
(ಸಂಜೆವಾಣಿ ವಾರ್ತೆ)
ಬಳ್ಳಾರಿ, ಮೇ.10: ನಗರದ 18 ನೇ ವಾರ್ಡಿನ ಸತ್ಯನಾರಾಯಣ ಪೇಟೆ, ಡಿಎಆರ್ ಮನೆ ಮನೆಗೆ ತೆರಳಿ ನಿನ್ನೆ ಸಂಜೆ ಕೆ.ಆರ್.ಪಿ ಪಕ್ಷದ ನಗರ ಅಭ್ಯರ್ಥಿ ಲಕ್ಷ್ಮೀ ಅರುಣ ಜನಾರ್ಧನರೆಡ್ಡಿ ಪ್ರಚಾರ ನಡೆಸಿದರು
ಈ ಸಂದರ್ಭದಲ್ಲಿ ಮತದಾರರು ಜನಾರ್ಧನರೆಡ್ಡಿ ಅವರ ಕಾಲದ ಅಭಿವೃದ್ಧಿ ಬಗ್ಗೆ ಮಾತನಾಡಿದ ಪ್ರತಿ ಮಾತು ನನಗೆ ತೋರಿದ ಪ್ರೀತಿಗೆ ಚಿರ ಋಣಿಯಾಗಿದ್ದೇನೆಂದರು.
ಮುಖಂಡರಾದ ಪಾಲ್ ರೆಡ್ಡಿ, ಮಲ್ಲಿಕಾರ್ಜುನ ರೆಡ್ಡಿ, ರಾಕೇಶ್, ಮುರಳಿ, ವೆಂಕಟೇಶ, ಶ್ರೀನಿವಾಸ, ಸುನೀತ ಮೊದಲಾದವರು ಪ್ರಚಾರದಲ್ಲಿ ಪಾಲ್ಗೊಂಡಿದ್ದರು.