
ಕಲಬುರಗಿ, ಜು 5: ಮಿತಿಗಿಂತ ಹೆಚ್ಚಿನ ಶಾಲಾ ವಿದ್ಯಾರ್ಥಿಗಳನ್ನು ಕೂಡಿಸಿಕೊಂಡು ಸಂಚಾರಿ ನಿಯಮಗಳನ್ನು ಉಲ್ಲಂಘಿಸಿದ ವಿವಿಧ ಶಾಲೆಗಳ 19 ಆಟೋಗಳನ್ನು ಸಂಚಾರಿ ಪೆÇಲೀಸರು ಇಂದು ವಶಪಡಿಸಿಕೊಂಡಿದ್ದಾರೆ.
ಸಂಚಾರಿ ನಿಯಮ ಮೀರಿ ಅವ್ಯವಸ್ಥಿತವಾಗಿ ಶಾಲಾ ವಿದ್ಯಾರ್ಥಿಗಳನ್ನು ತುಂಬಿಕೊಂಡು ಹೋಗುತ್ತಿರುವ ಆಟೋಗಳ ಜಪ್ತಿ ಕಾರ್ಯಾಚರಣೆಯನ್ನು ಸಂಚಾರಿ ಪೊಲೀಸರು ಮಂಗಳವಾರ ಆರಂಭಿಸಿದ್ದಾರೆ.
ಸಂಚಾರಿ ಪಿಐ ಶಾಂತಿನಾಥ ಮತ್ತು ಸಿಬ್ಬಂದಿವರ್ಗದವರು ಕಾರ್ಯಾಚರಣೆಯಲ್ಲಿದ್ದರು.