18,19 ರಂದು ಗುವಿಗುದಲ್ಲಿ 6ನೇ ರಾಷ್ಟೀಯ ವಿಶ್ವವಿದ್ಯಾಲಯಗಳ ಖವ್ವಾಲಿ ಸ್ಪರ್ಧೆ

ಕಲಬುರಗಿ:ಮಾ.17:ಗುಲಬರ್ಗಾ ವಿಶ್ವವಿದ್ಯಾಲಯದ 2023-24ನೇ ಪ್ರಸಕ್ತ ಶೈಕ್ಷಣಿಕ ಸಾಲಿನಲ್ಲಿ (ಸಾಜ್ -ಈ -ಹಿಂದ್) 6ನೇ ರಾಷ್ಟೀಯ ವಿಶ್ವವಿದ್ಯಾಲಯಗಳ ಖವ್ವಾಲಿ ಸ್ಪರ್ಧೆಯ ಅದ್ಧೂರಿ ಸಾಂಸ್ಕøತಿಕ ಕಾರ್ಯಕ್ರಮವನ್ನು ಇದೇ ಮಾರ್ಚ್ 18 ಮತ್ತು 19 ರಂದು (ಎರಡು ದಿನಗಳು) ಜ್ಞಾನಗಂಗಾ ಆವರಣದಲ್ಲಿ ಹಮ್ಮಿಕೊಳ್ಳಲಾಗಿದೆ.
ನವದೆಹಲಿಯ ಭಾರತೀಯ ವಿಶ್ವವಿದ್ಯಾಲಯಗಳ ಸಂಘದ ಸಹಯೋಗದೊಂದಿಗೆ ರಾಷ್ಟೀಯ ವಿಶ್ವವಿದ್ಯಾಲಯಗಳ ರಾಷ್ಟ್ರೀಯ ಖವ್ವಾಲಿ ಸ್ಪರ್ಧೆ ಆಯೋಜನೆಗೆ ಆತಿಥ್ಯ ವಹಿಸುವಂತೆ ಅವಕಾಶ ನೀಡಿರುವುದು ನಮಗೆ ಹಾಗೂ ನಮ್ಮ ವಿಶ್ವವಿದ್ಯಾಲಯಕ್ಕೆ ಹೆಮ್ಮೆ ಎನಿಸಿದೆ. ಈ ರಾಷ್ಟ್ರೀಯ ಸ್ಪರ್ಧೆಗೆ ರಾಷ್ಟ್ರದ ವಿವಿದ ವಿಶ್ವವಿದ್ಯಾಲಯಗಳು ಭಾಗವಹಿಸಲಿದ್ದು ಖವ್ವಾಲಿ ಸಂಗೀತದ ರಸದೌತಣ ಸವಿಯುವ ಸೌಭಾಗ್ಯ ನಮ್ಮ ಕಲ್ಯಾಣ ರ್ನಾಟಕ ಭಾಗದ ಜನತೆಗೆ ಲಭಿಸಿರುವುದು ಅತೀವ ಸಂತೋಷದ ವಿಷಯವಾಗಿದೆ.
ಮಧ್ಯಪ್ರದೇಶ, ಮಹಾರಾಷ್ಟ್ರ, ಹರಿಯಾಣ, ಗುಜರಾತ್ ಮತ್ತು ಛತ್ತೀಸ್‍ಗಡ್ ರಾಜ್ಯಗಳ 10 ವಿಶ್ವವಿದ್ಯಾಲಯಗಳಿಂದ ಸುಮಾರು 132 ಯುವ ಪ್ರತಿಭೆಗಳು ಭಾಗವಹಿಸಲಿದ್ದಾರೆ. 63 ವಿದ್ಯಾರ್ಥಿಗಳು, ಮತ್ತು 27 ವಿದ್ಯಾರ್ಥಿನಿಯರು, 17 ಸಹ ಕಲಾವಿದರು ಹಾಗೂ 15 ಟೀಮ್ ಮ್ಯಾನೇಜರ್ ಸೇರಿದಂತೆ ಒಟ್ಟಾರೆ 118 ಪ್ರತಿನಿಧಿಗಳು ಪಾಲ್ಗೊಳ್ಳಲಿದ್ದಾರೆ. ಸ್ಪರ್ಧೆ ಆಯ್ಕೆ ಪ್ರಕ್ರಿಯೆಗೆ ರಾಷ್ಟ್ರ ಮಟ್ಟದ 3 ಜನ ಖ್ಯಾತ ಪರಿಣಿತರು ತೀರ್ಪುಗಾರರಾಗಿ ಆಗಮಿಸಲಿದ್ದಾರೆ.
ಯುವ ವಿದ್ಯಾರ್ಥಿಗಳ ಶಿಕ್ಷಣ ಕಲಿಕೆ ಜೊತೆಗೆ ಪಠ್ಯೇತರ ಚಟುವಟಿಕೆಗಳಿಗೂ ಸಹ ಆದ್ಯತೆಯನ್ನು ವಿಶ್ವವಿದ್ಯಾಲಯ ಮಟ್ಟದಲ್ಲಿ ನೀಡಲಾಗುತ್ತಿದ್ದು, ವಿದ್ಯಾರ್ಥಿಗಳ ಕಲಾ ಪ್ರತಿಭೆ ಹಾಗೂ ಕೌಶಲ್ಯಗಳನ್ನು ಗುರುತಿಸಿ ಪೆÇ್ರೀತ್ಸಾಹಿಸುವುದು ವಿಶ್ವವಿದ್ಯಾಲಯಗಳ ಮಹತ್ವದ ಉದ್ದೇಶವಾಗಿದೆ. ಅದರಂತೆ ಭಾರತೀಯ ವಿಶ್ವವಿದ್ಯಾಲಯಗಳ ಸಂಘವು ಯುವಕರಲ್ಲಿ ದೇಶದ ವೈವಿಧ್ಯಮಯ ಕಲೆಗಳು ಹಾಗೂ ಜನಪದ ಪರಂಪರೆಯನ್ನು ವಿಶ್ವವಿದ್ಯಾಲಯಗಳ ಸಹಕಾರದಲ್ಲಿ ಪೆÇೀಷಿಸುತ್ತಿದೆ. ಇದರ ಹಿನ್ನೆಲೆಯಲ್ಲಿ ದೇಶದ 10 ವಿಶ್ವವಿದ್ಯಾಲಯಗಳ ಸ್ನಾತಕ ಮತ್ತು ಸ್ನಾತಕೋತ್ತರ ವಿದ್ಯಾರ್ಥಿಗಳು ಭಾಗವಹಿಸಿ ಖವ್ವಾಲಿ ಸಂಗೀತ ಸುಧೆಯನ್ನು ಪ್ರದರ್ಶನ ಮಾಡಲಿದ್ದಾರೆ.
ಗುಲಬರ್ಗಾ ವಿಶ್ವವಿದ್ಯಾಲಯವು ನವದೆಹಲಿಯ ಭಾರತೀಯ ವಿಶ್ವವಿದ್ಯಾಲಯಗಳ ಸಂಘದ ಸಹಯೋಗದಲ್ಲಿ ಸಾಜ್-ಈ-ಹಿಂದ್ ಅಂತರ್ ವಿಶ್ವವಿದ್ಯಾಲಯ ರಾಷ್ಟ್ರೀಯ ಖವ್ವಾಲಿ ಸ್ಪರ್ಧೆಯ ಉದ್ಘಾಟನಾ ಸಮಾರಂಭ ಮಾರ್ಚ್, 18, 2024 ರಂದು ಬೆ.10:30 ಗಂಟೆಗೆ ಡಾ. ಬಿ. ಆರ್ ಅಂಬೇಡ್ಕರ್ ಸಭಾಂಗಣದಲ್ಲಿ ಜರುಗಲಿದೆ.
ಖಾಜಾ ಬಂದಾನವಾಜ್ ವಿಶ್ವವಿದ್ಯಾಲಯದ ಸಮ ಕುಲಾಧಿಪತಿ ಜನಾಬ್ ಸೈಯದ್ ಮಹಮ್ಮದ ಅಲಿ ಅಲ್ ಹುಸೈನಿ ಕಾರ್ಯಕ್ರಮ ಉದ್ಘಾಟಿಸುವರು. ಮುಖ್ಯ ಅತಿಥಿಗಳಾಗಿ ಖಾಜಾ ಬಂದಾನವಾಜ್ ವಿಶ್ವವಿದ್ಯಾಲಯದ ಕುಲಪತಿ ಪೆÇ್ರ. ಅಲಿ ರಝಾ ಮೂಸವಿ ಭಾಗವಹಿಸುವರು. ಗುಲಬರ್ಗಾ ವಿಶ್ವವಿದ್ಯಾಲಯದ ಕುಲಪತಿ ಪೆÇ್ರ. ದಯಾನಂದ ಅಗಸರ ಅಧ್ಯಕ್ಷತೆ ವಹಿಸುವರು. ಗೌರವಾನ್ವಿತ ಅತಿಥಿಗಳಾಗಿ ಭಾರತೀಯ ವಿಶ್ವವಿದ್ಯಾಲಯಗಳ ಸಂಘದ ಜಂಟಿ ಕಾರ್ಯದರ್ಶಿ ಡಾ. ಬಲ್ಜಿತ್ ಸಿಂಗ್ ಸೆಖೊನ್, ಗುಲಬರ್ಗಾ ವಿಶ್ವವಿದ್ಯಾಲಯದ ಸಿಂಡಿಕೇಟ್ ಸದಸ್ಯೆ ಪೆÇ್ರ. ಸಿ. ಸುಲೋಚನಾ, ವಿದ್ಯಾವಿಷಯಕ ಪರಿಷತ್ ಸದಸ್ಯ ಪೆÇ್ರ. ವಿ.ಎಮ್. ಜಾಲಿ, ಮೌಲ್ಯಮಾಪನ ಕುಲಸಚಿವೆ ಹಾಗೂ ಪ್ರಭಾರಿ ಕುಲಸಚಿವರು (ಆಡಳಿತ) ಪೆÇ್ರ. ಮೇಧಾವಿನಿ ಕಟ್ಟಿ, ವಿತ್ತಾಧಿಕಾರಿ ಕು. ಗಾಯತ್ರಿ, ಹಾಗೂ ವಿದ್ಯಾರ್ಥಿ ಕಲ್ಯಾಣಾಧಿಕಾರಿ ಮತ್ತು ಸಾಂಸ್ಕೃತಿಕ ಸಂಯೋಜಕರು ಪೆÇ್ರ. ಕೆ. ಲಿಂಗಪ್ಪ ಉಪಸ್ಥಿತರಿರುವರು.

ಗುಲಬರ್ಗಾ ವಿಶ್ವವಿದ್ಯಾಲಯವು ನವದೆಹಲಿಯ ಭಾರತೀಯ ವಿಶ್ವವಿದ್ಯಾಲಯಗಳ ಸಂಘದ ಸಹಯೋಗದಲ್ಲಿ ಸಾಜ್-ಈ-ಹಿಂದ್ ಅಂತರ್ ವಿಶ್ವವಿದ್ಯಾಲಯ ರಾಷ್ಟ್ರೀಯ ಖವ್ವಾಲಿ ಸ್ಪರ್ಧೆಯ ಸಮಾರೋಪ ಸಮಾರಂಭ ಮಾರ್ಚ್ 19, 2024 ರಂದು ಮಧ್ಯಾಹ್ನ 3:30 ಗಂಟೆಗೆ ಮಹಾತ್ಮ ಗಾಂಧಿ ಸಭಾಂಗಣದಲ್ಲಿ ಆಯೋಜಿಸಲಾಗಿದೆ. ಕಲಬುರಗಿ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದ ಪ್ರಾದೇಶಿಕ ನಿರ್ದೇಶಕ ಪೆÇ್ರ. ಬಸವರಾಜ ಗಾದಗೆ ಮುಖ್ಯ ಅತಿಥಿಯಾಗಿ ಆಗಮಿಸುವರು. ಗುಲಬರ್ಗಾ ವಿಶ್ವವಿದ್ಯಾಲಯದ ಕುಲಪತಿ ಪೆÇ್ರ. ದಯಾನಂದ ಅಗಸರ ಅಧ್ಯಕ್ಷತೆ ವಹಿಸುವರು. ಗೌರವಾನ್ವಿತ ಅತಿಥಿಗಳಾಗಿ ಭಾರತೀಯ ವಿಶ್ವವಿದ್ಯಾಲಯಗಳ ಸಂಘದ ಜಂಟಿ ಕಾರ್ಯದರ್ಶಿ ಡಾ. ಬಲ್ಜಿತ್ ಸಿಂಗ್ ಸೆಖೊನ್, ಸಿಂಡಿಕೇಟ್, ಸದಸ್ಯ ಶ್ರೀ ರಾಘವೇಂದ್ರ ಎಮ್. ಭೈರಪ್ಪ, ವಿದ್ಯಾವಿಷಯಕ ಪರಿಷತ್ ಸದಸ್ಯೆ ಪೆÇ್ರ. ಜೆ. ಉಮಾವತಿ, ಮೌಲ್ಯಮಾಪನ ಕುಲಸಚಿವೆ ಹಾಗೂ ಪ್ರಭಾರಿ ಕುಲಸಚಿವರು (ಆಡಳಿತ) ಪೆÇ್ರ. ಮೇಧಾವಿನಿ ಕಟ್ಟಿ, ವಿತ್ತಾಧಿಕಾರಿ ಕು. ಗಾಯತ್ರಿ ಹಾಗೂ ವಿದ್ಯರ್ಥಿ ಕಲ್ಯಾಣಾಧಿಕಾರಿ ಮತ್ತು ಸಾಂಸ್ಕೃತಿಕ ಸಂಯೋಜಕ ಪೆÇ್ರ. ಕೆ. ಲಿಂಗಪ್ಪ, ಉಪಸ್ಥಿತರಿರುವರು.
ಡಾ. ಬಿ. ಆರ್. ಅಂಬೇಡ್ಕರ್ ಭವನದಲ್ಲಿ ಯಶಸ್ವಿಗೆ ಸೂಕ್ತ ವ್ಯವಸ್ಥೆಗಳನ್ನು ಈಗಾಗಲೇ ಮಾಡಿಕೊಳ್ಳಲಾಗಿದೆ. ಈಗಾಗಲೇ 10 ವಿಶ್ವವಿದ್ಯಾಲಯಗಳ ಯುವ ಕಲಾವಿದರು ತಮ್ಮ ಹೆಸರುಗಳನ್ನು ನೊಂದಾಯಿಸಿದ್ದಾರೆ. ಅಂದು ಅತಿಥಿ ಗಣ್ಯರು ಖವ್ವಾಲಿ ಸ್ಪರ್ಧೆಯಲ್ಲಿ ಅಮೋಘ ಪ್ರದರ್ಶನ ನೀಡಿದ ವಿಜೇತ ಯುವ ಪ್ರತಿಭೆಗಳಿಗೆ ಬಹುಮಾನ ಮತ್ತು ಪ್ರಮಾಣ ಪತ್ರ ವಿತರಿಸುವರು. ಎರಡು ದಿನಗಳ ಕಾಲ ಜ್ಞಾನಗಂಗಾ ಆವರಣದಲ್ಲಿ ಜರುಗುವ ರಾಷ್ಟ್ರೀಯ ಖವ್ವಾಲಿ ಸ್ಪರ್ಧೆ ಯಶಸ್ವಿಯಾಗಿ ಜರುಗಲು ಕುಲಪತಿಗಳಾದ ಪೆÇ್ರ. ದಯಾನಂದ ಅಗಸರ ಅವರ ಅಧ್ಯಕ್ಷತೆಯಲ್ಲಿ 15 ಸಮಿತಿಗಳನ್ನು ರಚಿಸಲಾಗಿದೆ. ಕುಲಪತಿಗಳ ಮಾರ್ಗದರ್ಶನದಲ್ಲಿ ಸಮಿತಿಗಳ ಅಧ್ಯಕ್ಷರು, ಸಂಯೋಜಕರು ಹಾಗೂ ಸದಸ್ಯರುಗಳು ಈಗಾಗಲೇ ಕಾರ್ಯೋನ್ಮುಖರಾಗಿ ಎಲ್ಲಾ ರೀತಿಯ ಪೂರ್ವ ಸಿದ್ಧತೆಗಳನ್ನು ಮಾಡಿಕೊಂಡಿದ್ದಾರೆ. ಈ ರಾಷ್ಟ್ರೀಯ ಉತ್ಸವ ಅತ್ಯಂತ ವೈವಿಧ್ಯಮಯ ಹಾಗೂ ವಿಜೃಭಂಣೆಯಿಂದ ನೆರವೇರಲು ವಿಶ್ವವಿದ್ಯಾಲಯದ ಎಲ್ಲಾ ನಿಕಾಯಗಳ ಡೀನರು, ಸಿಂಡಿಕೇಟ್ ಸದಸ್ಯರು, ವಿದ್ಯಾ ವಿಷಯಕ ಪರಿಷತ್ ಸದಸ್ಯರು ಎಲ್ಲಾ ವಿಭಾಗಗಳ ಮುಖ್ಯಸ್ಥರು, ಶಿಕ್ಷಕರು, ಶಿಕ್ಷಕೇತರ ಸಿಬ್ಬಂದಿಗಳು, ಅತಿಥಿ ಉಪನ್ಯಾಸಕರು, ಸಂಶೋಧನಾ ವಿದ್ಯಾರ್ಥಿಗಳು ಹಾಗೂ ಸ್ನಾತಕೋತ್ತರ ವಿದ್ಯಾರ್ಥಿಗಳ ಪೆÇ್ರೀತ್ಸಾಹಗಳಿಂದ ಈ ಉತ್ಸವಕ್ಕೆ ಸಾಂಸ್ಕೃತಿಕ ಮೆರುಗು ಬರಲಿದೆ. ಹೆಚ್ಚಿನ ಸಂಖ್ಯೆಯಲ್ಲಿ ನಗರದ ನಾಗರೀಕರು, ಎಲ್ಲಾ ಮಹಾವಿದ್ಯಾಲಯಗಳ ಯುವ ಸಮೂಹ ಸಕ್ರಿಯವಾಗಿ ಪಾಲ್ಗೊಳ್ಳಬೇಕೆಂದು ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.