ಇತ್ತೀಚಿಗೆ ಧಾರವಾಡ ಜಿಲ್ಲಾ ಪಂಚಾಯತಿ ಆವರಣದಲ್ಲಿ ಜಿ.ಪಂ ಉಪಾಧ್ಯಕ್ಷ ಶಿವಾನಂದ ಕರಿಗಾರವರು ವಿವಿಧ ಬೇಡಿಕೆಗಳಿಗೆ ಆಗ್ರಹಿಸಿ ಧರಣಿ ಸತ್ಯಾಗ್ರಹ ನಡೆಸುತ್ತಿದ್ದ ಸಂದರ್ಭದಲ್ಲಿ ಅವರಿಗೆ ಬೆಂಬಲ ಸೂಚಿಸಿ ಇಂದು ಧಾರವಾಡ ಜಿಲ್ಲಾ ಕಾಂಗ್ರೆಸ್ ಸಮಿತಿ ಅಧ್ಯಕ್ಷರಾದ ಅನೀಲ್ ಕುಮಾರ್ ಪಾಟೀಲ್ ಅವರು ಭೇಟಿ ನೀಡಿದರು.ಈ ಸಂದರ್ಭದಲ್ಲಿ ಜಿ.ಪಂ ಅಧ್ಯಕ್ಷೆ, ವಿಜಯಲಕ್ಷ್ಮಿ ಪಾಟೀಲ್, ಸದಸ್ಯರಾದ ಈರವ್ವ ದಾಸನಕೊಪ್ಪ, ವಿದ್ಯಾ ಬಾವನವರ, ರೇಣುಕಾ ಇಬ್ರಾಹಿಂಪುರ, ಗಾಯತ್ರಿ ರಾಯರಡ್ಡಿ, ಹುಬ್ಬಳ್ಳಿ ತಾಲ್ಲೂಕು ಪಂಚಾಯತಿ ಅಧ್ಯಕ್ಷರಾದ ಚನ್ನಮ್ಮ ಗೊಲ9 ಮತ್ತು ಇತರೆ ಪ್ರಮುಖರು ಉಪಸ್ಥಿತರಿದ್ದರು.