ಧಾರವಾಡದ ರಾಷ್ಟ್ರೀಯ ಮಕ್ಕಳ ಪ್ರತಿಭಾ ಕೇಂದ್ರ ಹಾಗೂ ಪತ್ರಕರ್ತರ ವೇದಿಕೆ ಬೆಂಗಳೂರು ಇವರ ಆಶ್ರಯದಲ್ಲಿ ನಗರದ ರಂಗಾಯಣ ಸುವರ್ಣ ಸಮುಚ್ಛಯದಲ್ಲಿ ನಡೆದ 12ನೇ ಮಕ್ಕಳ ಸಾಂಸ್ಕøತಿಕ ಸಮ್ಮೇಳನದಲ್ಲಿ ನಾದ ಝೇಂಕಾರ ಸಾಂಸ್ಕøತಿಕ ಸಂಘದ ಕಾರ್ಯದರ್ಶಿ ಯಮನಪ್ಪ ಜಾಲಗಾರ ಅವರನ್ನು ರಾಷ್ಟ್ರೀಯ ಮಕ್ಕಳ ಪ್ರತಿಭಾ ಕೇಂದ್ರದ ಧಾರವಾಡ ಜಿಲ್ಲಾ ಅಧ್ಯಕ್ಷರನ್ನಾಗಿ ನೇಮಿಸಿ ಜಿಲ್ಲಾ ಅಧ್ಯಕ್ಷರ ಪತ್ರ ನೀಡಿ ಅವರನ್ನು ಸನ್ಮಾನಿಸಲಾಯಿತು. ಈ ಸಂದರ್ಭದಲ್ಲಿ ಹಿರಿಯ ವಿದುಷಿ ಪಾರ್ವತಿದೇವಿ ಹೊಂಬಾಳೆ, ಹಿರಿಯ ವಾರ್ತಾ ಅಧಿಕಾರಿ ಮಂಜುನಾಥ ಡೊಳ್ಳಿನ, ಸಾಹಿತಿ ಮಾಂತೇಶ ಮಲ್ಲನಗೌಡರ, ಪತ್ರಕರ್ತರ ಜಿ.ಎಸ್. ಗೋನಾಳ, ರಾಷ್ಟ್ರೀಯ ಪ್ರತಿಭಾ ಕೇಂದ್ರದ ಸಂಸ್ಥಾಪಕ ಮಹೇಶ ಬಾಬು ಸುರ್ವೆ ಮತ್ತು ಇತರರು ಉಪಸ್ಥಿತರಿದ್ದರು.