19.82 ಲಕ್ಷ ಪಡಿತರ ಸದಸ್ಯರಿಗೆ 33.22 ಕೋಟಿ ರೂ. ವರ್ಗಾವಣೆ ಶುರು

ಕಲಬುರಗಿ: ಜು.12: ರಾಜ್ಯ ಸರ್ಕಾರವು ಐದು ಕೆ.ಜಿ. ಅಕ್ಕಿಯ ಬದಲಾಗಿ ಪ್ರತಿಯೊಬ್ಬರಿಗೆ ರೂ 170 ರಂತೆ ಜಿಲ್ಲೆಯ 19,82,494 ಜನರಿಗೆ 33.22 ಕೋಟಿ ರೂ.ಗಳ ಹಣವನ್ನು ಪ್ರಸಕ್ತ ತಿಂಗಳು ಬ್ಯಾಂಕ್ ಖಾತೆ ಮೂಲಕ ಜಮಾ ಮಾಡಲಾಗುತ್ತಿದೆ ಎಂದು ಕಲಬುರಗಿ ಜಿಲ್ಲಾಧಿಕಾರಿ ಬಿ.ಫೌಜಿಯಾ ತರನ್ನುಮ್ ತಿಳಿಸಿದ್ದಾರೆ.

ಪಡಿತರ ಚೀಟಿದಾರರ ವಿವರ: ಚಾಲ್ತಿ ಕಾರ್ಡ 5,71,459 ಫಲಾನುಭವಿಗಳು 19,82,494 ಖಾತೆ ಜೊಡಣೆಯಾಗದ ಕಾರ್ಡ 64,171 ಪಾವತಿಯಾಗುವ ಮೊತ್ತ 33.22 ಕೋಟಿ ರೂ ಇರುತ್ತದೆ. ಜಿಲ್ಲೆಯ 5,71,459 ಚಾಲ್ತಿ ಪಡಿತರ ಚೀಟಿಗಳಿದ್ದು 5,06,742 ಚೀಟಿಗಳು ಬ್ಯಾಂಕ್ ಖಾತೆಗೆ ಜೋಡಣೆಯಾಗಿವೆ. 19,54,141 ಸದಸ್ಯರಿಗೆ ನೇರ ನಗದು ವರ್ಗಾವಣೆಯಾಗಲಿದೆ.

ಇನ್ನೂ 64,717 ಪಡಿತರ ಚೀಟಿಗಳು ಬ್ಯಾಂಕ್ ಖಾತೆಗೆ ಜೋಡಣೆಯಾಗಿಲ್ಲ ನೇರ ನಗದು ವರ್ಗಾವಣೆಯ ಲಾಭ ಪಡೆಯಬೇಕು ಎಂದರೆ ತಕ್ಷಣ ತಮ್ಮ ಬ್ಯಾಂಕಗಳಿಗೆ ಹೋಗಿ ಆಧಾರ್ ಕಾರ್ಡನೊಂದಿಗೆ ಜೋಡಣೆ ಮಾಡಿಸಬೇಕು(ಇ ಕೆವೈಸಿ) ಎಂದು ಸಲಹೆ ನೀಡಿದ್ದಾರೆ.

ಬ್ಯಾಂಕ್ ಖಾತೆ ಜೋಡಣೆಯಾಗಿರುವ ಪಡಿತರ ಚೀಟಿದಾರರಲ್ಲಿ ಜೂನ್ ತಿಂಗಳಲ್ಲಿ ಆಹಾರಧಾನ್ಯವನ್ನು ಪಡೆದ ಕುಟುಂಬಗಳನ್ನು ಜುಲೈ ತಿಂಗಳ ನಗದು ವರ್ಗಾವಣೆಗೆ ಪರಿಗಣಿಸಲಾಗಿದ್ದು ಅಂತಹ ಕುಟುಂಬದ ಮುಖ್ಯಸ್ಥರ ಖಾತೆಗೆ ಪ್ರತಿ ಫಲಾನುಭವಿಗಳಿಗೆ ತಲಾ ರೂ 170 ರಂತೆ ನೇರ ನಗದು ವರ್ಗಾವಣೆ ಮೂಲಕ ಹಣ ಜಮಾ ಮಾಡಲಾಗುವುದು ಈ ಹಣವು ಫಲಾನುಭವಿಗಳ ಖಾತೆಗೆ ಪಾವತಿಸುವ ಪ್ರಕ್ರಿಯು ಮಂಗಳವಾರದಿಂದಲೇ ಪ್ರಾರಂಭವಾಗಿದೆ 64,717 ಪಡಿತರ ಚೀಟಿದಾರರ ಬ್ಯಾಂಕ ಖಾತೆಗಳು ನಿಷ್ಕ್ರಿಯಗೊಂಡಿದ್ದು, ಇಂತಹ ಪಡಿತರ ಚೀಟಿದಾರರ ವಿವರಗಳು ತಾಲ್ಲೂಕು ಮಟ್ಟದಲ್ಲಿ ತಹಶೀಲ್ ಕಾರ್ಯಾಲಯ ಅಥವಾ ಸಹಾಯಕ ನಿರ್ದೇಶಕರ ಕಾರ್ಯಾಲಯಗಳಲ್ಲಿ ಹಾಗೂ ಸಂಬಂಧಪಟ್ಟ ನ್ಯಾಯಬೆಲೆ ಅಂಗಡಿಗಳಲ್ಲಿ ಲಭ್ಯವಿರುತ್ತವೆ.

ಬ್ಯಾಂಕ್ ಖಾತೆ ಹೊಂದದಿರುವ ನಿಷ್ಕ್ರಿಯಗೊಂಡಿರವ ಪಡಿತರ ಚೀಟಿಯ ಕುಟುಂಬದ ಮುಖ್ಯಸ್ಥರ ಜುಲೈ 20 ಒಳಗಾಗಿ ತಮ್ಮ ಸಕ್ರಿಯ ಬ್ಯಾಂಕ್ ಖಾತೆಯ ಮಾಹಿತಿಯನ್ನು ನೀಡಿದ ನಂತರ ಆಗಸ್ಟ್ ತಿಂಗಳಲ್ಲಿ ನಗದು ವರ್ಗಾವಣೆ ಸೌಲಭ್ಯವು ದೊರಕಲಿದೆ ಆದ್ದರಿಂದ ಅಂತಹ ಪಡಿತರ ಚೀಟಿದಾರರ ಕೂಡಲೇ ರಾಷ್ಟ್ರೀಕೃತ ಬ್ಯಾಂಕ್ ನಲ್ಲಿ ಅಥವಾ ಅಂಚೆ ಕಚೇರಿಯಲ್ಲಿ ಇಂಡಿಯಾನ್ ಪೋಸ್ಟಲ್ ಪೇಮೆಂಟ್ ಬ್ಯಾಂಕ್ ಖಾತೆಯನ್ನು ತೆರೆದು ಇ-ಕೆವೈಸಿ ಮಾಡಿಕೊಳ್ಳಬೇಕು ಎಂದು ಜಿಲ್ಲಾಧಿಕಾರಿ ತಿಳಿಸಿದ್ದಾರೆ.