19 ಸಾವಿರ ಮಂದಿಗೆ ಸೋಂಕು

ನವದೆಹಲಿ, ಆ.೬-ದೇಶದಲ್ಲಿ ದಿನದಿಂದ ದಿನಕ್ಕೆ ಕೊರೊನಾ ಸೋಂಕು ಸಂಖ್ಯೆಯಲ್ಲಿ ಏರಿಳಿತ ಕಂಡು ಬಂದಿದೆ.
ಕಳೆದ ೨೪ ಗಂಟೆಗಳ ಅವಧಿಯಲ್ಲಿ ಹೊಸದಾಗಿ ೧೯,೪೦೬ ಮಂದಿಯಲ್ಲಿ ಸೋಂಕು ಕಾಣಿಸಿಕೊಂಡಿದ್ದು ೧೯,೯೨೮ ಮಂದಿ ಸೋಂಕಿನಿಂದ ಚೇತರಿಸಿಕೊಂಡು ಬಿಡುಗಡೆಯಾಗಿದ್ದಾರೆ ಎಂದು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ಮಾಹಿತಿ ನೀಡಿದೆ.
ಹೊಸದಾಗಿ ಕಾಣಿಸಿಕೊಂಡಿರುವ ಸೋಂಕು ಸಂಖ್ಯೆ ಸೇರಿದಂತೆ ಇಲ್ಲಿಯವತನಕ ೪.೩೮ ಕೋಟಿಗೂ ಅಧಿಕ ಮಂದಿಯಲ್ಲಿ ಸೋಂಕು ಕಾಣಿಸಿಕೊಂಡಿದ್ದು ೪,೩೪,೬೫,೫೫೨ ಮಂದಿ ಸೋಂಕಿತರು ಚೇತರಿಸಿಕೊಂಡು ಬಿಡುಗಡೆಯಾಗಿದ್ದಾರೆ. ಇಲ್ಲಿಯ ತನಕ ಸೋಂಕಿನಿಂದ ೫,೨೬,೬೪೯ ಮಂದಿ ಸೋಂಕಿನಿಂದ ಸಾವನ್ನಪ್ಪಿದ್ದಾರೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ತಿಳಿಸಿದೆ.
ದೇಶದಲ್ಲಿ ೩೨,೭೩,೫೫೧ ಡೋಸ್ ಲಸಿಕೆ ಹಾಕಿದ್ದು ಇಲ್ಲಿಯ ತನಕ ೨೦೫,೯೨,೨೦,೭೯೪ ಡೋಸ್ ಲಸಿಕೆ ಹಾಕಲಾಗಿದೆ. ಈ ಪೈಕಿ ೯೩,೫೧ ಕೋಟಿ ಡೋಸ್ ಎರಡನೇ ಡೋಸ್ ಮತ್ತು ೧೦.೩೫ ಕೋಟಿ ಡೋಸ್ ಹೆಚ್ಚುವರಿ ಲಸಿಕೆಯಾಗಿದೆ. ಇನ್ನುಳಿದ ಡೋಸ್ ಮೊದಲ ಡೋಸ್ ಲಸಿಕೆಯಾಗಿದೆ.
ದೇಶದಲ್ಲಿ ಸದ್ಯ ೧,೩೪,೭೯೩ ಮಂದಿಯಲ್ಲಿ ಸಕ್ರಿಯ ಪ್ರಕರಣಗಳಿವೆ.ದಿನದ ಪಾಸಿಟಿವಿಟಿ ಪ್ರಮಾಣ ಶೇ.೪.೯೬ ರಷ್ಟು ಇದ್ದು ವಾರದ ಸರಾಸರಿ ಪ್ರಮಾಣ ಶೇ.೪.೬೩ ರಷ್ಟು ಇದೆ. ಒಟ್ಟಾರೆ ಪಾಸಿಟಿವಿಟಿ ಪ್ರಮಾಣ ಶೇ.೦.೩೧ ರಷ್ಟು ಇದೆ.
ಸೋಂಕು ಸಂಖ್ಯೆ ಏರಿಳಿತ ಹಿನ್ನೆಲೆಯಲ್ಲಿ ಒಟ್ಟಾರೆ ಚೇತರಿಕೆ ಪ್ರಮಾಣ ಶೇ.೯೮.೫೦ ರಷ್ಟು ಇದೆ. ಕಳೆದ ೨೪ ಗಂಟೆಯ ಅವಧಿಯಲ್ಲಿ ೩,೯೧,೧೮೭ ಮಂದಿಗೆ ಸೋಂಕು ಪತ್ತೆ ಪರೀಕ್ಷೆ ಮಾಡಲಾಗಿದ್ದು ಒಟ್ಟು ೮೭.೭೫ ಕೋಟಿ ಜನರಿಗೆ ಪರೀಕ್ಷೆ ಮಾಡಲಾಗಿದೆ ಎಂದು ಸಚಿವಾಲಯ ತಿಳಿಸಿದೆ.