ನಗರದ ವಿಜಯನಗರದ ಬಂಟ್ಸ್ ಸಂಘದಲ್ಲಿ ಲಯನ್ಸ್ ಕ್ಲಬ್ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಹಾಸ್ಯನಟ ಬೆಂಗಳೂರು ನಾಗೇಶ್ ಅವರಿಗೆ ಉಚಿತವಾಗಿ ಶ್ರವಣ ಸಾಧನ ನೀಡಲಾಯಿತು. ಇದೇ ಸಂದರ್ಭದಲ್ಲಿ ವಿದ್ಯಾರ್ಥಿಗಳಿಗೆ ಉಚಿತ ಲ್ಯಾಪ್ ಟ್ಯಾಪ್ ಹಾಗೂ ವಿದ್ಯಾರ್ಥಿ ವೇತನ ನೀಡಲಾಯಿತು. ರಾಮನಾಥನ್ ನಾರಾಯಣ್, ವಂಶಿಧರ್ ಬಾಬು, ಸತ್ಯನಾರಾಯಣರಾಜು, ಬರ್ನಾಡ್ ಆರ್. ಚೆಟ್ಟಿ, ಟಿ. ಶಿವಕುಮಾರ್ ನಾಗರ ನವಿಲೆ, ಶೋಭಾ ಶ್ರೀನಿವಾಸ್, ರಾಮಕೃಷ್ಣ, ಸೀತಾಲಕ್ಷ್ಮಿ, ರವೀಂದ್ರಸಿಂಗ್ ಭಾಗವಹಿಸಿದ್ದರು.