ಅಖಿಲ ಭಾರತ ವೀರಶೈವ ಮಹಾಸಭಾ ಹುಬ್ಬಳ್ಳಿ ತಾಲೂಕು ಯುವ ಘಟಕದ ಆಶ್ರಯದಲ್ಲಿ ಗೋಪನಕೊಪ್ಪ ದಾನೇಶ್ವರಿ ಕಾಲೋನಿಯಲ್ಲಿರುವ ಶ್ರೀ ದಾನೇಶ್ವರಿ ದೇವಸ್ಥಾನದ ಆವರಣದಲ್ಲಿ ಶ್ರೀ ಆದಿ ಜಗದ್ಗುರು ರೇಣುಕಾಚಾರ್ಯ ಮೂರ್ತಿಗೆ ಅಭಿಷೇಕ ಮಾಡಿ ಜಯಂತಿಯನ್ನು ಆಚರಿಸಲಾಯಿತು. ಕಾರ್ಯಕ್ರಮದ ಸಾನಿಧ್ಯವನ್ನು ವೇದಮೂರ್ತಿ ಜಿ.ಎಸ್. ಹಿರೇಮಠ ವಹಿಸಿದ್ದರು. ಸಮಾಜದ ಮುಖಂಡರಾದ ಸದಾನಂದ ವೀ ಡಂಗನವರ, ರವಿ ದಾಸನೂರ, ಮಂಜುನಾಥ್ ಹೆಬಸೂರ, ಪುನೀತ್ ಅಡಿಗಲ ಮತ್ತಿತರರು ಉಪಸ್ಥಿತರಿದ್ದರು.