18 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳಿಗೆ ಬೈಕ್ ನೀಡಿದ ಪಾಲಕರಿಗೆ 25 ಸಾವಿರ ರೂ. ದಂಡ, 3 ವರ್ಷ ಜೈಲು ಶಿಕ್ಷೆ : ಆರ್.ಟಿ.ಓ. ಶಿರೋಳಕರ

ಬೀದರ:ಜು.13: ಪಾಲಕರು ತಮ್ಮ 18 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳಿಗೆ ತಮ್ಮ ವಾಹನ (ಬೈಕ್‍ಗಳನ್ನು) ಚಾಲನೆಗಾಗಿ ನೀಡಿದರೆ ಅಂತಹ ಬಾಲಕರ ತಂದೆ-ತಾಯಿಗಳಿಗೆ 25 ಸಾವಿರ ರೂ. ದಂಡ ಹಾಗೂ ತಪ್ಪಿದಲ್ಲಿ 3 ವರ್ಷ ಜೈಲು ಶಿಕ್ಷೆಯಾಗುವುದು ಎಂದು ಬೀದರ ಪ್ರಾದೇಶಿಕ ಸಾರಿಗೆ ಅಧಿಕಾರಿಗಳು ಆರ್.ಟಿ.ಓ. ಮುರಗೇಂದ್ರ ಬಸವರಾಜ ಶೀರೋಳಕರ ಅವರು ಎಚ್ಚರಿಕೆ ನೀಡಿದರು.

ಅವರು ಇಂದು ದಿನಾಂಕ: 12-07-2023 ರಂದು ಬೆಳಿಗ್ಗೆ ಬೀದರ ತಾಲೂಕಿನ ಕಪಲಾಪೂರ(ಎ) ಗ್ರಾಮದ ಡಾ|| ಎ.ಪಿ.ಜೆ. ಅಬ್ದುಲ್ ಕಲಾಂ ವಸತಿ ಶಾಲೆಯಲ್ಲಿ ಜಿಲ್ಲಾ ಪೊಲೀಸ್ ಇಲಾಖೆ, ಜನವಾಡಾ ಪೊಲೀಸ್ ಠಾಣೆ ಹಾಗೂ ಭಾಗ್ಯವಂತಿ ಮೋಟಾರ ವಾಹನ ತರಬೇತಿ ಶಾಲೆಯ ಸಂಯುಕ್ತಾಶ್ರಯದಲ್ಲಿ ಏರ್ಪಡಿಸಿದ ವಿದ್ಯಾರ್ಥಿಗಳಿಗೆ ರಸ್ತೆ ಸುರಕ್ಷತೆ ಮತ್ತು ಸಂಚಾರಿ ನಿಯಮಗಳ ಮಾಹಿತಿ ಕಾರ್ಯಕ್ರಮಕ್ಕೆ ಸಸಿಗೆ ನೀರು ಹಾಕುವ ಮೂಲಕ ಉದ್ಘಾಟನೆ ಮಾಡಿ ಮಾತನಾಡುತ್ತಿದ್ದರು.

ಪಾಲಕರು ತಮ್ಮ ಮಕ್ಕಳಿಗೆ ಮೋಟಾರು ವಾಹನ ಮತ್ತು ಬೈಕ್‍ಗಳ ತರಬೇತಿಗಾಗಿ ಸರ್ಕಾರದಿಂದ, ಸಾರಿಗೆ ಇಲಾಖೆಯಿಂದ ಅಧಿಕೃತವಾಗಿ ಮಾನ್ಯತೆ ಪಡೆದ ಮೋಟಾರು ವಾಹನ ಚಾಲನಾ ತರಬೇತಿ ಶಾಲೆಯಲ್ಲಿಯೇ ಮಾತ್ರ ತರಬೇತಿಗಾಗಿ ಕಳುಹಿಸಬೇಕು. ಅಲ್ಲಿ ಸಾರಿಗೆ ಇಲಾಖೆಯ 400 ಕ್ಕೂ ಹೆಚ್ಚು ಚಿಹ್ನೆಗಳ ಬಗ್ಗೆ ಮತ್ತು ಮತ್ತು ರಸ್ತೆ ಸುರಕ್ಷತೆಗಾಗಿ ಅನೇಕ ಸೂಕ್ತ ನೀತಿ ನಿಯಮಗಳ ಮಾಹಿತಿಗಳನ್ನು ತರಬೇತಿಯ ಅವಧಿಯಲ್ಲಿ ನೀಡುವರು. ಆ ಮಾಹಿತಿಗಳು ತಮ್ಮ ಜೀವನದ ಉದ್ದಕ್ಕೂ ಕೆಲಸಕ್ಕೆ ಬರುವವು. ಸುರಕ್ಷಿತ ವಾಹನ ಚಾಲನೆಗೆ ಮೋಟಾರು ಚಾಲನಾ ತರಬೇತಿ ಶಾಲೆಗಳಿಂದಲೆ ದೊರಕುವವು ಎಂಬುದನ್ನು ಮರೆಯಬಾರದು ಎಂದು ಆರ್.ಟಿ.ಓ. ಮುರಗೇಂದ್ರ ಬಸವರಾಜ ಶಿರೋಳಕರ ಅವರು ವಿವರಿಸಿದರು. ಈ ನಿಟ್ಟಿನಲ್ಲಿ ತರಬೇತಿ ಶಾಲೆಯ ಪ್ರಾಚಾರ್ಯರು ವಾಹನ ಕಲಿಕೆಗಾರರಿಗೆ ಚಾಚು ತಪ್ಪದೆ ಎಲ್ಲಾ ಸೂಕ್ತ ಮಾಹಿತಿಗಳನ್ನು ಒದಗಿಸಬೇಕೆಂದರು.

ಸಿಪಿಐ ಮಲ್ಲಿಕಾರ್ಜುನ ಯಾತನೂರ ಅವರು ಮಾತನಾಡಿ ಪ್ರತಿಯೋರ್ವ ವಿದ್ಯಾರ್ಥಿಗಳು ತಮ್ಮ ವಯಸ್ಸು 18 ಮೇಲ್ಪಟ್ಟಾದ ನಂತರ ಪ್ರಾದೇಶಿಕ ಸಾರಿಗೆ ಇಲಾಖೆಯಿಂದ ಕಲಿಕೆ ಚಾಲನಾ ಪತ್ರ (ಡಿಲ್) ಪಡೆದು ತಮ್ಮ ವಾಹನಕ್ಕೆ ವಿಮೆ, ಮಾಲಿನ್ಯ ಪ್ರಮಾಣ ಪತ್ರ ಇದೆಯೆ ಎಂಬುದನ್ನು ಪರಿಶೀಲನೆ ಮಾಡಿಕೊಂಡಿರಬೇಕು. ಜೊತೆಗೆ ಕಡ್ಡಾಯವಾಗಿ ಬೈಕ್ ಮೇಲಿರುವ ಇರ್ವರು ಸಹ ಹೆಲ್ಮೇಟ್ ಧರಿಸಿರಲೇಬೇಕು. ಧರಿಸದಿದ್ದರೆ 500 ರೂ. ದಂಡ ಡಿಎಲ್ ಇರದಿದ್ದರೆ 1000 ರೂ. ಹಾಗೂ ಸಿಟ್ ಬೆಲ್ಟ್ ಇರದಿದ್ದರೆ 500 ರೂ. ಹಾಗೂ ಮಾಲಿನ್ಯ ಪ್ರಮಾಣ ಪತ್ರ ಇರದಿದ್ದರೆ 500 ರೂ. ದಂಡ ವಿಧಿಸಲಾಗುವುದು. ಹಾಗೂ ಒಂದು ಬೈಕ್ ಮೇಲೆ ಮೂವರು ಸವಾರರು ಪ್ರಮಾಣ ಮಾಡವುದು ಕಾನೂನಿನ ರಿತ್ಯ ಅಪರಾಧವಾಗಿದೆ ಅಲ್ಲದೆ ವೇಗವಾಗಿ ಓಡಿಸುವುದು ಯದ್ವ-ತದ್ವಾ ಓವರ ಟ್ರ್ಯಾಕ್ಕಿಂಗ್ ಮಾಡಿ ವಿನಾ ಕಾರಣ ಹಾರ್ನ್ ಹಾಕುವುದು ಎಂದೆಂದಿಗೂ ಮಾಡಕೂಡದು ಎಂದು ಸರ್ವ ವಿದ್ಯಾರ್ಥಿಗಳಿಗೆ ಕಿವಿ ಮಾತು ಹೇಳಿದರು.

ಪಿಎಸ್‍ಐ ಶಿವರಾಜ ಎ ಪಾಟೀಲ್ ಮಾತನಾಡಿ ಪ್ರತಿಯೊರ್ವ ವಿದ್ಯಾರ್ಥಿ/ವಿದ್ಯಾರ್ಥಿನಿಯರು ರಸ್ತೆಯಲ್ಲಿ ಚಲಿಸುವಾಗ ರಸ್ತೆ ಸುರಕ್ಷತೆಯ ಎಲ್ಲಾ ನಿಯಮಗಳನ್ನು ಪಾಲಿಸಿ ಚಿಹ್ನೆಗಳನ್ನು ಅರಿತು ಎಡಭಾಗದ ಕೊನೆಯಲ್ಲಿ ಸಾಗಬೇಕು. ಬೈಕ್ ಅಥವಾ ಸ್ಕೂಟಿಗಳ ಮೇಲೆ ಹೋಗುವಾಗ ಕಿವಿಗಳಿಗೆ ಬ್ಲೂಟುತ್, ಹೈಡ್ ಫೋನ್ ಮತ್ತು ಮೋಬೈಲ್ ಬಳಸಬಾರದು. ಜೋಡಿ ಬೈಕ್‍ಗಳಲ್ಲಿ ಮಾತನಾಡುತ್ತ ವಾಹನ ಚಲಿಸುವುದು ಜೀವಕ್ಕೆ ಅಪಾಯ ಅಲ್ಲದೆ ಅಪಘಾತಗಳು ಸಂಭವಿಸುವುದುಂಟು ಎಂಬುದನ್ನು ಅರಿತು ತಮ್ಮ ಹೋಣೆಗಾರಿಕೆಯಿಂದ ವಾಹನ ಚಲಿಸಬೇಕು ತಮ್ಮ ಪರಿವಾರದ ಸಭೆ ಸಮಾರಂಭಗಳಲ್ಲಿ ಹೆಲ್ಮೇಟ್‍ಗಳನ್ನು ಉಡುಗೋರೆಯಾಗಿ ನೀಡುವ ಪರಿಪಾತ ಹಾಕಿಕೊಳ್ಳಬೇಕು ಎಂದರು.

ವೇದಿಕೆಯ ಮೇಲೆ ಮೋಟಾರು ವಾಹನ ನಿರೀಕ್ಷಕ ಮೊಹ್ಮದ ಶರೀಫ್ ಶೇಕ್‍ಜಿ, ವೀರೇಂದ್ರ ಎಂ., ಕಾಲೇಜಿನ ಪ್ರಾಂಶುಪಾಲರು ಶ್ರೀಮತಿ ವಿಜಯಲಕ್ಷ್ಮೀ, ಭಾಗ್ಯವಂತಿ ಮೋಟಾರು ವಾಹನ ತರಬೇತಿ ಶಾಲೆಯ ಪ್ರಾಚಾರ್ಯರು ಶಿವರಾಜ ಜಮಾದಾರ ಖಾಜಾಪೂರ, ಪೋಲೀಸ್ ಸಿಬ್ಬಂಧಿ ಶಾಂತಕುಮಾರ ಬಿರಾದಾರ ಕೌಠಾ ಹಾಗೂ ವಸತಿ ಶಾಲೆಯ ಮಹಾವೀರ, ಶ್ರೀಕಾಂತ, ಅಜಯಕುಮಾರ, ತೌಸಿಫ್ ಮಿಯ್ಯಾ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.