197 ದೇಶಗಳ ಹೆಸರುಮತ್ತು ಧ್ವಜಗಳನ್ನು 2 ನಿಮಿಷ 5 ಸೆಕೆಂಡ್‍ಗಳಲ್ಲಿ ಗುರುತಿಸಿದ ಪುಟಾಣಿ ಬಾಲಕ

ಗುರುಮಠಕಲ್ : ಬೆಳೆಯುವ ಪೈರು ಮೊಳಕೆಯಲ್ಲಿ ನೋಡು ಎಂಬಂತೆ ಮಕ್ಕಳಲ್ಲಿ ಅಡಗಿದ್ದ ಪ್ರತಿಭೆ ಬೆಳಕಿಗೆ ಬರಲು ಸೂಕ್ತ ಮಾರ್ಗದರ್ಶನ ನೀಡುವುದು ಅಗತ್ಯ ಒಂದು ವೇಳೆ ಅಂತಹ ವೇದಿಕೆ ಸಿಕ್ಕಲ್ಲಿ ಮಕ್ಕಳ ಪ್ರತಿಭೆ ವರ ಬರುವುದರಲ್ಲಿ ಸಂದೇಹವೇ ಇಲ್ಲ ಉದಾಹರಣೆಗೆ ಈ ಬಾಲಕ ಎಸ್.ಎಲ್.ಟಿ ಪಬ್ಲಿಕ್ ಶಿಕ್ಷಣ ಸಂಸ್ಥೆಯಲ್ಲಿ ಒಂದನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿ ಲಕ್ಷ್ಮಿ ತಿಮ್ಮಪ್ಪ ರಾಠೋಡ್ ಎಂಬ 6 ವರ್ಷದ ಬಾಲಕ ಎರಡು ನಿಮಿಷ ಐದು ಸೆಕೆಂಡ್ ಗಳಲ್ಲಿ 197 ದೇಶಗಳ ಹೆಸರು ಹಾಗೂ ಧ್ವಜಗಳನ್ನು ಗುರುತಿಸಿ ಅರಳು ಹುರಿದಂತೆ ಹೇಳಿ ಬೆರಗುಗೊಳಿಸಿದನು.

ಲಾಕ್ ಡೌನ್ ಸಂದರ್ಭದಲ್ಲಿ ಪಾಠದ ಜೋತೆ ಪಠ್ಯೇತರ ಚಟುವಟಿಕೆಯಲ್ಲಿ ಬಾಲಕನ ವಿಶೇಷ ಆಸಕ್ತಿಯನ್ನು ಗಮನಿಸಿದ ಶಿಕ್ಷಕಿ ವಿಜಯಲಕ್ಷ್ಮೀ, ಬಾಲಕನ ಅಭ್ಯಾಸಕ್ಕೆ ಬೇಕಾದ ಪೂರಕ ವ್ಯವಸ್ಥೆಯನ್ನು ಮಾಡಿದ ಪರಿಣಾಮ ಇಂದು ಬಾಲಕನಲ್ಲಿ ಅಡಗಿದ ಪ್ರತಿಭೆ ಅನಾವರಣ ಗೊಂಡಿದೆ, ಪ್ರತಿ ಪಾಲಕರು ಹಾಗೂ ಶಿಕ್ಷಕರು ಮಕ್ಕಳಿಗೆ ಇರುವ ಆಸಕ್ತಿಯನ್ನು ಗಮನಿಸಿ ಅವರ ಅಭ್ಯಾಸಕ್ಕೆ ಸೂಕ್ತ ವಾತಾವರಣ ಕಲ್ಪಿಸಿದರೆ ಗಡಿನಾಡಿನ ಭಾಗದಲ್ಲಿ ಅನೇಕ ಪ್ರತಿಭೆಗಳು ಹೊರಬರುವುದರಲ್ಲಿ ಸಂದೇಹವಿಲ್ಲ.

8ತಿಂಗಳ ಹಿಂದೆ ಇದೆ ಶಾಲೆಯ ಸಾಯಿಅಖೀರಾ ಎಂಬ ಬಾಲಕಿ ರಾಷ್ಟ್ರ ಮಟ್ಟದಲ್ಲಿ ತನ್ನ ಸಾಧನೆ ಮಾಡುವ ಮೂಲಕ ಏಶಿಯನ್ ಬುಕ್ ಆಫ್ ರೆಕಾಡ್ರ್ಸ್‍ನಲ್ಲಿ ಸ್ಥಾನ ಪಡೆದು ಶಾಲೆಗೆ ಕೀರ್ತಿ ತಂದಿದ್ದಳು. ಇನ್ನು ಬಾಲಕ ಸಾಧನೆಯನ್ನು ಗಮನಿಸಿದ ಎಸ್.ಎಲ್.ಟಿ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ನರೇಂದ್ರ ರಾಠೋಡ್, ಬಾಲಕ ಹಾಗೂ ತರಬೇತಿ ನೀಡಿದ ಶಿಕ್ಷಕಿಯನ್ನು ಸನ್ಮಾನಿಸಿ ಗೌರವಿಸಿದರು.

ಈ ಸಂಧರ್ಭದಲ್ಲಿ ಶಿಕ್ಷಣ ಸಂಯೋಜಕ ಶಿವರಾಜ ಸಾಕ, ಸಿಆರ್‍ಸಿ ನಾರಾಯಣರೆಡ್ಡಿ ಚಪೇಟ್ಲಾ, ಸಂಸ್ಥೇಯ ಅಢಳಿತಾಧಿಕಾರಿ ವೆಂಕಟ್ ಚೌವ್ಹಾನ, ಕಾಲೇಜಿನ ಪ್ರಚಾರ್ಯರಾದ ಚಿನ್ನರಾಜು, ವೆಂಕಟಪ್ಪ ಕಾಕಲವಾರ ಹಾಗೂ ಸಿಬ್ಬಂದಿ ಇದ್ದರು.