ಧಾರವಾಡ ಜಿಲ್ಲೆಯ ನೆಹರು ಯುವ ಕೇಂದ್ರ, ಯಾದವಾಡದ ಶ್ರೀ ವಾಲ್ಮೀಕಿ ಸಾಂಸ್ಕøತಿಕ ಹಾಗೂ ಕ್ರೀಡಾ ಯುವ ಸಂಘದ ಸಹಯೋಗದಲ್ಲ್ಲಿ ಶ್ರೀ ಗುರು ಮಡಿವಾಳೇಶ್ವರ ಸಂಯುಕ್ತ ಪದವಿ ಪೂರ್ವ ಕಾಲೇಜಿನ ಮೈದಾನದಲ್ಲಿ ಆಯೋಜಿಸಲಾಗಿದ್ದ ತಾಲೂಕು ಮಟ್ಟದ ಕ್ರೀಡಾಕೂಟವನ್ನು ಗರಗ ಪೋಲಿಸ್ ಠಾಣೆಯ ಪಿ.ಎಸ್.ಐ ಎಮ್.ಎ. ಪಾಟೀಲ ಮತ್ತು ಕಿರಣ ಮೋಹಿತೆ ಉದ್ಘಾಟಿಸಿದರು. ಕಾಲೇಜಿನ ಪ್ರಾಚಾರ್ಯ ಎಮ್.ಡಿ. ಮನ್ನಿಕೇರಿ, ಹಿರಿಯ ಉಪನ್ಯಾಸಕ ರಮೇಶ ಲಮಾಣಿ, ನೆಹರು ಯುವ ಕೇಂದ್ರದ ಜಿಲ್ಲಾ ಯುವ ಅಧಿಕಾರಿ ಎಮ್. ಗೌತಮರೆಡ್ಡಿ, ರಾಷ್ಟ್ರೀಯ ಯುವ ಕಾರ್ಯಕರ್ತರಾದ ವಿರೇಶ ಸವದತ್ತಿ, ಶಿವಾಜಿ ಕಡ್ಡ್ಡೆಪ್ಪನವರ ಪಾಲ್ಗೊಂಡಿದ್ದರು.