182 ನೇ ವಿಶ್ವ ಛಾಯಾಗ್ರಹಣ ದಿನ ವೃತ್ತಿಬಾಂಧವರಿಗೆ ಕಣ್ಣಿನ ತಪಾಸಣೆಯೊಂದಿಗೆ ದಿನಾಚರಣೆ

ಸಂಜೆವಾಣಿ ವಾರ್ತೆ
ಹೊಸಪೇಟೆ, ಸೆ.06: 182ನೇ ವಿಶ್ವ ಛಾಯಾಗ್ರಹಣ ದಿನವನ್ನು ಹೊಸಪೇಟೆ ತುಂಗಭದ್ರಾ ಪೋಟೋ ಹಾಗೂ ವಿಡಿಯೋಗ್ರಾಫರ್ಸ್ ಅಸೋಷಿಯೇಷನ್ ಕಣ್ಣಿನ ತಪಾಸಣೆಯೊಂದಿಗೆ ಆಚರಿಸಿದರು.
ಸೋಮವಾರ  ಟಿ.ಬಿ.ಡ್ಯಾಂನ ನಿಶಾನಿ ಕ್ಯಾಂಪ್‍ನಲ್ಲಿರುವ “ಗೌಂಡಿ ಸಮುದಾಯಭವನ”ದಲ್ಲಿ ಐದೃಷ್ಟಿ ಕಣ್ಣಿನ ಆಸ್ಪತ್ರೆಯ ಸಹಯೋಗದಲ್ಲಿ ಆಯೋಜಿಸಿದ ಕಾರ್ಯಕ್ರಮವನ್ನು ಸಸಿಗೆ ನೀರೆಯುವ ಮೂಲಕ   ಉದ್ಘಾಟಿಸಲಾಯಿತು. ಹೊಸಪೇಟೆ ಫೋಟೋ ಮತ್ತು ವಿಡಿಯೋಗ್ರಾಫರ್ಸ್ ಅಸೋಷಿಯೇಷನ್ ಸದಸ್ಯತ್ವ ಪಡೆದ ನೂರಾರು ಸದಸ್ಯರು ಹಾಗೂ ಅವರ ಕುಟುಂಬಗಳಿಗಾಗಿ ಆಯೋಜಿಸಿರುವ ಕಾರ್ಯಕ್ರಮದಲ್ಲಿ ಬಹುತೇಕರು ಕಾರ್ಯಕ್ರಮದ ಲಾಭ ಪಡೆದರು.
ಸಂಘದ ಹಿರಿಯ ಸದಸ್ಯರಾದ ತಯ್ಯೂಬ್ ಹುಸೇನ್, ಸುರೇಶ್, ಅಧ್ಯಕ್ಷ ಸೋಮಶೇಖರ್, ಕಾರ್ಯದರ್ಶಿ ಸಂಜಯಕುಮಾರ, ಗಣೇಶ್, ರಾಮು, ಮಲ್ಲಿಕಾರ್ಜುನ, ಚಂದ್ರಶೇಖರ್, ರಘುಕುಮಾರ, ಲಿಂಗರಾಜ್  ಸೇರಿದಂತೆ ಅನೇಕ ಸದಸ್ಯರು  ಹಿರಿಯರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು. ಸದಸ್ಯರೊಂದಿಗೆ ಇತರರು ಕಾರ್ಯಕ್ರಮದಲ್ಲಿ ಕಣ್ಣಿನ ತಪಾಸಣೆಗೆ ಒಳಪಟ್ಟು ಪ್ರಯೋಜನ ಪಡೆದರು.