ, ಎಂ.ವೆಂಕಟೇಶ್ , ನೆಹರೂ ದೇಸಾಯಿ ,ಯರ್ರಿಸ್ವಾಮಿ, ಹೆಚ್ .ಭೀಮಪ್ಪ, ಎಂ.ಶ್ರೀನಿವಾಸ್ , ಪ್ರಶಾಂತ್ ,ಶ್ರೀನಾಥ್ ಹಾಗೂ ಗ್ರಾಮ ಪಂಚಾಯ್ತಿ ಸದಸ್ಯರು ಇದ್ದರು.