19 ರಂದು ಛತ್ರಪತಿ ಶಿವಾಜಿ ಜಯಂತಿ ಅದ್ದೂರಿಯಾಗಿ ಆಚರಿಸಲು ನಿರ್ಧಾರ

ಕಲಬುರಗಿ:ಫೆ. 14 :ಫೆಬ್ರುವರಿ 19ರಂದು ಛತ್ರಪತಿ ಶಿವಾಜಿ ಜಯಂತಿಯನ್ನ ಆಚರಣೆಯನ್ನು ಅದ್ದೂರಿಯಾಗಿ ಆಚರಿಸಲು ಜಿಲ್ಲಾಧಿಕಾರಿಗಳ ಶಿಷ್ಟಾಚಾರದ ತಹಶೀಲ್ದಾರ ನಿಸಾರ್ ಅಹ್ಮದ್ ಅಧ್ಯಕ್ಷತೆಯಲ್ಲಿ ಸಭೆಯಲ್ಲಿ ನಿರ್ಧಾರಿಸಲಾಯಿತು.
ಸೋಮವಾರದಂದು ಜಿಲ್ಲಾಧಿಕಾರಿಗಳ ಕಛೇರಿ ಸಭಾಂಗಣದಲ್ಲಿ ಸಮಾಜ ಮುಖಂಡರೊಂದಿಗೆ ಸಭೆ ನಡೆಸಿ ಛತ್ರಪತಿ ಶಿವಾಜಿ ಜಯಂತಿಯನ್ನ ಆಚರಿಸಲು ಸಭೆಯ ಮುಖಂಡರು ನಿರ್ಧರಿಸಿದ್ದಾರೆ. ಅಂದು ಬೆಳಿಗ್ಗೆ 9 ಸರಕಾರಿ ಶಾಲಾ ಕಾಲೇಜು, ಅರೇ ಸರಕಾರಿ ಶಾಲಾ ಕಾಲೇಜು ಹಾಗೂ ಗ್ರಾಮ ಪಂಚಾಯಿತಿ,ಜಿಲ್ಲಾ ಮತ್ತು ತಾಲೂಕ ಮಟ್ಟದ ಸರಕಾರಿ ಕಛೇರಿಗಳಲ್ಲಿ ಕಡ್ಡಯವಾಗಿ ಆಚರಿಸಬೇಕೆಂದರು.
ಅಂದು 19 ರಂದು ಮದ್ಯಾಹ್ನ 1.30 ಗಂಟೆಗೆ ನಡೆಯುವ ಕಾರ್ಯಕ್ರಮಕ್ಕೆ ಎಲ್ಲರೂ ತಪ್ಪದೇ ಹಾಜರಿರಲು ಸಭೆಯಲ್ಲಿ ನಿರ್ಧರಿಸಲಾಯಿತು.
ಕುಡಿಯವ ನೀರು ಸುತ್ತಮುತ್ತಲಿನ ಸ್ವಚ್ಫತ ವಾತವರಣ ನಿರ್ಮಿಸಲು ಮಹಾನಗರ ಪಾಲಿಕೆ ಅಧಿಕಾರಿಗಳಿಗೆ ಸೂಚಿಸಲಾಯಿತು.
ಕನ್ನಡ ಮತ್ತು ಸಂಸ್ಕøತಿ ಇಲಾಖೆಯ ಸಹಾಯಕ ನಿರ್ದೇಶಕರಾದ ದತ್ತಪ್ಪ ಸಾಗನೂರ ಮಾತನಾಡಿ, ವೇದಿಕೆ ಹೂ ಆಲಂಕಾರವನ್ನು ಹಾಗೂ ಕುಡಿಯುವ ನೀರು ಪೂರೈಸಲಾಗುತ್ತದೆ. ಬ್ಯಾನರ್‍ಗಳು ಆಹ್ವಾನ ಪತ್ರಿಕೆಗಳು ಮುದ್ರಿಸಲಾಗುತ್ತದೆ ಸಂಗೀತ ಕಾರ್ಯಕ್ರಮ ಉಪನ್ಯಾಸಕರನ್ನು ಕರೆತರುವ ವ್ಯವಸ್ಥೆ ಮಾಡಲಾಗುವುದು ಎಂದರು..
ಈ ಕಾರ್ಯಕ್ರಮದಲ್ಲಿ ಸಮಾಜದ ಮುಖಂಡರಾದ ಆರ್,ಬಿ, ಜಗದಾಳೆ ಅಧ್ಯಕ್ಷರು ಮರಾಠ ಸಮುದಾಯ. ರಾಜು ಕಾಕಡೆ ಕಾರ್ಯದರ್ಶಿ ಮರಾಠ ಸಮುದಾಯ ಕಲಬುರಗಿ,ರಮೇಶ, ರವಿ ಸೂರ್ಯವಂಶಿ, ಪ್ರಾತಾಪ ಕಾಕಡೆ, ಸಭೆಯಲ್ಲಿ ಉಪಸ್ಥಿತರಿದ್ದರು.