19.08 ಲಕ್ಷ ಮೊತ್ತದ ಪಟಾಕಿ ಜಪ್ತಿ

ಕಲಬುರಗಿ,ಅ.17-ಲೈಸನ್ಸ್ ಹಾಗೂ ಷರತ್ತು ಉಲ್ಲಂಘಸಿ ಹೆಚ್ಚಿನ ಪ್ರಮಾಣದಲ್ಲಿ ಪಟಾಕಿ ದಾಸ್ತಾನು ಮಾಡಿರುವ ಆರೋಪದ ಮೇಲೆ ಚೌಕ್ ಪೊಲೀಸರು ನಗರದ ಆಸೀಫ್ ಗಂಜ್ ಚೌಕ್‍ನಲ್ಲಿರುವ ವಡಿವೆಲ್ ಎಸ್.ಜಿ.ಘಂಟೋಜಿ ಪಟಾಕಿ ಅಂಗಡಿ ಮೇಲೆ ದಾಳಿ 19,08,991 ರೂ.ಮೊತ್ತದ ಪಟಾಕಿಗಳನ್ನು ಜಪ್ತಿ ಮಾಡಿದ್ದಾರೆ.
ಲೈಸನ್ಸ್ ಹಾಗೂ ಷರತ್ತು ಉಲ್ಲಂಘಸಿ ಹೆಚ್ಚಿನ ಪ್ರಮಾಣದಲ್ಲಿ ಪಟಾಕಿ ದಾಸ್ತಾನು ಮಾಡಿದಲ್ಲದೆ ಮನುಷ್ಯನ ಜೀವನಕ್ಕೆ ಅಪಾಯವಾಗುವ ಸಾಧ್ಯತೆ ಇದೆ ಎಂದು ಗೊತ್ತಿದ್ದರೂ ಜನನಿಬಿಡ ಪ್ರದೇಶದಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಪಟಾಕಿ ಸಂಗ್ರಹಿಸಿದ ಆರೋಪದ ಮೇಲೆ ಅಂಗಡಿ ಮಾಲೀಕ ಸತೀಶ ಅಲಿಯಾಸ್ ಶ್ರೀಪಾದ ಘಂಟೋಜಿ ಅವರನ್ನು ವಶಕ್ಕೆ ತೆಗೆದುಕೊಂಡಿದ್ದಾರೆ. ಈ ಸಂಬಂಧ ಚೌಕ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.