1850 ಗ್ರಾಂ ಗಾಂಜಾ ವಶ: ಆರೋಪಿ ಬಂಧನ

ಅಫಜಲಪುರ:ಮಾ.27: ಅಕ್ರಮವಾಗಿ ಗಾಂಜಾ ಸಾಗಾಟ ಮಾಡುತ್ತಿದ್ದ ವ್ಯಕ್ತಿಯನ್ನು ಬಂಧಿಸಿ 1850 ಗ್ರಾಂ ಗಾಂಜಾ ವಶಕ್ಕೆ ಪಡೆದ ಘಟನೆ ಪಟ್ಟಣದ ಹಳೆಯ ಕೋರ್ಟ್ ಹತ್ತಿರ ನಡೆದಿದೆ.ಗಾಂಜಾ ಸಾಗಾಟದ ಖಚಿತ ಮಾಹಿತಿ ಮೇರೆಗೆ ಪಿಎಸ್‍ಐ ವಿಶ್ವನಾಥ ಮುದರೆಡ್ಡಿ, ತಾಲೂಕು ಪ್ರಭಾರಿ ಆರೋಗ್ಯಾಧಿಕಾರಿ ಡಾ. ಸುಶೀಲ್ ಅಂಬೂರೆ ದಾಳಿ ಮಾಡಿ ಮಾ.23 ಸಾಯಂಕಾಲ 5 ಗಂಟೆ ಸುಮಾರಿಗೆ ತಾಲೂಕಿನ ಗೌರ(ಕೆ) ಗ್ರಾಮದ ರಘು ಚಂದಪ್ಪ ಜಮಾದಾರ(38) ಎಂಬಾತ ಸಾಗಿಸುತ್ತಿದ್ದ 1850 ಗ್ರಾಂ ಗಾಂಜಾ ವಶಕ್ಕೆ ಪಡೆದು ವ್ಯಕ್ತಿಯನ್ನು ನ್ಯಾಯಾಂಗ ಬಂಧನಕ್ಕೆ ಕಳುಹಿಸಿದ್ದಾರೆ.ವ್ಯಕ್ತಿ ತನ್ನ ಹೊಲದಲ್ಲೇ ಗಾಂಜಾ ಬೆಳೆದು ಪಟ್ಟಣದಲ್ಲಿ ಅಕ್ರಮವಾಗಿ ಗಾಂಜಾ ಸಾಗಾಟ ಮಾಡುತ್ತಿರುವುದಾಗಿ ಒಪ್ಪಿಕೊಂಡಿದ್ದಾನೆಂದು ಪಿಎಸ್‍ಐ ವಿಶ್ವನಾಥ ಮುದರೆಡ್ಡಿ ತಿಳಿಸಿದ್ದಾರೆ.ಈ ಸಂದರ್ಭದಲ್ಲಿ ಆರ್‍ಐ ಚಂದ್ರಶೇಖರ, ಪಿಸಿಗಳಾದ ಚಿದಾನಂದ, ಸುರೇಶ ಕಾಮಗೋಂಡ, ಸಂತೋಷ, ಭಾಗಣ್ಣ, ರಾವುತ್ ಇದ್ದರು.