ಮಾಜಿ ಸಚಿವ ರಮೇಶ್ ಜಾರಕಿಹೊಳಿ ಬಂಧಿಸುವಂತೆ ಹಾಗೂ ನ್ಯಾಯಾಂಗದ ಮೊರೆ ಹೋಗಿರುವ ೬ ಮಂದಿ ಸಚಿವರುಗಳ ರಾಜೀನಾಮೆಗೆ ಒತ್ತಾಯಿಸಿ ಇಂದು ಮೌರ್ಯ ವೃತ್ತ ಗಾಂಧಿ ಪ್ರತಿಮೆ ಬಳಿ ಕಾಂಗ್ರೆಸ್ ನಾಯಕರು ಪ್ರತಿಭಟನೆ ನಡೆಸಿದರು. ಮಾಜಿ ಮೇಯರ್‌ಗಳಾದ ಎಂ. ರಾಮಚಂದ್ರಪ್ಪ, ಮಂಜುನಾಥರೆಡ್ಡಿ, ಜೆ. ಹುಚ್ಚಪ್ಪ, ಪದ್ಮಾವತಿ, ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಎಂ. ಉದಯಶಂಕರ್, ಜಿಲ್ಲಾ ಅಧ್ಯಕ್ಷರುಗಳಾದ ಜಿ. ಶೇಖರ್, ಜಿ. ಕೃಷ್ಣಪ್ಪ, ಎಂ. ರಾಜ್‌ಕುಮಾರ್ ಹಾಗೂ ಕಾರ್ಯಕರ್ತರುಗಳು ಭಾಗವಹಿಸಿದ್ದರು.