ನಿರ್ಧಾರ ಪುನರ್ ಪರೀಶಿಲಿಸಿ: ಸಿಎಂಗೆ ಮನವಿ

ಬೆಂಗಳೂರು, ಏ.3- ಚಿತ್ರಮಂದಿರಗಳಲ್ಲಿ ಶೇಕಡ 50ರಷ್ಟು ಪ್ರೇಕ್ಷಕರ ಸಾಮರ್ಥ್ಯಕ್ಕೆ ಮಿತಿಗೊಳಿಸುವ ಸರ್ಕಾರದ ಕ್ರಮವನ್ನು ಪುನರ್ ಪರಿಶೀಲಿಸುವಂತೆ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಅವರಿಗೆ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷ ಡಿ.ಆರ್ ಜಯರಾಜ್ ಮನವಿ ಮಾಡಿದ್ದಾರೆ.

ಯುವರತ್ನ ಚಿತ್ರ ಒಂದು ದಿನ ಮಾತ್ರ ಪ್ರದರ್ಶನ ಕಂಡಿರಿವುದು. ಇಂತಹ ಸಮಯದಲ್ಲಿ‌ ಚಿತ್ರಮಂದಿರಗಳಲ್ಲಿ ಶೇ‌.50 ರಷ್ಟು ಪ್ರೇಕ್ಷಕರ ಮಿತಿ‌ಗೊಳಿಸಿರುವುದು ಆರ್ಥಿಕ ತೊಂದರೆಗೆ ಸಿಲಕಲಿದೆ ಎನ್ನುವ ವಿಷಯವನ್ನು ಮನವರಿಕೆ ಮಾಡಿಕೊಡಲಾಗಿದೆ ಎಂದರು

ಸರ್ಕಾರದ ನಿರ್ಧಾರದಿಂದ ನಿರ್ಮಾಪಕರು,ವಿತರಕರು, ಚಿತ್ರಮಂದಿರದ ಮಾಲೀಕರಿಗೆ ತೊಂದರೆಯಾಗಲಿದೆ ಹೀಗಾಗಿ ಚಿತ್ರರಂಗದ ಬೇಡಿಕೆಯನ್ನು ಪುನರ್ ಪರಿಶೀಲಿಸಿ ಶೇ.100 ರಷ್ಟು ಪ್ರೇಕ್ಷಕರ ಸಾಮರ್ಥ್ಯ ಕ್ಕೆ ಅವಕಾಶ ಮಾಡಿಕೊಡುವಂತೆ ಮನವಿ ಮಾಡಿದ್ದು ಅವರೂ ಸಕಾರಾತ್ಮಕ ವಾಗಿ ಸ್ಪಂದಿಸಿದ್ದಾರೆ ಎಂದರು.

ಭರವಸೆ:

ಇಂದು ಒಂದು ದಿನ ಅವಕಾಶ ಮಾಡಿಕೊಡಿ ನಾಳೆಯೊಳಗೆ ಅಂತಿಮ ನಿರ್ದಾರ ಕೈಗೊಳ್ಳುತ್ತೇವೆ ಎನ್ನುವ ಭರವಸೆಯನ್ನು ಅವರು ನೀಡಿದ್ದಾರೆ ಎಂದು ಹೇಳಿದರು.

ನಿರ್ಮಾಪಕರ ಸಂಘದ ಅಧ್ಯಕ್ಷ ಡಿ.ಕೆ ಪ್ರವೀಣ್ ಈ ಸಂದರ್ಭ ದಲ್ಲಿ ಇದ್ದರು