18 ನೇಯ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನ ವಿಜಯಪುರ ನಗರದಲ್ಲಿ: ವಾಲೀಕಾರ

ವಿಜಯಪುರ :ಮಾ.5: 18ನೇಯ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನ ವಿಜಯಪುರ ನಗರದ ಕಂದಗಲ್ಲ ಶ್ರೀ ಹಣಮಂತರಾಯ ರಂಗಮಂದಿರದಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾಧ್ಯಕ್ಷ ಹಾಸಿಂಪೀರ ವಾಲೀಕಾರ ತಿಳಿಸಿದ್ದಾರೆ.

ಶುಕ್ರವಾರ ಸಂಜೆ ನಡೆದ ಜಿಲ್ಲಾ ಕಾರ್ಯಕಾರಣಿ ಸಭೆಯಲ್ಲಿ ನಿರ್ಣಯಿಸಲಾಯಿತು. ಈ ಹಿಂದೆ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನ ಸಿಂದಗಿಯಲ್ಲಿ ಆಚರಿಸಲು ಪದಾಧಿಕಾರಿಗಳ ಮೊದಲಿನ ಆಸಕ್ತಿ ಇಲ್ಲದೆ ಇರುವುದರಿಂದ 18ನೇ ಕನ್ನಡ ಸಾಹಿತ್ಯ ಸಮ್ಮೇಳನ ವಿಜಯಪುರ ನಗರದಲ್ಲಿ ಆಚರಿಸುತ್ತಿದ್ದೇವೆ

ಸಮ್ಮೇಳನಲ್ಲಿ ಅರ್ಥಪೂರ್ಣ ಗೋಷ್ಠಿಗಳನ್ನು ಏರ್ಪಡಿಸುವದು.ಉಪಹಾರ ಹಾಗು ಊಟದ ವ್ಯವಸ್ಥೆ ಕಲ್ಪಿಸುವದು ಮುಂತಾದ ಸಲಹೆಗಳನ್ನು ಸಭೆಯಲ್ಲಿ ನೀಡಿದರು.

ಪೆÇ್ರ ಮಹಾದೇವ ರೆಬಿನಾಳ ಪೆÇ್ರ ಮಲ್ಲಿಕಾರ್ಜುನ ಅವಟಿ ಡಾ : ಸಂಗಮೇಶ ಮೇತ್ರಿ ಸಿದ್ರಾಮ ಲಕ್ಕುಂಡಿಮಠ ದಿಲಾವರ ಖಾಜಿ ಸಂಗೀತಾ ಮಠಪತಿ ಅಭಿಷೇಕ ಚಕ್ರವರ್ತಿ ಡಾ ಸುಜಾತಾ ಚಲವಾದಿ. ಡಿ ಬಿ ನಾಯಕ ರಾಜೇಸಾಬ ಶಿವನಗುತ್ತಿ ಸುಖದೇವಿ ಅಲಬಾಳಮಠ ಕಮಲಾ ಮುರಾಳ ಮೋಹನ ಮೇಟಿ ಅಂಬಾದಾಸ ಜೋಶಿ ಉಪಸ್ಥಿತರಿದ್ದರು.