18 ಅಭ್ಯರ್ಥಿಗಳಿಂದ 23 ನಾಮಪತ್ರಗಳ ಸಲ್ಲಿಕೆ

ಬೀದರ, ಏ. 20: ಕರ್ನಾಟಕ ವಿಧಾನ ಸಭಾ ಸಾರ್ವತ್ರಿಕ ಚುನಾವಣೆ – 2023 ರ ಬೀದರ ಜಿಲ್ಲೆಯ 06 ವಿಧಾನ ಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಏಳನೆ ದಿನವಾದ ಏಪ್ರಿಲ್ 19 ರಂದು ಹದಿನೆಂಟು ಅಭ್ಯರ್ಥಿಗಳಿಂದ ಇಪ್ಪತ್ತಮೂರು ನಾಮ ಪತ್ರ ಸಲ್ಲಿಕೆಯಾಗಿವೆ. 47-ಬಸವಕಲ್ಯಾಣ ವಿಧಾನ ಸಭಾ ಕ್ಷೇತ್ರದಿಂದ ಆಮ್ ಆದ್ಮಿ ಪಕ್ಷದಿಂದ ದೀಪಕ ಮಾಲಗಾರ, ಭಾರತೀಯ ರಿಪಬ್ಲಿಕ್ ಪಕ್ಷದಿಂದ ರಾಜೇಶ್ವರಿ ವರ್ಧನ, ಕರ್ನಾಟಕ ಸರ್ವೋದಯ ಪಕ್ಷದಿಂದ ವೀರಾರೆಡ್ಡಿ ಬಸವರೆಡ್ಡಿ ನಾಮಪತ್ರ ಸಲ್ಲಿಸಿದ್ದಾರೆ. 48-ಹುಮನ್ನಾಬಾದ ವಿಧಾನ ಸಭಾ ಕ್ಷೇತ್ರದಿಂದ ಕೆ.ಆರ್.ಪಿ.ಪಿ ಪಕ್ಷದಿಂದ ಪರವೇಜ ಪಾಟೀಲ್ ನಾಮಪತ್ರ ಸಲ್ಲಿಸಿದರು. 49-ಬೀದರ ದಕ್ಷಿಣ ವಿಧಾನ ಸಭಾ ಕ್ಷೇತ್ರದಿಂದ ಪಕ್ಷೇತರ ಅಭ್ಯರ್ಥಿಯಾಗಿ ಚಂದ್ರಸಿಂಗ್, ಕಲ್ಯಾಣ ರಾಜ್ಯ ಪ್ರಗತಿ ಪಕ್ಷದಿಂದ ಭೀಮಾಶಂಕರ ಪೋಲಿಸ್ ಪಾಟೀಲ್, ಭಾರತೀಯ ಜನತಾ ಪಕ್ಷದಿಂದ ಡಾ.ಶೈಲೇಂದ್ರ ಬೆಲ್ದಾಳೆ ನಾಮಪತ್ರ ಸಲ್ಲಿಸಿದರು. ಹಾಗೂ ಕಾಂಗ್ರೇಸ್ ಪಕ್ಷದಿಂದ ಅಶೋಕ್ ಖೇಣಿ ಎರಡು ನಾಮಪತ್ರ ಸಲ್ಲಿಸಿದ್ದಾರೆ. 50-ಬೀದರ ವಿಧಾನ ಸಭಾ ಕ್ಷೇತ್ರದಿಂದ ಸಾರ್ವಜನಿಕ ಆದರ್ಶ ಸೇನಾದಿಂದ ಅಶೋಕ ಕರಂಜಿ, ಆಮ್ ಆದ್ಮಿ ಪಕ್ಷದಿಂದ ಮಹಮ್ಮದ್ ಗುಲಾಮ ಅಲಿ, ಪಕ್ಷೇತರ ಅಭ್ಯರ್ಥಿಯಾಗಿ ರಮೇಶ ಪಾಸ್ವಾನ ನಾಮಪತ್ರ ಸಲ್ಲಿಸಿದರು. ಮತ್ತು ಕಾಂಗ್ರೇಸ್ ಪಕ್ಷದಿಂದ ರಹೀಮ್ ಖಾನ್ ಹಾಗೂ ಜಾತ್ಯತೀತ ಜನತಾದಳ ಪಕ್ಷದಿಂದ ಸೂರ್ಯಕಾಂತ ನಾಗಮಾರಪಳ್ಳಿ ಅವರು ತಲಾ ಎರಡು ನಾಮಪತ್ರ ಸಲ್ಲಿದ್ದಾರೆ. 51-ಭಾಲ್ಕಿ ವಿಧಾನ ಸಭಾ ಕ್ಷೇತ್ರದಿಂದ ಆಮ್ ಆದ್ಮಿ ಪಕ್ಷದಿಂದ ತುಕಾರಾಮ ನಾರಾಯಣ, ಕಾಂಗ್ರೇಸ್ ಪಕ್ಷದಿಂದ ಈಶ್ಚರ ಭೀಮಣ್ಣಾ ಖಂಡ್ರೆ, ಬನಸಿಲಾಲ ಸ್ವತಂತ್ರ ಅಭ್ಯರ್ಥಿಯಾಗಿ ತಮ್ಮ ಉಮೇದುವಾರಿಕೆ ಸಲ್ಲಿಸಿದರು. 52-ಔರಾದ ವಿಧಾನ ಸಭಾ ಕ್ಷೇತ್ರದಿಂದ ಜಾತ್ಯತೀತ ಜನತಾದಳ ಪಕ್ಷದಿಂದ ಜೈಸಿಂಗ್ ಧನಸಿಂಗ, ಪಕ್ಷೇತರ ಅಭ್ಯರ್ಥಿಯಾಗಿ ಸಂತೋಷಕುಮಾರ ನಾಮಪತ್ರ ಸಲ್ಲಿಸಿದರೆ, ಕಾಂಗ್ರೇಸ್ ಪಕ್ಷದಿಂದ ಡಾ.ಸಿಂಧೆ ಭೀಮಸೇನರಾವ ಎರಡು ನಾಮಪತ್ರ ಸಲ್ಲಿಸಿದ್ದಾರೆ. ಎಂದು ಜಿಲ್ಲಾಧಿಕಾರಿಗಳ ಕಛೇರಿ ಪ್ರಕಟಣೆಯಲ್ಲಿ ತಿಳಿಸಿದೆ.