
ಬೆಂಗಳೂರು,ಮೇ.೧೨-ಮಾದಕ ದ್ರವ್ಯಗಳ ವಿರುದ್ಧ ಬೃಹತ್ ಕಾರ್ಯಾಚರಣೆ ಕೈಗೊಂಡು ೧೯ ಡ್ರಗ್ ಪೆಡ್ಲರ್‌ಗಳನ್ನು ಬಂಧಿಸಿ ೭.೦೬ಕೋಟಿ ಮೌಲ್ಯದ ಡ್ರಗ್ಸ್ ಜಪ್ತಿ ಮಾಡಿ ನಗರ ಪೊಲೀಸರು ಟ್ವಿಟ್ ಮಾಡಿರುವುದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಕಾರ್ಯಾಚರಣೆ ವೇಳೆ ೫೧ ಕೆಜಿ ಗಾಂಜಾ ಮತ್ತು ೫ ಕೆಜಿ ಹ್ಯಾಶಿಶ್ ಆಯಿಲ್, ೨೩೬ ಎಕ್ಸ್‌ಟಾಸಿ ಮಾತ್ರೆಗಳು, ೩೪ ಎಲ್‌ಎಸ್‌ಡಿ ಸ್ಟ್ರಿಪ್‌ಗಳು, ೨೩ ಗ್ರಾಂ ಕೊಕೇನ್, ೧೪ ಒಜಿ ಎಂಡಿಎಂಎ, ೧೭ ಮೊಬೈಲ್ ಗಳು,ತಲಾ ಒಂದು ಬೈಕ್, ಕಾರನ್ನು ಸಿಸಿಬಿ ಪೊಲೀಸರು ಜಪ್ತಿ ಮಾಡಿ ವಿಲ್ಸನ್ ಗಾರ್ಡನ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ ಮಾಡಿದ ಟ್ವಿಟ್ ವೈರಲ್ ಆಗಿದ್ದು ಸ್ವಾರಸ್ಯಕರವಾಗಿದೆ.
ಬೆಂಗಳೂರು ಕೇಂದ್ರ ಕಾರಾಗೃಹಕ್ಕೆ ಹೊಸ ಬಾಡಿಗೆದಾರರು ಬಂದಿದ್ದಾರೆ. ಸಮಯದ ಬಾಡಿಗೆ ಪಾವತಿಸಲಾಗುತ್ತದೆ. ನಮ್ಮ ಅತಿಥ್ಯ ಅದ್ಭುತವಾಗಿದೆ ಎಂದು ವ್ಯಂಗ್ಯವಾಗಿ ಟ್ವಿಟ್ ಮಾಡಿದ್ದು ಇದಕ್ಕೆ ಸಾಮಾಜಿಕ ಜಾಲತಾಣ ಬಳಕೆದಾರರು ಮೆಚ್ಚುಗೆ ವ್ಯಕ್ತಪಡಿಸಿದ್ದಲ್ಲದೇ ಕಾಮೆಂಟ್ ಮೂಲಕ ಪ್ರತಿಕ್ರಿಯೆ ನೀಡಿದ್ದಾರೆ. ಪೊಲೀಸರಿಗೆ ಶ್ಲಾಘನೆ:
ನಿಮ್ಮ ಕೆಲಸದ ಜೊತೆ ನಿಮ್ಮ ಹಾಸ್ಯ ಪ್ರಜ್ಞೆಯೂ ಕೂಡ ಚೆನ್ನಾಗಿದೆ. ಒಳ್ಳೆಯ ಕೆಲಸ ಮುಂದುವರೆಸಿ ಎಂದು ಒಬ್ಬರು ಕಾಮೆಂಟ್ ಮಾಡಿದ್ದಾರೆ.ವೈಜಾಗ್‌ನಿಂದ ನಗರಕ್ಕೆ ಗಾಂಜಾ ಸಾಗಿಸುತ್ತಿದ್ದ ಕೇರಳದ ಇಬ್ಬರು ವ್ಯಕ್ತಿಗಳ ವಿರುದ್ಧ ಪೊಲೀಸ್ ಅಧಿಕಾರಿಗಳು ನಗರದ ಬೇಗೂರು ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.
ಕಾರಿನಲ್ಲಿ ಸಾಗಿಸುತ್ತಿದ್ದ ೪೪ ಕೆಜಿ ಗಾಂಜಾ ಹಾಗೂ ೨೩ ಎಂಡಿಎಂಎ ಮಾತ್ರೆಗಳು, ೧ ಕೆಜಿ ಹ್ಯಾಶಿಶ್ ಆಯಿಲ್ ಮತ್ತು ೧.೫೬ ಕೋಟಿ ಮೌಲ್ಯದ ಅಕ್ರಮ ಮಾದಕ ದ್ರವ್ಯಗಳನ್ನು ಪೊಲೀಸ್ ಅಧಿಕಾರಿಗಳು ವಶಪಡಿಸಿಕೊಂಡಿದ್ದಾರೆ.