18 ರಾಜ್ಯಗಳಲ್ಲಿ ರೂಪಾಂತರ ವೈರಸ್

ನವದೆಹಲಿ, ಮಾ. ೨೪- ರೂಪಾಂತರ ಕೊರೊನಾ ವೈರಸ್ ಭಾರತದಲ್ಲಿ ಹೆಚ್ಚಾಗುತ್ತಿದ್ದು ಪ್ರಸ್ತುತ ೧೮ ರಾಜ್ಯಗಳಲ್ಲಿ ರೂಪಾಂತರ ವೈರಸ್ ಕಂಡು ಬಂದಿರುವುದನ್ನು ಕೇಂದ್ರ ಆರೋಗ್ಯ ಇಲಾಖೆ ಖಚಿತ ಪಡಿಸಿದೆ.
ದೇಶದಲ್ಲಿ ೨ನೇ ಅಲೆ ಭೀತಿಯ ಬೆನ್ನಲ್ಲೇ ರೂಪಾಂತರ ವೈರಸ್ ಏರಿಕೆಯಾಗುತ್ತಿರುವುದು ಭೀತಿಗೆ ಕಾರಣವಾಗಿದೆ.
ನಿನ್ನೆ ವೇಳೆಗೆ ಭಾರತದಲ್ಲಿ ಕೊರೊನಾ ಸೋಂಕಿನಿಂದ ಮೃತಪಟ್ಟ ೨೭೫ ಪ್ರಕರಣಗಳು ದಾಖಲಾಗಿದ್ದವು. ಮಹಾರಾಷ್ಟ್ರದಲ್ಲಿನ ಕೊರೊನಾ ಸೋಂಕು ೪೭,೨೬೨ಕ್ಕೆ ಏರಿಕೆಯಾಗಿದೆ. ಆದರೆ ನಿರ್ದಿಷ್ಠವಾಗಿ ಎಷ್ಟು ಪ್ರಮಾಣದಲ್ಲಿ ಕಂಡು ಬಂದಿದೆ ಎನ್ನುವ ಮುಂದಿನ ದಿನಗಳಲ್ಲಿ ಕಂಡುಕೊಳ್ಳಲಾಗುವುದು ಎಂದು ಭಾರತ ಆರೋಗ್ಯ ಸಚಿವಾಲಯ ತಿಳಿಸಿದ್ದು, ಕಳೆದ ೨೪ ಗಂಟೆಗಳಲ್ಲಿ ಈ ಪ್ರಮಾಣದ ಸೋಂಕು ಏರಿಕೆಯಾಗಿರುವುದು ತೀವ್ರ ಆತಂಕ ಸೃಷ್ಟಿಸಿದೆ.
ಕೊರೊನಾ ವೈರಸ್‌ನಲ್ಲಿನ ಅನುವಂಶಿಯ ಸ್ಥಿತಿಗತಿಗಳು ಭಾರತದಲ್ಲಿ ಹೊಸ ರೂಪಾಂತರ ವೈರಸ್ ಹೆಚ್ಚಳವಾಗುತ್ತಿರುವುದನ್ನು ಸ್ಪಷ್ಟ ಪಡಿಸಿದೆ.
ಈ ರೂಪಾಂತರಗಳು ೧೫ ರಿಂದ ೨೦ ಮಾದರಿಗಳಲ್ಲಿ ಕಂಡು ಬಂದಿದೆ. ಭಾರತದಲ್ಲಿ ಹೊಸ ರೂಪಾಂತರ ಕೊರೊನಾ ವೈರಸ್‌ಗಳು ಕಂಡು ಬಂದಿದ್ದು, ಮಹಾರಾಷ್ಟ್ರದಲ್ಲಿ ಈ ರೂಪಾಂತರ ವೈರಸ್ ದ್ವಿಗುಣಗೊಂಡಿದೆ.
೨೦೨೦ರ ಡಿಸೆಂಬರ್‌ಗೆ ಹೋಲಿಸಿದರೆ, ಮಹಾರಾಷ್ಟ್ರ ಕೆಲವು ಪ್ರದೇಶಗಳಲ್ಲಿ ರೂಪಾಂತರ ವೈರಸ್ ಹೆಚ್ಚಳವಾಗಿರುವುದು ಕಂಡು ಬಂದಿದೆ. ಈ ಹಿಂದೆ ಕಂಡು ಬಂದಿದ್ದ ರೂಪಾಂತರ ವೈರಸ್‌ಗೆ ನೂತನ ವೈರಸ್ ಹೋಲಿಕೆಯಾಗಿರುವುದು ಆತಂಕಕ್ಕೆ ಕಾರಣವಾಗಿದೆ.
ಇಂಡಿಯನ್ ಕನ್ಸೋರ್ಟಿಮ್ ಆನ್ ಜಿನೋಮಿಕ್ಸ್ ಆರೋಗ್ಯ ಕುಟುಂಬ ಮತ್ತು ಕಲ್ಯಾಣ ಇಲಾಖೆ ಸ್ಥಾಪಿಸಿದ ೧೦ ರಾಷ್ಟ್ರೀಯ ಪ್ರಯೋಗಾಲಯದ ಒಂದು ಗುಂಪಾಗಿದ್ದು, ಇದು ಕೋವಿಡ್ ೧೯ ವೈರಸ್‌ಗಳ ಪ್ರಸರಣದ ಅನುವಂಶಿಯ ಅನುಕ್ರಮ ಮತ್ತು ವಿಶ್ಲೇಷಣೆಯನ್ನು ನಡೆಸುತ್ತಿದೆ. ಉಳಿದಂತೆ ಸಾಂಕ್ರಾಮಿಕ ರೋಗ ಶಾಸ್ತ್ರೀಯ ಪ್ರವೃತ್ತಿ ಕುರಿತಂತೆ ಅಧ್ಯಯನ ನಡೆಸುತ್ತಿದೆ.
ಮಾರ್ಚ್ ೨೬ ರಿಂದ ಏಪ್ರಿಲ್ ೪ ರವರೆಗೂ ಮಹಾರಾಷ್ಟ್ರದ ಕೆಲವು ಪ್ರಮುಖ ನಗರಗಳಲ್ಲಿ ಲಾಕ್‌ಡೌನ್ ಜಾರಿ ಮಾಡುವ ಸಾಧ್ಯತೆಯಿದೆ. ಈ ರೂಪಾಂತರ ವೈರಸ್‌ಗಳು ವೇಗವಾಗಿ ಬೆಳೆಯುತ್ತಿದ್ದು, ಹೆಚ್ಚು ಸೋಂಕು ಸೃಷ್ಟಿಸಿರುವ ಅಪಾಯವಿದೆ. ಈ ಹೊಸ ರೂಪಾಂತರಗಳು ಅಂದಾಜು ೧೫ ರಿಂದ ೨೦ ಮಾದರಿಗಳಲ್ಲಿ ಕಂಡು ಬಂದಿದೆ.
ಮಹಾರಾಷ್ಟ್ರದಲ್ಲಿ ಸಂಗ್ರಹಿಸಿರುವ ಮಾದರಿಯಲ್ಲಿ ಈ ವೈರಸ್‌ಗಳು ಹೆಚ್ಚಾಗಿ ಕಂಡು ಬರುತ್ತಿರುವುದು ಮುಂಬರುವ ದಿನಗಳಲ್ಲಿ ಲಾಕ್‌ಡೌನ್ ಜಾರಿ ಮಾಡುವ ಸಾಧ್ಯತೆಗಳನ್ನು ದೃಢಪಡಿಸಿದೆ.