ಏರ್ ಪೋರ್ಟ್ ಟ್ಯಾಕ್ಸಿಗಳ ದರ ತಾರತಮ್ಯದಿಂದ ಮನನೊಂದು ಟ್ಯಾಕ್ಸಿಯಲ್ಲಿಯೆ ಆತ್ಮಹತ್ಯೆ ಮಾಡಿಕೊಂಡ ಕೆ.ಎಸ್.ಟಿ.ಡಿ.ಸಿ ಚಾಲಕ ಪ್ರತಾಪ್ ಕುಟುಂಬಕ್ಕೆ ಸರ್ಕಾರದಿಂದ ಐದು ಲಕ್ಷ ರೂಗಳ ಪರಿಹಾರ ಧನ ಕೊಡಿಸುವ ಜೊತೆಗೆ ಜಯಕರ್ನಾಟಕ ಜನಪರ ವೇದಿಕೆಯ ಸಂಸ್ಥಾಪಕ ಅಧ್ಯಕ್ಷ ಬಿ.ಗುಣರಂಜನ್ ಶೆಟ್ಟಿ ಮಾರ್ಗದರ್ಶನದಲ್ಲಿ ವೇದಿಕೆವತಿಯಿಂದ ರಾಜ್ಯಾಧ್ಯಕ್ಷ ಆರ್.ಚಂದ್ರಪ್ಪ, ಕಾರ್ಯಧ್ಯಕ್ಷ ಅಣ್ಣಪ್ಪ ಓಲೇಕರ್,ಮಹಾ ಸಂಚಾಲಕರಾದ ಶೇ.ಬೋ. ರಾಧಾಕೃಷ್ಣ,ಬೆಂ.ನಗರ ಜಿಲ್ಲೆ ಅಧ್ಯಕ್ಷ ಜೆ.ಶ್ರೀನಿವಾಸ್ ಮೃತನ ಕುಟುಂಬಕ್ಕೆ ೨೫ ಸಾವಿರ ರೂಗಳ ಚೆಕ್ ನೀಡಿದರು. ಈ ವೇಳೆ ಟ್ಯಾಕ್ಸಿ ಘಟಕ ಅಧ್ಯಕ್ಷರಾದ ಮೂರ್ತಿ ಗಿರಿನಗರ, ವಿಜಯನಗರ ವಿಧಾನಸಭಾ ಕ್ಷೇತ್ರ ಅಧ್ಯಕ್ಷ ಜಗದೀಶ್ ಸೇರಿ, ಪದಾಧಿಕಾರಿಗಳು ಉಪಸ್ಥಿತರಿದ್ದರು.