18 ನೇ ವಾರ್ಡ್ ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿ ನರೇಶ್

ಬಳ್ಳಾರಿ, ಏ.08: ಈ ತಿಂಗಳ 27 ರಂದು ನಡೆಯುವ ಮಹಾ ನಗರ ಪಾಲಿಕೆ ಚುನಾವಣೆಯಲ್ಲಿ ನಗರದ 18 ನೇ ವಾರ್ಡಿನಿಂದ ಕಾಂಗ್ರೆಸ್ ಅಭ್ಯರ್ಥಿಯಾಗಿ ಸ್ಪರ್ಧಿಸಲು ನರೇಶ್ ಅವರು ಆಕಾಂಕ್ಷಿಯಾಗಿದ್ದಾರೆ.
ಬಿ.ಕಾಂ ಪದವಿ ಪಡೆದಿರುವ ಇವರು ಯುವ ಕಾಂಗ್ರೆಸ್ ಸದಸ್ಯರು ಮತ್ತು ತಮ್ಮ 20 ನೇ ವಯಸ್ಸಿನಿಂದ ಸಾಮಾಜಿಕ ಸೇವಾ ಕಾರ್ಯ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡವರಾಗಿದ್ದಾರೆ.
ವ್ಯಾಪಾರಸ್ಥರಾಗಿರುವ ಈ ಯುವಕ ಬಿಸಿಲಹಳ್ಳಿ ಮತ್ತು ಸುತ್ತ ಮುತ್ತಲ ಪ್ರದೇಶದಲ್ಲಿ ಜನರ ಸಮಸ್ಯೆಗಳಿಗೆ ಸ್ಪಂದಿಸುತ್ತ ಜನಮಾನಸದಲ್ಲಿದ್ದಾರೆ.
ಕರೋನಾ ಸಂಕಷ್ಟದ ಸಮಯದಲ್ಲಿ ಎರೆಡು ತಿಂಗಳುಗಳ ಕಾಲ ಬಡ ಜನತಗೆ ಊಟದ ವ್ಯವಸ್ಥೆ ಮಾಡಿ ಜನೋಪಕಾರಿಯಾಗಿದ್ದಾರೆ.
ನಗರದ ಅಭಿವೃದ್ಧಿ ಬಗ್ಗೆ ಕನಸು ಕಂಡಿರುವ ಇವರು ತಮ್ಮ ಸ್ನೇಹಿತ ವಿಠ್ಠಲ್ ಅವರೊಂದಿಗೆ ಅಮ್ಮ ಟ್ರಸ್ಟ್ ಮೂಲಕ ಐದು ರೂಪಾಯಿಗೆ ಒಂದರಂತೆ ಊಟವನ್ನು ಸಹ ಸರಬರಾಜು ಮಾಡಿದ್ದಾರೆ.
ಜನ ಸೇವೆಗಾಗಿ ಪಕ್ಷದ ಟಿಕೆಟ್ ನೀಡಬೇಕೆಂದು ವರಿಷ್ಟರಲ್ಲಿ ಮನವಿ ಮಾಡಿದ್ದಾರೆ.