18 ನೇ ವಾರ್ಡು ಹೈ ವೋಲ್ಟೇಜ್ ಕ್ಷೇತ್ರ ಬಿಸಿಲಹಳ್ಳಿಯಲ್ಲಿ ಬೀಡು ಬಿಟ್ಟ ಮಲ್ಲುಂಗಿ ರವೀಂದ್ರ ಬಾಬು

ಬಳ್ಳಾರಿ ಏ 25 : ನಗರದ 18 ನೇ ವಾರ್ಡು ಸಧ್ಯ ನಡೆಯುತ್ತಿರುವ ಇಲ್ಲಿನ ಮಹಾನಗರ ಪಾಲಿಕೆಯ ಚುನಾವಣೆಯಲ್ಲಿ ಹೈ ವೋಲ್ಟೇಜ್ ಕ್ಷೇತ್ರ ಎನ್ನುತ್ತಿದ್ದಾರೆ ನಗರದ ಜನತೆ.
ಇಲ್ಲಿ ನಗರದ ಶಾಸಕ, ರೆಡ್ಡಿ ಬಳಗದ ಎರಡನೇ ಹಂತದ ಕುಡಿ, ಮೊದಲ ಬಾರಿಗೆ ರಾಜಕೀಯಕ್ಕೆ ಕಾಲಿಟ್ಟು ಬಿಜೆಪಿ ಅಭ್ಯರ್ಥಿಯಾಗಿ ಕಣಕ್ಕಿಳಿದಿರುವುದರಿಂದ. ರಾಜಕೀಯದ ಮುಂದಿನ ಭವಿಷ್ಯಕ್ಕಾಗಿ ಹೇಗಾದರೂ ಮತದಾರರ ಮನವೊಲಿಸಿ ಮಗನನ್ನು ಆಯ್ಕೆ ಮಾಡಿಕೊಳ್ಳಲು ಶಾಸಕ ಗಾಲಿ ಸೋಮಶೇಖರ ರೆಡ್ಡಿ ಪ್ರಯತ್ನಿಸುತ್ತಿದ್ದರಾರೆ. ಅಷ್ಟೇ ಅಲ್ಲದೆ ಈ ವಾರ್ಡಿನಿಂದ ಈ ಹಿಂಧೆ ಗೆದ್ದು ಮೇಯರ್ ಆಗಿದ್ದ ಕೆ.ಬಸವರಾಜ್, ಕಳೆದ ಬಾರಿಯ ಬಿಎಸ್‍ಆರ್ ಅಭ್ಯರ್ಥಿ ಕೆ.ತಿಪ್ಪೆರುದ್ರ, ಬುಡಾ ಅಧ್ಯಕ್ಷ ದಮ್ಮೂರು ಶೇಖರ್ ಸೇರಿಂದತೆ ಮೊದಲಾದ ಮುಖಂಢರು ಟೊಂಕ ಕಟ್ಟಿಕೊಂಡು ಮುನ್ನಡೆದಿದ್ದಾರೆ.
ಇತ್ತ ಕೆಲ ಕಾರಣದಿಂದಲೇ, ಶಾಸಕರ ಪುತ್ರನ ವಿರುದ್ದ ನಗರದ ಕಾಟನ್, ರಿಯಲ್ ಎಸ್ಟೇಟ್ ಉದ್ಯಮಿ ಮುಲ್ಲಂಗಿ ರವೀಂದ್ರಬಾಬು ಸಹ ತಮ್ಮ ಮಗ ನಂದೀಶ್ ಅವರನ್ನು ಕಾಂಗ್ರೆಸ್ ಅಭ್ಯರ್ಥಿಯಾಗಿ ಕಣಕ್ಕಿಳಿಸಿದ್ದು. ಯಾವುದೇ ಪರಿಸ್ಥಿತಿಯಲ್ಲಿ ಸೋಲು ಒಪ್ಪಿಕೊಳ್ಳಬಾರದೆಂದು ದಿಟ್ಟ ಹೋರಾಟ ನಡೆಸಿದ್ದಾರೆ.
ಕಳೆದ ನಾಲ್ಕು ದಿನಗಳಿಂದ ವಾರ್ಡಿನಲ್ಲಿ 2 ಸಾವಿರಕ್ಕೂ ಹೆಚ್ಚು ಮತದಾರರನ್ನು ಹೊಂದಿರುವ ಬಿಸಿಹಳ್ಳಿಯಲ್ಲಿ ಬೀಡು ಬಿಟ್ಟು, ಬಹುತೇಕ ಸಮಯವನ್ನು ಇಲ್ಲಿಯೇ ಕಳೆಯುತ್ತಿದ್ದಾರೆ. ನಿನ್ನೆ ಸಂಜೆ ಬಿಸಲಹಳ್ಳಿಗೆ ಭೇಟಿ ನೀಡಿದ ಸಂಜೆವಾಣಿಯೊಂದಿಗೆ ಮಾತನಾಡಿದ ರವೀಂದ್ರಬಾಬು ಅವರು. ಚುನಾವಣೆ ಅಂದಮೇಲೆ ಹೋರಾಟ ಮಾಡಲೇ ಬೇಕು. ಅದು ನ್ಯಾಯಯುತವಾಗಿರಬೇಕು. ಆದರೆ ಇಂದು ರಾಜಕೀಯ ಮಾಡುವವರು ಮತ್ತು ಮತದಾರರು ಇದರಿಂದ ದೂರವಾಗಿರುವುದರಿಂದ ಹಲವಾರು ರೀತಿಯಲ್ಲಿ ಮತದಾರರನ್ನು ಸಂತೈಸಬೇಕಿದೆಂದು ಚುನಾವಣೆಯ ಗುಟ್ಟನ್ನು ಬಿಚ್ಚಿಟ್ಟರು.
ಶಾಸಕರ ಮಗ ಇಲ್ಲಿ ಸ್ಪರ್ಧೆ ಮಾಡಿರುವುದರಿಂದ. ನಾವು ಇಲ್ಲಿ ಏನು ಮಾಡಲು ಹೋದರೂ ಪೊಲೀಸರಿಂದ ಕಿರುಕುಳ ಕೊಡಿಸುವ ಕೆಲಸ ಆಗುತ್ತಿದೆ. ಇದು ಆಡಳಿತದ ದುರುಪಯೋಗ ಎಂದು ಆರೋಪಿಸಿದರು. ಅಂತಿಮವಾಗಿ ಪ್ರಯತ್ನ ನಮ್ಮದು ಫಲ ದೇವರಿಗೆ ಬಿಟ್ಟಿದ್ದು ಎಂದರು.