19ರಂದು ಲೀವರ್ ಉಚಿತ ಚಿಕಿತ್ಸಾ ಶಿಬಿರ

ಬೀದರ್:ಎ.18: ನಗರದ ಗುಂಪಾ ರಸ್ತೆಯಲ್ಲಿರುವ ಬ್ಯಾಂಕ್ ಕಾಲೋನಿ ಸಮೀಪ ಕರ್ನಾಟಕ ಫಾರ್ಮಸಿ ಕಾಲೇಜು ಎದುರುಗಡೆ, ಗುದಗೆ ಪಾಲಿಕ್ಲಿನಿಕ್ ನಲ್ಲಿ ಏಪ್ರಿಲ್-19 ರಂದು ಮುಂಜಾನೆ 10:00 ಗಂಟೆಯಿಂದ ಸಾಯಂಕಾಲ 04:00 ಗಂಟೆಯವರೆಗೆ ವಿಶ್ವ ಲೀವರ್ ದಿನಾಚರಣೆ ನಿಮಿತ್ಯವಾಗಿ ಲೀವರ್ ಉಚಿತ ಚಿಕಿತ್ಸಾ ಶಿಬಿರ ಹಮ್ಮಿಕೊಳ್ಳಲಾಗಿದೆ ಎಂದು ಹೃದಯ ತಜ್ಞರು ಹಾಗೂ ಗುದಗೆ ಆಸ್ಪತ್ರೆಯ ಅಧ್ಯಕ್ಷರಾದ ಚಂದ್ರಕಾಂತ ಗುದಗೆಯವರು ತಿಳಿಸಿದ್ದಾರೆ.

ಕುಡಿತದಿಂದ ಲೀವರ್ ಸಮಸ್ಯೆಯಾಗಿ ಬಳಲುತ್ತಿರುವ ರೋಗಿಗಳಿಗೆ ತಪಾಸಣೆ ಮಾಡಿಕೊಳ್ಳುವುದು, ಅತೀಮುಖ್ಯವಾಗಿದೆ.

ಹೆಸರಾಂತ ತಜ್ಞರಾದ ಡಾ|| ಜೈರಾಜ ಬೊಮ್ಮನ್ ರವರು ಲೀವರ್ ರೋಗಿಗಳಿಗೆ ಉಚಿತ ಚಿಕಿತ್ಸೆ ನೀಡಲಿದ್ದಾರೆ. ಈ ಕೆಳಕಂಡಂತೆ ಉಚಿತ ತಪಾಸಣೆ ಮಾಡಲಾಗುತ್ತದೆ.

ಬೀದರ ಜಿಲ್ಲೆಯ ಜನರು ಉಚಿತ ಶಿಬಿರದಲ್ಲಿ ಭಾಗವಹಿಸಿ, ಸದುಪಯೋಗ ಪಡೆದುಕೊಳ್ಳಬೇಕೆಂದು ಗುದಗೆ ಆಸ್ಪತ್ರೆಯ ಅಧ್ಯಕ್ಷರಾದ ಡಾ. ಚಂದ್ರಕಾಂತ ಗುದಗೆ ಅವರು ಪತ್ರಿಕಾ ಪ್ರಕಟಣೆಯ ಮೂಲಕ ಮನವಿ ಮಾಡಿದ್ದಾರೆ.