18 ಅಭ್ಯರ್ಥಿಗಳ 26 ನಾಮಪತ್ರ ಕ್ರಮಬದ್ಧಹಾಗೂ 5 ಜನರ ನಾಮಪತ್ರ ತಿರಸ್ಕøತ

ಕಲಬುರಗಿ:ಏ.20:ಗುಲಬರ್ಗಾ ಲೋಕಸಭಾ (ಪ.ಜಾ. ಮೀಸಲು) ಕ್ಷೇತ್ರಕ್ಕೆ 2024ರ ಮೇ 7ರಂದು ನಡೆಯಲಿರುವ ಚುನಾವಣೆಗೆ ಶನಿವಾರ ನಾಮಪತ್ರ ಪರಿಶೀಲನಾ ಕಾರ್ಯ ನಡೆದಿದ್ದು, 18 ಅಭ್ಯರ್ಥಿಗಳ 26 ನಾಮಪತ್ರಗಳು ಕ್ರಮಬದ್ಧವಾಗಿವೆ. ಉಳಿದಂತೆ 5 ಅಭ್ಯರ್ಥಿಗಳು ಒಳಗೊಂಡಂತೆ ಒಟ್ಟಾರೆ 10 ನಾಮಪತ್ರಗಳು ತಿರಸ್ಕøತವಾಗಿವೆ ಎಂದು ಕಲಬುರಗಿ ಜಿಲ್ಲಾ ಚುನಾವಣಾಧಿಕಾರಿ ಬಿ. ಫೌಜಿಯಾ ತರನ್ನುಮ್ ಅವರು ತಿಳಿಸಿದ್ದಾರೆ.

ನಾಮಪತ್ರ ಪುರಸ್ಕøತಗೊಂಡ ಅಭ್ಯರ್ಥಿಗಳ ವಿವರ ಇಂತಿದೆ. ಇಂಡಿಯನ್ ನ್ಯಾಷನಲ್ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ರಾಧಾಕೃಷ್ಣ ದೊಡ್ಡಮನಿ, ಭಾರತೀಯ ಜನತಾ ಪಾರ್ಟಿಯ ಅಭ್ಯರ್ಥಿ ಉಮೇಶ ಗೋಪಾಲದೇವ, ಭಾರತೀಯ ಜನ ಸಾಮ್ರಾಟ್ ಪಾರ್ಟಿ ಅಭ್ಯರ್ಥಿ ತಾರಾಬಾಯಿ ವಿಶ್ವೇಶ್ವರಯ್ಯ ಬೋವಿ, ಸೋಷಾಲಿಸ್ಟ್ ಯೂನಿಟಿ ಸೆಂಟರ್ ಆಫ್ ಇಂಡಿಯಾ (ಕಮ್ಯುನಿಸ್ಟ್) ಅಭ್ಯರ್ಥಿ ಶರಣಬಸಪ್ಪ ಮಲ್ಲಿಕಾಜಪ್ಪ, ಪ್ರಹಾರ್ ಜನಶಕ್ತಿ ಪಾರ್ಟಿ ಅಭ್ಯರ್ಥಿ ವಿಜಯಕುಮಾರ ಭೀಮಶಾ, ಉತ್ತಮ ಪ್ರಜಾಕೀಯ ಪಾರ್ಟಿ ಅಭ್ಯರ್ಥಿ ನಾಗೇಂದ್ರ ಎಚ್, ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷದ ಅಭ್ಯರ್ಥಿ ವಿಜಯ ಗೋವಿಂದ ಜಾಧವ, ಭಾರತೀಯ ಬಹುಜನ ಕ್ರಾಂತಿ ದಳ ಅಭ್ಯರ್ಥಿ ರಾಜಕುಮಾರ ಗೋಪಿನಾಥ, ಬಹುಜನ್ ಸಮಾಜ ಪಾರ್ಟಿ ಅಭ್ಯರ್ಥಿ ಹುಚ್ಚಪ್ಪ ಬಸಪ್ಪ, ಸ್ವತಂತ್ರ ಅಭ್ಯರ್ಥಿಗಳಾದ ರಮೇಶ ಭೀಮಸಿಂಗ್, ವಿಲಾಸ ಎಂ. ಕಣಮಸ್ಕರ್, ಕಾಶಿನಾಥ ಸಾಯಬಣ್ಣ ಪಾಪಿ, ಆನಂದ ಸಿದ್ದಣ್ಣ, ಶರಣಬಸಪ್ಪ ಪೀರಪ್ಪ, ಶರಣಪ್ಪ ಮರಲಿಂಗಪ್ಪ, ವೆಂಕಟೇಶ್ವರರಾವ್ ಅಮೃತರಾವ್, ಜ್ಯೋತಿ ರಮೇಶ ಹಾಗೂ ಸುಂದರ ಮೇಘು ಅವರ ನಾಮಪತ್ರಗಳು ಪುರಸ್ಕøಗೊಂಡಿವೆ.

ತಿರಸ್ಕøತ ಅಭ್ಯರ್ಥಿಗಳ ವಿವರ ಇಂತಿದೆ. ಭಾರತೀಯ ಪೀಪಲ್ಸ್ ಪಾರ್ಟಿ ಅಭ್ಯರ್ಥಿ ಶಂಕರ ಲಿಂಬಾಜಿ ಜಾಧವ, ರಾಷ್ಟ್ರೀಯ ಸಮಾಜ ಪಕ್ಷ ಅಭ್ಯರ್ಥಿ ಶಿವಪುತ್ರ ಮರೆಪ್ಪ, ಸ್ವತಂತ್ರ ಅಭ್ಯರ್ಥಿಗಳಾದ ಶಶಿಧರ ಬಸವರಾಜ, ರವೀಂದ್ರ ಕಲ್ಲಯ್ಯ ಸ್ವಾಮಿ ಹಾಗೂ ಹುಸೇನಪ್ಪ ಬಂದೆಪ್ಪ ಅವರ ನಾಮಪತ್ರಗಳು ತಿರಸ್ಕøತಗೊಂಡಿವೆ.

ನಾಮಪತ್ರ ಸಲ್ಲಿಕೆಗೆ ಕೊನೆಯ ದಿನವಾಗಿದ್ದ ಏಪ್ರಿಲ್ 19 ರವರೆಗೆ ಒಟ್ಟಾರೆ 23 ಅಭ್ಯರ್ಥಿಗಳಿಂದ 36 ನಾಮಪತ್ರಗಳು ಸಲ್ಲಿಕೆಯಾಗಿದ್ದವು. ನಾಮಪತ್ರಗಳನ್ನು ಹಿಂದಕ್ಕೆ ಪಡೆಯಲು ಏಪ್ರಿಲ್ 22 ಕೊನೆಯ ದಿನವಾಗಿದೆ.